ಶಿಗ್ಗಾವ್

ತಡಸ ಗ್ರಾಪಂ ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಮನವಿ

ತಡಸ ಗ್ರಾಪಂ ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಮನವಿ
ಉಪತಹಶೀಲ್ದಾರ ಬಸವರಾಜ ಹೊಂಕಣ್ಣವರರಿಗೆ ಹಾಗೂ ತಡಸ ಪಂಚಾಯತ್ ಪಿ.ಡಿ.ಓ ಬಸವನಗೌಡ ಪಾಟೀಲ ಅವರಿಗೆ ಕರವೇ ತಾಲೂಕಾ ಘಟಕ ವತಿಯ

ಶಿಗ್ಗಾವಿ 3: ತಡಸ ಗ್ರಾಮ ಪಂಚಾಯತಿ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ರೀತಿಯ ದಾಖಲಾತಿಗಳನ್ನು ಸಮಂಜಸವಾಗಿ ಪೂರೈಸದೆ ಸತಾಯಿಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿ  ಉಪತಹಶೀಲ್ದಾರ ಬಸವರಾಜ ಹೊಂಕಣ್ಣವರರಿಗೆ ಹಾಗೂ ತಡಸ ಪಂಚಾಯತ್ ಪಿಡಿಓ ಬಸವನಗೌಡ ಪಾಟೀಲ ಅವರಿಗೆ  ಕರವೇ ತಾಲೂಕಾ ಘಟಕ ವತಿಯಿಂದ ಮನವಿ ಅರ್ಪಿಸಲಾಯಿತು. 

ಮನವಿ ಅರ್ಪಿಸಿ ಮಾತನಾಡಿದ ಕರವೇ ತಾಲೂಕ ಅಧ್ಯಕ್ಷ ಸಂತೋಷಗೌಡ ಪಾಟೀಲ ತಾಲೂಕಿನ ತಡಸ ಗ್ರಾಮಪಂಚಾಯತನಲ್ಲಿ ಇ ಸ್ವತ್ತು ಕಡತ ವಿಲೇವಾರಿ ಮಾಡುವ ಕಾರ್ಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವದು, ಹಾಗೂ 7-8 ತಿಂಗಳಗಳ ಕಾಲ ಕಡತಗಳನ್ನು ಕಾರ್ಯಾಲಯದಲ್ಲಿ ಇಟ್ಟುಕೊಳ್ಳುವದು ಜೊತೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ದಾಖಲಾತಿಗಳನ್ನು ಮತ್ತು ಈ ಸ್ವತ್ತು ಮಾಡಲು ನೀಡಿರುವ ಹಲವಾರು ಅರ್ಜಿಗಳು ಪಡೆದು ಅರ್ಜಿದಾರರಿಗೆ ಮೇಲಾಧಿಕಾರಿಗಳ ಹತ್ತಿರ ಹೋಗಲು ಹೇಳುವುದು ಮತ್ತು ಸರಿಯಾದ ದಾಖಲಾತಿಗಳನ್ನು ಪಾಲಿಸದೇ ಬೇಜವಾಬ್ದಾರಿ ಉತ್ತರ ನೀಡುವುದು, ಹಿರಿಯ ಅಧಿಕಾರಿಗಳ ಕಡೆ ಬೆರಳು ಮಾಡುವದು, ಈ ರೀತಿ ನಡೆದುಕೊಳ್ಳುವದರಿಂದ ಸಾಮಾನ್ಯ ಜನರ ಕೆಲಸ ಕಾರ್ಯಗಳು ಆಗುತ್ತಿಲ್ಲ. 

ಅಲ್ಲದೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಶವಗಾರ ಕೊಠಡಿಯ ಕಂಪೌಂಡ ಗೋಡೆಯನ್ನು ಎತ್ತರಿಸುವ ಕುರಿತು ಹಲವಾರು ಭಾರಿ ಮೌಖಿಕವಾಗಿ ವಿನಂತಿಸಿದರೂ ಸಹಿತ ಅಧಿಕಾರಿಗಳು ಕ್ಯಾರೆ ಎನ್ನದೆ ಕುಳಿತಿದ್ದಾರೆ. ಅಭಿವೃದ್ಧಿ ಅಧಿಕಾರಿಗಳು ಕಾನೂನು ಸುವ್ಯವಸ್ಥೆಯಿಂದ ಕೆಲಸ ಕಾರ್ಯಗಳನ್ನು ಮಾಡಲು ಅವರಿಗೆ ಹಿರಿಯ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆಗಳು ಬಗೆಹರಿಸದೇ ಹೋದಲ್ಲಿ ಸುಧಾರಿಸದೇ ಇದ್ದರೆ, ನಾವು ಕರವೇ ತಡಸ ಗ್ರಾಮ ಘಟಕ ವತಿಯಿಂದ ರಸ್ತೆ ತಡೆಹಿಡಿದು ಉಗ್ರ ಹೋರಾಟ ಮಾಡುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಿದರು. 

ತಡಸ್ ಗ್ರಾಮ ಘಟಕದ ಅಧ್ಯಕ್ಷ ಶಂಕ್ರಪ್ಪಾ ಎಸ್ ಬಡಿಗೇರ, ಮುಖಂಡರಾದ ರಾಯೇಸಾಬ ಕೊಲ್ಲಾಪುರ,  ರಾಣಪ್ಪಾ ವಾಟಕರ, ಮೈನುಸಾಬ ಹಂಚಿನಾಳ, ಮಂಜುನಾಥ ಬಡಿಗೇರ, ನಾಗಪ್ಪಾ ಚವ್ಹಾಣ, ಭಾಷಾಸಾಬ ಹುಲಗೂರ, ಕಲಂದರಸಾಬ ಹುಲಗೂರ, ಮಂಜುನಾಥ ಬಡಿಗೇರ, ಧಾವಲಸಾಬ ಸಿಕಂದರ, ಗಂಗಾಧರ ಬೆಂಡಲಗಟ್ಟಿ, ಸಾಧಿಕ ಎಲಿಗಾರ, ಬಾಬುಲಾಲ ತಾಸೇವಾಲೇ, ಅನ್ವರಸಾಬ ಕೊಲ್ಲಾಪುರ, ವಿನಾಯಕ ಬಡಿಗೇರ, ವಿರೇಶ ಕಂಬಾರ, ಗೌಸ್ ಅಗಡಿ, ನಿಂಗಪ್ಪಾ ಹಡಪದ, ಅಮೀನಭಾಷಾ ಇಂಗಳಗಿ, ವಿಠ್ಠಲ ಇಂಗೋಲಿ ಆಸಿಮ್ ಕಲಗಟಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

ಸುದ್ದಿ ಓದಿ