ಶಿಗ್ಗಾವ್

ಅಮಾನತು ರದ್ದುಗೊಳಿಸಿ ಯತಾಸ್ಥಿತಿ ಕರ್ತವ್ಯ ನೀಡುವಂತೆ ಒತ್ತಾಯ

ಅಮಾನತು ರದ್ದುಗೊಳಿಸಿ ಯತಾಸ್ಥಿತಿ ಕರ್ತವ್ಯ ನೀಡುವಂತೆ ಒತ್ತಾಯ

ಶಿಗ್ಗಾವಿ 24: ವರ್ಗಾವಣೆಯ ವಜಾ ಅಮಾನತು ಹಾಗು ಪೋಲಿಸ್ ಪ್ರಕರಣಗಳನ್ನು ರದ್ದುಗೊಳಿಸಿ ಮುಷ್ಕರ ಪೂರ್ವದ ಸ್ಥಳಗಳಿಗೆ ಯತಾಸ್ಥಿತಿ ಕರ್ತವ್ಯ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಸಾರಿಗೆ ಸಂಸ್ಥೆಯ ನೌಕರರು ಮುಖ್ಯಮಂತ್ರಿ  ಬೊಮ್ಮಾಯಿವರೆಗೆ ಶಿಗ್ಗಾವಿ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಅವರ ಮೂಲಕ ಶಿಗ್ಗಾವಿಯಲ್ಲಿ ಮನವಿ ಅರ್ಪಿಸಲಾಯಿತು.  

ಕರ್ನಾಟಕ ರಾಜ್ಯ ನೌಕರರ ಕೂಟದ ರಾಜ್ಯ ಮುಖ್ಯ ಸಂಘಟನಾ ಕಾರ್ಯದರ್ಶಿ ಶಂಭುಲಿಂಗಯ್ಯ ಚಿಕ್ಕಮಠ, ಹಾಗೂ ವಾಯುವ್ಯ ವಿಭಾಗದ ಸಂಘಟನಾ ಕಾರ್ಯದರ್ಶಿ ಮೇಘರಾಜ ಶಿಗ್ಗಾವಿಯಲ್ಲಿ ಮನವಿ ಅರ​‍್ಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಸರ್ಕಾರಿ ನೌಕರರಿಗೂ ಹಾಗೂ ಸಾರಿಗೆ ನೌಕರರಿಗೆ ಇರುವ ವೇತನ ತಾರತಮ್ಯ ನಿವಾರಿಸುವುದು  ಮತ್ತು ಲಾಕಡೌನ್ ಅವಧಿಯ ವೇತನವನ್ನ ನೀಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ ಎಂದರು ಅಲ್ಲದೆ ಸಾರಿಗೆ ಸಂಸ್ಥೆಯ ನೌಕರರು ದಶಕಗಳಿಂದ ವೇತನ ಸೇರಿದಂತೆ ಹಲವಾರು ಸವಲತ್ತುಗಳನ್ನು ವಂಚಿತರಾಗಿರುವ ಕಾರಣ ಕಳೆದ 4 ವರ್ಷಗಳಿಂದ ನಮ್ಮ ಸಾರಿಗೆ ಕೂಟವು ಶಾಂತಿಯುತವಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿತ್ತು, ಸಾಧಕ ಬಾಧಕ ತಿಳಿಸುವಂತೆ ಸರ್ಕಾರ ಸಮೀತಿ ಮಾಡಿದ ಕಾರಣಕ್ಕೆ ರಾಜ್ಯಾದ್ಯಂತ ಮುಖ್ಯಮಂತ್ರಿಗಳ ಮತ್ತು ಸಾರಿಗೆ ಸಚಿವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದೆವುವೇತನ ಪರಿಷ್ಕರಣೆ ಸಮಯದಲ್ಲಿ ಮುಷ್ಕರವನ್ನು ಮಾಡುವುದನ್ನು ಕೈಬಿಟ್ಟು ಶಾಶ್ವತ ಪರಿಹಾರಕ್ಕೆ ಹೋರಾಟ ಮಾಡುತ್ತಿದ್ದ ನಾವು ಅನಿವಾರ್ಯ ಕಾರಣಗಳಿಂದ ಮುಷ್ಕರಕ್ಕೆ ಹೋಗಿದ್ದೇವು ಬೇಡಿಕ ಈಡೆರಿಕೆವಷ್ಟೆ ನಮ್ಮ ಉದ್ದೇಶವಾಗಿತ್ತೇ ವಿನಹ ಬೇರೆ ಯಾವುದೇ ಉದ್ದೇಶವಿರಲಿಲ್ಲ ಆದ್ದರಿಂದ ಕೂಡಲೇ ವರ್ಗಾವಣೆಯ ವಜಾ ಅಮಾನತು ಹಾಗು ಪೋಲಿಸ್ ಪ್ರಕರಣಗಳನ್ನು ರದ್ದುಗೊಳಿಸಿ ಮುಷ್ಕರ ಪೂರ್ವದ ಸ್ಥಳಗಳಿಗೆ ಯತಾಸ್ಥಿತಿ ಕರ್ತವ್ಯ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ ಎಂದರು. 


ಸುದ್ದಿ ಓದಿ