ನಿವೇಶನ, ವಸತಿ ಸೌಲಭ್ಯ ನೀಡುವಂತೆ ಒತ್ತಾಯಿಸಿ ಮನವಿ
ಹಗರಿಬೊಮ್ಮನಹಳ್ಳಿ ನವೆಂಬರ್ 03: ಪಟ್ಟಣದಲ್ಲಿ ವಾಸವಿರುವ ನಿವೇಶನ ಮತ್ತು ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಿತಿಯು ಮಂಗಳವಾರ ಪ್ರತಿಭಟನೆ ಮಾಡಿ ತಹಶೀಲ್ದಾರ್ ಶಿವಕುಮಾರ ಗೌಡಗೆ ಮನವಿ ಸಲ್ಲಿಸಿತು.
ಪ್ರತಿಭಟನೆ ವೇಳೆ ತಾಲೂಕು ಸಮಿತಿಯ ಕಾರ್ಯದರ್ಶಿ ಜಿ.ಸರೋಜ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳಿಂದ ಪಟ್ಟಣದಲ್ಲಿ ನಿವೇಶನ ರಹಿತ ಬಡವರಿಗೆ ಒಂದು ನಿವೇಶನ ನೀಡಿಲ್ಲ. ಈ ಬಗ್ಗೆ ನಮ್ಮ ಸಂಘಟನೆಯು ಸ್ಥಳೀಯ ಜನಪ್ರತಿನಿಧಿಗಳಿಗೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಹತ್ತು ಹಲವು ಬಾರಿ ಮನವಿ ಸಲ್ಲಿಸಿದೆ ಮತ್ತು ನಿವೇಶನ ಮತ್ತು ವಸತಿ ರಹಿತರಿಂದ ಸದರಿ ಸೌಲಭ್ಯ ನೀಡುವಂತೆ ಅರ್ಜಿಗಳನ್ನೂ ಸಹ ಸಲ್ಲಿಸಿದೆ. ಇಲ್ಲಿಯವರೆಗೂ ಅಧಿಕಾರದಲ್ಲಿದ್ದ ಮತ್ತು ಅಧಿಕಾರದಲ್ಲಿರುವ ಜನ ಪ್ರತಿನಿಧಿಗಳಾಗಲಿ, ಸಂಬಂಧಿಸಿದ ಇಲಾಖೆ ಅಥವಾ ಜಿಲ್ಲಾ ಆಡಳಿತವಾಗಲಿ ಸರ್ಕಾರದಿಂದ ನಿವೇಶನಗಳನ್ನು ನೀಡುವ ಯಾವ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಸಿದ್ದಾರೆ ಕೊಡಲೇ ಸಂಭಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ನಿವೇಶನಗಳನ್ನು ನೀಡುವಂತೆ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಸಮಿತಿಯ ಖಚಾಂಜಿ ಎಸ್.ಹುಲಿಗೆಮ್ಮ, ಬಿ.ರೇಣುಕಾ, ಪಾಯಲ್ಬಾನು, ಕೆ.ಮಾರೆಕ್ಕ, ಗಂಗಮ್ಮ, ಉಮಾದೇವಿ, ಉಮಾ, ಲಕ್ಷೀ, ಆಯಿಷಾ, ಭಾಗ್ಯಮ್ಮ ಸೇರಿದಂತೆ ಇನ್ನು ಮುಂತದವರು ಇದ್ದರು.