ಸ್ನಾತಕೋತ್ತರ ಪದವಿ ಪರೀಕ್ಷೆಗಳ ಮುಂದೂಡಿಕೆ ಮನವಿ
ಬಳ್ಳಾರಿ 19: ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ)ನ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಂIಆSಔ ವಿದ್ಯಾರ್ಥಿ ಸಂಘಟನೆ ವತಿಯಿಂದ ನಿಯೋಗದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೋ. ಹೇಮಣ್ಣ ಸರ್ ಅವರಿಗೆ ಮನವಿ ಪತ್ರ ಸಲ್ಲಸಿಲಾಯಿತು.
ಇದೇ ಏಪ್ರೀಲ್ 20ರಿಂದ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಆದರೆ ಪ್ರಸ್ತುತ ಹಲವು ದಿನಗಳಿಂದ ಏSಖಖಿಅ ಬಸ್ ನೌಕರರು ಮುಷ್ಕರದಲ್ಲಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. ಕಾಲೇಜಿನ ಬಹಳಷ್ಟು ವಿದ್ಯಾರ್ಥಿಗಳು ಹಳ್ಳಿಗಳಿಂದ ಬರುತ್ತಿದ್ದು, ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯಿಂದ ಪರೀಕ್ಷೆಗೆ ಹಾಜರು ಆಗುವುದಿಲ್ಲ.
ಅದೇ ರೀತಿ ಇನ್ನೊಂದು ಕಡೆ ಭೀಕರವಾಗಿ ಹರಡುತ್ತಿರುವ ಕೊರೊನಾ ಎರಡನೇ ಅಲೆಯಿಂದಾಗಿ ಪ್ರತಿದಿನವು ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಪಾಸಿಟಿವ್ ಕೇಸುಗಳು ಪತ್ತೆಯಾಗುತ್ತಿದ್ದು, ಈ ಹಿನ್ನೆಲಿಯಲ್ಲಿ ಹಲವು ದಿನಗಳಿಂದ ವಿದ್ಯಾರ್ಥಿ ನಿಲಯಗಳೂ ಕೂಡ ಮುಚ್ಚಲ್ಪಟ್ಟಿವೆ. ಈ ಪರಿಸ್ಥಿತಿಯಲ್ಲಿ ಬಹುತೇಕ ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಮುಂದುಡಾಲಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತಾದೃಷ್ಠಿಯಿಂದ ಈ ಕೂಡÉಲೇ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಂIಆSಔ ಜಿಲ್ಲಾ ಸೇಕ್ರೆಟರಿಯಟ್ ಸದಸ್ಯ ಕೆ. ಈರಣ್ಣ ಮನವಿ ಮಾಡಿಕೊಂಡರು.
ವಿದ್ಯಾರ್ಥಿಗಳ ಹಿತಾದೃಷ್ಠಿಯಿಂದ ಈ ಕೂಡಲೇ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡತ್ತೇವೆ ಎಂದು ವಿದ್ಯಾರ್ಥಿಗಳಿಗೆ ಸುತ್ತೋಲೆ ಹೊರಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಮಲ್ಲಿ, ಅನುಷ, ನಂದಿನಿ, ಬಿಂದು, ಅನಂತ್ ಕುಮಾರ್, ಕಿರಣ್ ಮತ್ತಿತರರು ಭಾಗವಹಿಸಿದ್ದರು.