ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮನವಿ
ಹೊಸಪೇಟೆ 03: ಹೊಸಪೇಟೆ ನಗರದಲ್ಲಿರುವ ಜಂಬುನಾಥ ಗುಡ್ಡದಲ್ಲಿರುವ ಹಾಸ್ಟಲ್‍ನಲ್ಲಿ ಸುಮಾರು 350-400 ವಿದ್ಯಾರ್ಥಿಗಳಿದ್ದಾರೆ. ಇನ್ನೂ ವಿದ್ಯಾರ್ಥಿಗಳ ನೋಂದಣಿಯಾಗುವ ಪ್ರಕ್ರಿಯೆ ಜಾರಿಯಲ್ಲಿದ್ದು ನೂರಾರು ವಿದ್ಯಾರ್ಥಿಗಳು ನೋಂದಣಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿದೆ. ಈ ಹಾಸ್ಟಲ್‍ನ ವಿದ್ಯಾರ್ಥಿಗಳು ನಗರದ ವಿ.ಎನ್.ಸಿ. ಕಾಲೇಜ್, ಶಂಕರ್ ಆನಂದ್ ಸಿಂಗ್ ಕಾಲೇಜು, ಪಿ.ಡಿ.ಐ.ಟಿ ಇಂಜಿನೀಯರಿಂಗ್ ಕಾಲೇಜು, ಸಪ್ತಗಿರಿ ಪ್ಯಾರಾ ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಮತ್ತಿತರೆ ಕಾಲೇಜುಗಳಿಗೆ ಹೋಗುತ್ತಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಕಾಲೇಜುಗಳ ಸಮಯಕ್ಕೆ ತಂಕ್ಕಂತೆ ಬಸ್ ಇಲ್ಲದಿರುವುದರಿಂದ ನೂರಾರು ವಿದ್ಯಾರ್ಥಿಗಳು ಪ್ರತಿದಿನ ಎರಡು-ಮೂರು ತರಗತಿಗಳಿಗೆ ಹಾಜರಾಗಲಾಗದೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.