ರೈತರಿಗೆ ಜೋಡಿ ಎತ್ತು ಯೋಜನೆಗೆ ಆಗ್ರಹಿಸಿ ಮನವಿ
ಶಿಗ್ಗಾವಿ 29: ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಜೋಡಿ ಎತ್ತು ಯೋಜನೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಮನವಿ ರಾಜ್ಯದ ಪಶು ಸಂಗೋಪನಾ ಸಚಿವರಿಗೆ ರವಿವಾರ ಅರ್ಪಿಸಿಲಾಯಿತು.
ರವಿವಾರ ತಾಲೂಕಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಪಶು ಸಂಗೋಪನಾ ಸಚಿವರಾದ ಪ್ರಭು ಚವಾಣ್ ಅವರಿಗೆ ಮನವಿ ಅರ್ಪಿಸಿರುವ ಕರವೇ ಪದಾಧಿಕಾರಿಗಳು, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕಳೆದ ಇಪ್ಪತ್ತು ವರ್ಷಗಳಿಂದ ರಾಜ್ಯದ ರೈತರ ಆರ್ಥಿಕ ಪರಿಸ್ಥಿತಿಯು ಚಿಂತಾಜನಕವಾಗಿದ್ದು ಅವರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಹಾಗೂ ಆರ್ಥಿಕ ಸಂಕಷ್ಟದಿಂದ ಹೊರ ಬರಲು ರಾಜ್ಯದ ರೈತರಿಗೆ ಜೋಡೆತ್ತುಗಳು ಯೋಜನೆಯ ಅವಶ್ಯಕವಾಗಿದೆ, ಕಳೆದ ಹಲವಾರು ದಶಕಗಳಿಂದ ರೈತರು ಭೂಮಿಗೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕವನ್ನು ಬಳಸುತ್ತಿರುವುದರಿಂದ ಭೂಮಿಯ ಫಲವತ್ತತೆಯು ಹಾಳಾಗಿ ಹೋಗಿರುತ್ತದೆ, ಜಾನು ವಾರುಗಳ ಸಂಖ್ಯೆಯೂ ಕಡಿಮೆಯಿಂದಾಗಿ ಹಲವು ದಶಕಗಳಿಂದ ರೈತರುಭೂಮಿಗೆ ತಿಪ್ಪೆಗೊಬ್ಬರವಿಲ್ಲದ ಕಾರಣ ಭೂಮಿಯಲ್ಲಿನ ಜೀವಸತ್ವಗಳು ಅಪಾರಪ್ರಮಾಣದಲ್ಲಿ ಹಾನಿಯಾಗುತ್ತಿದೆ, ರೈತರಿಗೆ ಕೃಷಿ ಇಲಾಖೆಯಿಂದ ಈಗಾಗಲೇ ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದ ರೂಪದಲ್ಲಿ ನೀಡಲಾಗುತ್ತಿದೆ, ಈ ಪ್ರಮಾಣವನ್ನು ತಕ್ಕಮಟ್ಟಿಗೆ ಕಡಿಮೆಗೊಳಿಸಿ ರೈತರಿಗೆ ಜೋಡಿ ಎತ್ತುಗಳ ಯೋಜನೆ ಜಾರಿಗೆ ತಂದರೆ ಕೃಷಿ ಭೂಮಿಯ ಉಳುಮೆಯ ಜೊತೆಗೆ ಅಪಾರ ಪ್ರಮಾಣದ ಗೊಬ್ಬರವು ಸಹ ರೈತರಿಗೆ ದೊರೆಯುತ್ತದೆ ಕಾರಣ ಸಚಿವರು ಮನವಿಯನ್ನು ರಾಜ್ಯಸರ್ಕಾರದ ಗಮನಕ್ಕೆ ತಂದು ಯೋಜನೆ ಅನುಷ್ಟಾನಗೊಳಿಸಲು ಸಹಕರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯ ಉಪಾದ್ಯಕ್ಷ ರಾಮು ತಳವಾರ, ಜಿಲ್ಲಾ ಉಪಾಧ್ಯಕ್ಷ ಬಸಲಿಂಗಪ್ಪ ಮಲ್ಲೂರ, ಶಿಗ್ಗಾವಿ ತಾಲೂಕಾಧ್ಯಕ್ಷ ಶಂಭುಲಿಂಗಪ್ಪ ಕೆರಿ, ತಾಲೂಕ ಕಾರ್ಯಾಧ್ಯಕ್ಷ ಭರಮಪ್ಪ ದೊಡ್ಡಮನಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾಲತೇಶ ಕಾಳಿ, ತಾಲೂಕ ಕಾರ್ಯದರ್ಶಿ ವೀರೇಶ ಕರಡಿ ಸೇರಿದಂತೆ ಇನ್ನುಳಿದ ಪದಾಧಿಕಾರಿಗಳು ಇದ್ದರು.