ಶಿಗ್ಗಾವ್

ಗುತ್ತಿಗೆದಾರರು ಒಗ್ಗಟ್ಟು ಪ್ರದರ್ಶಿಸಿದಲ್ಲಿ ಎಂಥ ಸಮಸ್ಯೆಗೂ ಪರಿಹಾರ ಸಾಧ್ಯ: ಮಣ್ಣಣ್ಣವರ

ಗುತ್ತಿಗೆದಾರರು ಒಗ್ಗಟ್ಟು ಪ್ರದರ್ಶಿಸಿದಲ್ಲಿ ಎಂಥ ಸಮಸ್ಯೆಗೂ ಪರಿಹಾರ ಸಾಧ್ಯ: ಮಣ್ಣಣ್ಣವರ

ಶಿಗ್ಗಾವಿ 10: ಸಂಘಕ್ಕೆ ಪದಾಧಿಕಾರಿ ಅಥವಾ ಪ್ರತಿನಿಧಿಯನ್ನು ಆಯ್ಕೆ ಮಾಡುವಾಗ ಗುತ್ತಿಗೆದಾರರು ಒಗ್ಗಟ್ಟು ಪ್ರದರ್ಶಿಸಿದಲ್ಲಿ ಯಾವುದೇ ಸಮಸ್ಯೆಯಿದ್ದರೂ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ರಾಜ್ಯ ಸಂಘದ ಕೇಂದ್ರ ಸಮಿತಿಯ ಸದಸ್ಯ ಮಂಜುನಾಥ್ ಮಣ್ಣಣ್ಣವರ ಅಭಿಪ್ರಾಯ ಪಟ್ಟರು. 

ಶಿಗ್ಗಾವ್ ಪಟ್ಟಣದ ಹೆಸ್ಕಾಂ ಇಲಾಖೆ ಗಣೇಶ ದೇವಸ್ಥಾನದಲ್ಲಿ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಸಭೆಯಲ್ಲಿ ಮಾತನಾಡಿದ ಅವರು ಸಂಘದ ಸಾಮಾನ್ಯ ಸದಸ್ಯರು ಸಂಘಟನೆ ಬಗ್ಗೆ ಯೋಚಿಸಬೇಕು ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಸಂಘಕ್ಕೆ ಪದಾಧಿಕಾರಿ ಆಗುವುದು ಒಂದು ಪ್ರಕ್ರಿಯೆ ಅಷ್ಟೇ ಆದರೆ ಅದರ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಹಾವೇರಿ ಜಿಲ್ಲೆಯಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘ ಒಗ್ಗಟ್ಟು ಪ್ರದರ್ಶಿಸಿದ ಫಲವಾಗಿ ಸಂಘದ ಸದಸ್ಯರ ಹಲವು ಸಮಸ್ಯೆಗಳ ಪರಿಹಾರ ಹಾಗೂ ಜಿಲ್ಲೆಗೆ ಸ್ವಂತ ಕಟ್ಟಡ ನಿರ್ಮಾಣವಾಗಿದೆ. 5 ಲಕ್ಷಗಳ ವರೆಗಿನ ಟೆಂಡರ್ ರಹಿತ ಕಾಮಗಾರಿಗಳ ನಿರ್ವಹಣೆಯ ಅಧಿಕಾರ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಅಧೀನದಲ್ಲಿದ್ದು ಪ್ರತಿಯೊಂದು ತುರ್ತು ಕೆಲಸ ಕಾರ್ಯಗಳಿಗೆ ಹುಬ್ಬಳ್ಳಿಗೆ ಹೆಸ್ಕಾಂ ಸ್ಥಾಪಕ ನಿರ್ದೇಶಕರ ಬಳಿ ಹೋಗಿ ಅನುಮತಿ ಪಡೆಯುವುದು ಕಷ್ಟದ ಕೆಲಸವಾಗಿದೆ. ಕಾಮಗಾರಿ ನೀಡುವ ಅಧಿಕಾರವನ್ನು ಮೊದಲಿನಂತೆ ಜಿಲ್ಲೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ವಹಿಸುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಶೇಷ ಅಧಿಕಾರಿಗಳ ಮುಖಾಂತರ  ಸಂಘದಿಂದ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಸಮಸ್ಯೆ ಪರಿಹರಿಸುವ ವಿಶ್ವಾಸವಿದೆ. ಒಂದೊಮ್ಮೆ ನಿರ್ಲಕ್ಷ ಮಾಡಿದಲ್ಲಿ ಒಗ್ಗಟ್ಟು ಪ್ರದರ್ಶಿಸಿ ಕೆಲಸ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ಇದಕ್ಕೆ ಗುತ್ತಿಗೆದಾರರು ಸನ್ನದ್ಧರಾಗಿ ಎಂದು ಮನವಿ ಮಾಡಿದರು.  

ಸಂಘದ ಕೆಲಸಗಳಿಗೆ ಸಮಯ ಮೀಸಲಿಡುವ ಹಾಗೂ ಸ್ಪಂದನೆ ಮನೋಭಾವ ಇರುವ ವ್ಯಕ್ತಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈವರೆಗೂ ನನ್ನನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ತೋರಿರುವ ಒಗ್ಗಟ್ಟನ್ನು ಪುನಹ ರಾಜ್ಯ ಸಂಘಕ್ಕೆ ಪ್ರದರ್ಶಿಸುವಂತೆ ಗುತ್ತಿಗೆದಾರರಲ್ಲಿ ಮನವಿ ಮಾಡಿಕೊಂಡರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರುದ್ರ​‍್ಪ ಅಂಗಡಿ ಹಾವೇರಿ ತಾಲೂಕಾಧ್ಯಕ್ಷ ನಾಗಭೂಷಣ್ ಹಿರೇಮಠ, ಉಪಾಧ್ಯಕ್ಷ ಅಬ್ದುಲ್ ಹರಪನಹಳ್ಳಿ, ಚಂದ್ರಶೇಖರ ಕೋಪರ್ಡೆ, ಕೆ ಟಿ ಪಾಟೀಲ್, ಸೂರಜ್, ನಾಗನಗೌಡ ಪಾಟೀಲ್, ಮಲ್ಲಪ್ಪ ಹೊನ್ನಳ್ಳಿ ಹಾವೇರಿ ತಾಲೂಕಾಧ್ಯಕ್ಷ ಗಂಗಾಧರ ಕರಬಸಣ್ಣವರ, ಫಕ್ಕಿರೇಶ್ ಹತ್ತಿಮತ್ತೂರು, ಹಾನಗಲ್ ಅಧ್ಯಕ್ಷ ಎ ಜಿ ನಾಯರ್, ಜಿಲ್ಲಾ ಪ್ರತಿನಿಧಿ ಉಮೇದುವಾರ ಶಿವಯೋಗಿ ಮಲ್ಲಿಗಾರ ಹಾಗೂ ವಿವಿಧ ತಾಲೂಕಿನ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ