ಬಳ್ಳಾರಿ

ಸೇವಾ ಮನೋಭಾವನೆಯ ಇನ್ನೊಂದು ಹೆಸರೇ ಸ್ಕೌಟ್ಸ್‌ ಮತ್ತು ಗೈಡ್ಸ್‌: ಆಯುಕ್ತ ಸಿಂಧ್ಯಾ

ಸೇವಾ ಮನೋಭಾವನೆಯ ಇನ್ನೊಂದು ಹೆಸರೇ ಸ್ಕೌಟ್ಸ್‌ ಮತ್ತು ಗೈಡ್ಸ್‌: ಆಯುಕ್ತ ಸಿಂಧ್ಯಾ

ಬಳ್ಳಾರಿ 15: ಸೇವಾ ಮನೋಭಾವನೆಯಿಂದ ಶ್ರಮಿಸುತ್ತಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯು ತ್ಯಾಗದ ಮತ್ತೊಂದು ಶಬ್ಧವಾಗಿದೆ. ಸೇವಾ ಮನೋಭಾವನೆಯನ್ನು ರೂಪಿಸುವುದೇ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಮುಖ್ಯ ಉದ್ದೇಶವಾಗಿದೆ ಎಂದು ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕದ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್‌.ಸಿಂಧ್ಯ ಅವರು ಹೇಳಿದರು. 

ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ಜಿಪಂನ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಶಾಲೆಯ ಅಭಿವೃದ್ಧಿ ಎಂದರೆ ಕಟ್ಟಡಗಳಲ್ಲ,ಬದಲಾಗಿ ಅಲ್ಲಿನ ಶಿಕ್ಷಣ ಗುಣಮಟ್ಟದ್ದಾಗಿರಬೇಕು ಅಂದಾಗ ಮಾತ್ರ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ. ಶಿಕ್ಷಣದ ಜೊತೆಗೆ ಸನ್ನಡತೆ,ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವನೆ ನೀಡಿದಲ್ಲಿ ಮಾತ್ರ ವಿದ್ಯಾರ್ಥಿಗಳು ಸುಸಂಸ್ಕೃತರಾಗುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಶಿಸ್ತಿನ ಶಿಕ್ಷಣ ನೀಡಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯು ಶ್ರಮಿಸುತ್ತಿದೆ ಎಂದು ತಿಳಿಸಿದರು. 

ಅದೇ ರೀತಿಯಾಗಿ ಬಳ್ಳಾರಿಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಗೆ ತನ್ನದೇ ಆದ ಇತಿಹಾಸ ಹೊಂದಿದ್ದು, ಯಾವುದೇ ಒಂದು ಸಂಘಟನೆಯಲ್ಲಿ ಟೀಮ್‌ವರ್ಕ್‌ ಇಲ್ಲ ಎಂದರೆ ಅದು ಸಫಲವಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಒಂದು ಯುನಿಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಯುನಿಟ್ ಲೀಡರ​‍್ಸ‌ಗಳು ಈಗಾಗಲೇ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. 

ಕೋವಿಡ್‌-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ತರಬೇತುದಾರರು ಸೇವೆಗೆ ನೀಡಿದ ಸಮಯ ಅಮೂಲ್ಯವಾದುದು. ಪಡೆದಂತಹ ತರಬೇತಿ ರಿಫ್ರೇಶ್ ಆಗುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಶಿಬಿರ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಲಿವೆ ಎಂದರು. 

ಒಟ್ಟಾರೆಯಾಗಿ ಮನುಷ್ಯರೆಲ್ಲರೂ ಒಂದೇ ಎನ್ನುವ ಅಮೃತ ಬೀಜ ಬಿತ್ತಿದಾಗ ಮಾತ್ರ ಮಕ್ಕಳು ಅಭಿವೃದ್ಧಿ ಹೊಂದಲು ಸಾಧ್ಯ ಮತ್ತು ಮನುಷ್ಯರು ವಯೋಧರ್ಮಕ್ಕೆ ತಕ್ಕಂತೆ ಬದಲಾವಣೆ ಹೊಂದಬೇಕು ಹಾಗೂ ಸೇವಾಮನೋಭಾವನೆಯನ್ನು ರೂಪಿಸುವುದೇ ಈ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಂದಾನಪ್ಪ ವಡಗೇರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಈ ಸಂದರ್ಭದಲ್ಲಿ ಬಳ್ಳಾರಿ ಕೇಂದ್ರಸ್ಥಾನದ ಕಲ್ಯಾಣ ಕರ್ನಾಟಕ ಹಾಗೂ ರೇಂಜರಿಂಗ್ ವಿಭಾಗದ ಉಸ್ತುವಾರಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಮಲ್ಲೇಶ್ವರಿ ಜುಜಾರೆ, ಬಳ್ಳಾರಿ ಪೂರ್ವವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ಧಲಿಂಗಮೂರ್ತಿ, ಪಶ್ಚಿಮ ವಲಯ ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟೇಶ್ ರಾಮಚಂದ್ರ​‍್ಪ, ಸಂಡೂರು ಕ್ಷೇತ್ರಶಿಕ್ಷಣಾಧಿಕಾರಿ ಮೈಲೇಶ್ ಬೇವೂರು, ಸಿರುಗುಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಡಿ ಭಜಂತ್ರಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ರೆಹಮತ್ ಉಲ್ಲಾ, ಷಣ್ಮುಖಪ್ಪ, ಎರಿ​‍್ರಸ್ವಾಮಿ, ವೀರನಗೌಡ, ಜಿಲ್ಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಉಪಾಧ್ಯಕ್ಷರಾದ ಎಂ.ಟಿ.ಮಲ್ಲೇಶಪ್ಪ, ಜಿಲ್ಲಾ ಕಾರ್ಯದರ್ಶಿ ಎಸ್‌.ವಿಜಯಸಿಂಹ, ಜಿಲ್ಲಾ ಖಜಾಂಚಿ ವಿ.ಪ್ರಭಾಕರ್, ಜಿಲ್ಲಾ ತರಬೇತಿ ಆಯುಕ್ತರಾದ ಜಯಶ್ರೀ ಜೋಷಿ, ನಾಗರಾಜ, ತಾಲೂಕು ಕಾರ್ಯದರ್ಶಿಗಳಾದ ಜಿ.ಎಸ್‌.ಸೋಮಪ್ಪ, ಚಂದ್ರಯ್ಯ ಹಿರೇಮಠದ್, ನಟರಾಜ ಸ್ವಾಮಿ, ಜಿಲ್ಲಾ ಸಂಘಟಕರಾದ ಮೆಹಬೂಬ್ ಭಾಷ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ರೋವರ​‍್ಸ‌ ಮತ್ತು ರೇಂಜರ​‍್ಸ‌ ತರಬೇತುದಾರರು ಉಪಸ್ಥಿತರಿದ್ದರು. 


ಸುದ್ದಿ ಓದಿ