ಬಳ್ಳಾರಿ

ಸಿಡಿಬಂಡಿ ರಥೋತ್ಸವ ಪ್ರಯುಕ್ತ ಅನ್ನದಾನ ಕಾರ್ಯಕ್ರಮ

ಸಿಡಿಬಂಡಿ ರಥೋತ್ಸವ ಪ್ರಯುಕ್ತ ಅನ್ನದಾನ ಕಾರ್ಯಕ್ರಮ

ಬಳ್ಳಾರಿ 23: ನಗರದ ಆರಾಧ್ಯ ದೇವತೆ ಶ್ರೀ ದುರ್ಗಮ್ಮದೇವಿ ಸಿಡಿಬಂಡಿ ರಥೋತ್ಸವದ ಪ್ರಯುಕ್ತ ಮಂಗಳವಾರ ಮುಂಜಾನೆ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಪ್ರಜಾಶಕ್ತಿ ಸಮಿತಿವತಿಯಿಂದ ನೆರೆದ ಭಕ್ತರಿಗೆ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಕಳೆದ ಎಂಟು ವರ್ಷಗಳಿಂದ ದೇವಿಯ ರಥೋತ್ಸವ ದಿನದಂದು ಅನ್ನದಾನ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ ಚಂದ್ರಶೇಖರ್ ತಿಳಿಸಿದರು. ಮತ್ತು  ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎರಡೂ ಕ್ವಿಂಟಾಲ್ ಅಕ್ಕಿ ಸೇರಿದಂತೆ ಮೊಸರು ಮತ್ತು ಇತರೆ ಆಹಗಾರ ಪದಾರ್ಥಗಳಿಂದ ಬಳಸಿ ಟೋಮೋಟೊ ಚಿತ್ರನ್ನ ಮತ್ತು ಮೊಸರನ್ನ ಮಾಡಿ ಬಡಿಸಲಾಯಿತು ಎಂದರು

ಸಿಡಿಬಂಡಿ ಸಂದರ್ಭವಾಗಿ ನಗರದ ಸುತ್ತ ಮುತ್ತಲ ಗ್ರಾಮಸ್ಥರಲ್ಲದೆ ಅಕ್ಕ ಪಕ್ಕದ ಜೆಲ್ಲೆಯಿಂದ ಮತ್ತು ಆಂಧ್ರಾ ಪ್ರದೇಶದಿಂದಲೂ ಸಹ ಸೇರಿದಂತೆ ಭಕ್ತರು ಬಂದು ದೇವಿಯ ದರ್ಶನ ಪಡೆದುಕೊಂಡರು. ಸಂಜೆ ನಾಲ್ಕು ಗಂಟೆಯವರೆಗೂ ಅನ್ನದಾನ ಕಾರ್ಯಕ್ರಮ ನಡೆಸಲಾಯಿತು. ಇದಕ್ಕೂ ಮುಂಚೆ ನಗರದ ಕೆರೆ ಪ್ರದೇಶದಲ್ಲಿನ ಅಕುಲ ಚಲುಮಯ್ಯ ಬೀದಿಯಿಂದ ಸುಮಾರು ಒಂಬತ್ತು ಅಡಿ ಹೂವಿನ ಹಾರವನ್ನು ಮೆರವಣಿಗೆಯಲ್ಲಿ ತಂದು ದೇವಿಗೆ ಅಲಂಕರಿಸಿದರು. ಈ ಸಂದರ್ಭದಲ್ಲಿ ಪ್ರಜಾಶಕ್ತಿಯ ಪದಾಧಿಕಾರಿಗಳಾದ ಮರಿಸ್ವಾಮಿ, ಸೀನಾ, ಬಸವ, ಹನಮಂತು, ವೆಂಕಟೇಶ್, ಬಾಲು ರವಿಕುಮಾರ್ ಸೇರಿದಂತೆ ಹಲವಾರು ಭಕ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ