ಅರುಣಾ ನರೇಂದ್ರಗೆ ಅನ್ಮೋಲ್ ರತ್ನ ಪ್ರಶಸ್ತಿ
ಕೊಪ್ಪಳ 16: ಪಕ್ಕದ ವಿಜಯನಗರ ಜಿಲ್ಲೆಯ ಹೊಸಪೇಟೆ ಅನ್ಮೋಲ್ ಜಿಯಾ ಟ್ರಸ್ಟ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವು ಸಹ ಕೊಡ ಮಾಡುವ ಪ್ರತಿಷ್ಠಿತ ಅನ್ಮೋಲ್ರತ್ನ-2021 ಸಾಲಿನ ಪ್ರಶ್ತಿಗೆ ಕೊಪ್ಪಳದ ಮಹಿಳಾ ಸಾಹಿತಿ ಅರುಣಾ ನರೇಂದ್ರ ಪಾಟೀಲ್ರವರು ಆಯ್ಕೆಗೊಂಡಿದ್ದಾರೆ ಎಂದು ಟ್ರಸ್ಟಿನ ಅಧ್ಯಕ್ಷ ಎಂ.ಎ. ವಲಿಸಾಹೇಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸಪೇಟೆ ನಗರದ ಮೆಹಬೂಬ ನಗರದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಅನ್ಮೋಲ್ ಸುಪರ್ ಮಾರ್ಕೆಟ್ ಬಳಿ ದಿ. 21 ನೇ ಗುರುವಾರ ಬೆಳಿಗ್ಗೆ 10 ಗಂಟೆಗೆ ಜರುಗುವ ಅನ್ಮೋಲ್ ಉತ್ಸವದಲ್ಲಿ ಅರುಣಾ ನರೇಂದ್ರರವರಿಗೆ ಸದರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಸಾಮಾಜಿಕ ಸಾಹೀತೀಕ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಅನ್ಮೋಲ್ ರತ್ನ ಪ್ರಶಸ್ತಿ ಪ್ರದಾನ ಲಾಗುವುದೆಂದು ಸಂಘಟಕರು ತಿಳಿಸಿದ್ದಾರೆ. ಅರುಣಾ ನರೇಂದ್ರರವರಿಗೆ ಅನ್ಮೋಲ್ ರತ್ನ ಪ್ರಶಸ್ತಿ ಲಭಿಸಿರುವುದಕ್ಕೆ ಕೊಪ್ಪಳ ಜಿಲ್ಲೆಯ ವಿವಿಧ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
______________