ಅಂದರ ಅಥ್ಲೆಟಿಕ್ ಚಾಂಪಿಯನ್ ಶಿಫ್ : ಸ್ನೇಹ ದೀಪ ವಿದ್ಯಾರ್ಥಿಗಳ ಸಾಧನೆ
ರಾಣೇಬೆನ್ನೂರು ಡಿ 22- ನವದೆಹಲಿಯಲ್ಲಿ ಇತ್ತೀಚಿಗೆ 22ನೇ ಭಾರತೀಯ ಅಂದರ ಅಥ್ಲೆಟಿಕ್ ಚಾಂಪಿಯನ್ಶಿಪ್ ಕ್ರೀಡಾಕೂಟವು ನಡೆಯಿತು. ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ನಗರದ ಸ್ನೇಹ ದೀಪ ಅಂದ ಅಂಗವಿಕಲರ ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಅಪ್ರತಿಮ ಸಾಧನೆ ಮೆರೆದು,ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ದೇಶದಾದ್ಯಂತ 500ಕ್ಕೂ ಹೆಚ್ಚು ಅಂದ ಕ್ರೀಡಾಪಟುಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಸ್ನೇಹ ದೀಪ ವಿದ್ಯಾರ್ಥಿನಿ, ಶಿಗ್ಗಾವಿ ತಾಲೂಕಿನ ಶಿಶುವಿನಹಾಳ ಗ್ರಾಮದ ಗಂಗವ್ವ ನೀಲಪ್ಪ ಅವರು 200 ಮೀಟರ್ ಓಟ, ಮತ್ತು400+100 ಮೀಟರ್ ರಿಲೇ ಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಇನ್ನುಳಿದಂತೆ ಡಿಸ್ಕಸ್, ಜಾವೆಲಿನ್, ಕಥ್ರೋದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ನಾಲ್ಕು ಪದಕಗಳನ್ನು ಗೆದ್ದು ಮತ್ತು ಟಿ -13 ವಿಭಾಗದಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್ ಶಿಪ್ ಪಡೆದಿದ್ದಾರೆ. ಯಶಸ್ವಿ ಕ್ರೀಡಾಕೂಟ ನೆರವೇರಿಸಿ ನಗರಕ್ಕೆ ಆಗಮಿಸಿದ, ಅವರನ್ನು ರೈಲ್ವೆ ನಿಲ್ದಾಣದಲ್ಲಿ ಗಣ್ಯರು ಬರಮಾಡಿಕೊಂಡು ಅವರನ್ನು ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾ ಬಸವರಾಜ ಕೇಲಗಾರ, ಡಾ ಸಂಜಯ್ ನಾಯಕ್, ಸುಧೀರ್ ಕುರುವತ್ತಿ, ಜಿ.ಜಿ. ಹೊಟ್ಟಿಗೌಡ್ರ, ವಸಂತ ಹುಲ್ಲತ್ತಿ, ವಿಜಯಲಕ್ಷ್ಮಿ ಮುಂಡಾಸದ, ಧಾನಿಗಳಾದ ಜಯಪ್ಪ ಅಡಗಟ್ಟಿ ಸೇರಿದಂತೆ ಧರ್ಮದರ್ಶಿ ಕೆ.ಜಿ.ಮೋಹನ್ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಕ್ರೀಡಾಪಟುಗಳಿಗೆ ಅಭಿನಂದಿಸಿ ಸ್ವಾಗತಿಸಿದರು.