2000 ವರ್ಷಗಳ ಇತಿಹಾಸವಿರುವ ಪ್ರಾಚೀನ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ “ಕಪ್ಪಿಂಗ್ ಥೆರಪಿ”
ಕಪ್ಪಿಂಗ್ ಥೆರಪಿ ಇದು ಪ್ರಾಚೀನ ಚೈನಿಸ್ ಚಿಕಿತ್ಸಾ ಪದ್ಧತಿಯಾಗಿದ್ದು, ಪರ್ಯಾಯ ಓಷಧದ ಒಂದು ರೂಪವಾಗಿದೆ. ಅಂದಾಜು 2000 ವರ್ಷಗಳ ಇತಿಹಾಸವಿರುವ ಈ ಚಿಕಿತ್ಸೆಯು ಮುಖ್ಯವಾಗಿ ಏಷ್ಯಾ, ಪೂರ್ವ ಯುರೋಪ ಮಧ್ಯ ಪ್ರಾಚ್ಯ ಮತ್ತು ಲ್ಯಾಟೀನ್ ಅಮೇರಿಕದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಪ್ರಗತಿ ಚಕ್ರದಲ್ಲಿ ಮುಂದುವರೆದಂತೆ ಈ ಚಿಕಿತ್ಸೆಯೂ ಕೂಡ ಹೊಸ ಅನ್ವೇಶಿತ ಆಧುನಿಕತೆಯನ್ನು ಕಂಡುಕೊಂಡಿರುವದು ಕಂಡುಬರುತ್ತದೆ.
ಕಪ್ಪಿಂಗ್ ಥೆರಪಿಯನ್ನು ಸಾಂಪ್ರದಾಯಕ ಚಿಕಿತ್ಸೆ ಎನ್ನಲಾಗುತ್ತದೆ. ಇದು ರೋಗಿಯು ರೋಗಗಳಿಂದ ಬೇಗನೆ ಗುಣಮುಖರಾಗಲು ಸಹಕಾರಿಯಾಗಿದೆ. ಕಪ್ಪಿಂಗ್ ಅಂಗಗಳ ಮೂಲಕ ದೇಹವನ್ನು ಶುದ್ದೀಕರಿಸುತ್ತದೆ ಅಲ್ಲದೆ ಒತ್ತಡದ ಬದುಕಿಗೆ ರಿಲ್ಯಾಕ್ಸ ನೀಡುತ್ತದೆ ಎಂದು ನಂಬಲಾಗಿದೆ.
ಈ ಮೊದಲು ಸಾಂಪ್ರದಾಯಿಕವಾಗಿ ಹಸುವಿನ ಕೊಂಬು ಹಾಗೂ ಬಿದಿರಿನಿಂದ ಮಾಡಿದ ಕಪ್ಗಳನ್ನು ಬಳಸಲಾಗುತ್ತಿತ್ತು. ಈಗ ಹೆಚ್ಚಾಗಿ ಗಾಜು, ಪ್ಲಾಸ್ಟಿಕ್ ಮತ್ತು ರಬ್ಬರ, ತಾಂಬ್ರ, ಕಂಚಿನ ಹೀರುವ ಕಪ್ಪ್ಗಳನ್ನು ಬಳಸುವ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಮನುಷ್ಯನ ಶ್ವಾಸಕೋಶ(ಐಣಟಿ), ಹೃದಯ(ಊಜಚಿಡಿಣ), ಯಕೃತ್ತ(ಐತಜಡಿ), ಹೊಟ್ಟೆ (ಖಣಠಚಿಛಿ), ಮೂತ್ರಪಿಂಡ(ಏಜಟಿಜಥಿ), ದೊಡ್ಡ ಕರುಳು(ಃರ ಋಣಣಟಿಜ) ಈ ಅಂಗಾಂಗಗಳ(ಓಡಿರಚಿಠಿ) ಪ್ರಚೋದಕ ಬಿಂದುಗಳು (ಚಿಕಿತ್ಸಾ ಬಿಂದುಗಳು) ದೇಹದ ಹಿಂಬದಿಯ ಬೆನ್ನಿನ ಎಡ ಹಾಗೂ ಬಲ ಗಳಲ್ಲಿ ಇದ್ದು, ಅವುಗಳನ್ನು ಕಪ್ಪಿಂಗ್ ಥೆರಪಿಯ ಮೂಲಕ ಉತ್ತಮ ಕಾರ್ಯನಿರ್ವಹಣೆಗೆ ಪ್ರಚೋದಿಸುವ ಜೊತೆಗೆ ದೇಹದಲ್ಲಿ ರಕ್ತ ಸರಾಗವಾಗಿ ಸಂಚರಿಸಲು ಮತ್ತು ಇತರ ಸಂಬಂಧಿತ ರೋಗಗಳಿಗೂ ಕಪ್ಪಿಂಗ್ ಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಕಪ್ಪಿಂಗ್ ಥೆರಪಿಗಳಲ್ಲಿ ಮೂರು ವಿಧಾನಗಳಿದ್ದು ಅವುಗಳಲ್ಲಿ (1) ಡ್ರೈ ಕಪ್ಪಿಂಗ್ ಥೆರಪಿ :- ಬೆನ್ನು, ಎದೆ, ಹೊಟ್ಟೆ ಮತ್ತ ಪೃಷ್ಠದ ಚರ್ಮದ ಮೇಲೆ ಬಿಸಿ ಮಾಡಿದ ಕಪ್ ನ್ನು ಬೋರಲಾಗಿಟ್ಟು ನಂತರ ಗಾಳಿಯ ತಂಪಾಗುವಿಕೆಯು ಹೀರಿಕೊಳ್ಳುವ ಪರಿಣಾಮವನ್ನು ಉಂಟು ಮಾಡುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
ಅದರಂತೆ (2) ಫೈರ್ ಕಪ್ಪಿಂಗ್ ಥೆರಪಿ :- ಹತ್ತಿ ಚಂಡನ್ನು ಬಹುತೇಕ ಶುದ್ಧ ಅಲ್ಕೋಹಾಲ್ನಲ್ಲಿ ನೆನಸಿ ಹತ್ತಿಯನ್ನು ಒಂದು ಜೋಡಿ ಫೋರಸಿಪ್ನಿಂದ ಬಿಗಿಗೊಳಿಸಿ ಬೆಂಕಿಕಡ್ಡಿ ಅಥವಾ ಲೈಟರ್ ಮೂಲಕ ಜ್ವಾಲೆಯನ್ನು ಹತ್ತಿಗೆ ಹಚ್ಚಿ ಕಪ್ನಲ್ಲಿ ಇಟ್ಟು ತ್ವರಿತವಾಗಿ ತೆಗೆಯುತ್ತಿದ್ದಂತೆ, ಜ್ವಾಲೆಯು ಕಪ್ ನಲ್ಲಿರುವ ಎಲ್ಲಾ ಆಮ್ಲಜನಕವನ್ನು ಸುಟ್ಟು ನಕಾರಾತ್ಮಕ ಒತ್ತಡವನ್ನು ಉಂಟುಮಾಡುತ್ತದೆ. ನಂತರ ತ್ವರಿತವಾಗಿ ದೇಹದ ಮೇಲೆ ಇಡಲಾಗುತ್ತದೆ. ಕಪ್ನಲ್ಲಿಯ ನಕಾರಾತ್ಮಕ ಒತ್ತಡವು ಚರ್ಮವನ್ನು ಹೀರಿಕೊಳ್ಳುವ ಪರಿಣಾಮವನ್ನು ಉಂಟುಮಾಡುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
ಮತ್ತು (3) ವೆಟ್ ಕಪ್ಪಿಂಗ್ ಥೆರಪಿ :- ವೆಟ್ ಕಪ್ಪಿಂಗನ್ನು ಓಷಧೀಯ ರಕ್ತಸ್ರಾವ ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ಗುರುತಿಸಿದ ಚಿಕಿತ್ಸಾ ಭಾಗದ ಚರ್ಮದ ಮೇಲೆ ಸಣ್ಣ ಛೇದ ಮಾಡಿ ಅದರ ಮೇಲೆ ಕಪ್ ಗಳನ್ನು ಬೋರಲಾಗಿಟ್ಟು ಹೀರುವ ಪರಿಣಾಮದೊಂದಿಗೆ ಒತ್ತಡವನ್ನು ಉಂಟು ಮಾಡುವ ಮೂಲಕ ದೇಹದಲ್ಲಿಯ ದುಗ್ದರಸಗಳನ್ನು ತೆಗೆಯುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
-2-
ಪ್ರಸ್ತುತ ಸನ್ನಿವೇಶಕ್ಕೆ ಕಪ್ಪಿಂಗ್ ಥೆರಪಿ ವೈಜ್ಞಾನಿಕವಾಗಿ ಸಂಶೋಧನೆಗೆ ಒಳಪಟ್ಟಿಲ್ಲವಾದರೂ ಇದರಿಂದ ಪ್ರಯೋಜನ ಹೊಂದಿದವರು ಬಹಳ ಜನ 1950ರ ದಶಕದಿಂದಲೂ ಚೀನಾದ ಆಸ್ಪತ್ರೆಗಳಲ್ಲಿ ಸಾಂಪ್ರದಾಯಿಕ ಚೀನಿ ಓಷಧಿಗಳೊಂದಿಗೆ ರೋಗಿಗಳು ಬೇಗನೆ ಗುಣಮುಖರಾಗಲು ಬಳಿಸುತ್ತಿದ್ದಾರೆ.
ಕಪ್ಪಿಂಗ್ ಥೆರಪಿ ಸ್ನಾಯುರಜ್ಜು, ಉಳುಕು ನೋವುಗಳಿಗೆ ಚಿಕಿತ್ಸೆ ನೀಡಲು ಬಹಳ ಪರಿಣಾಮಕಾರಿಯಾಗಿದೆ. ಅಲ್ಲದೆ ಮಾನವನ ದೇಹದಲ್ಲಿ ರಕ್ತ ಸಹಜವಾಗಿ ಚಲಿಸಲು, ಮತ್ತು ಸ್ನಾಯು ಶಕ್ತಿಯನ್ನು ಉತ್ತೇಜಿಸಲು ಇದನ್ನು ಬಳಸಲಾಗುತ್ತದೆ.
ಬೆನ್ನು ನೋವು, ವಾತಾಯನ, ತಲೆನೋವು, ಕುತ್ತಿಗೆ ಗಟ್ಟಿಯಾದಾಗ, ಅಂಗಾಂಗ ಜುಮ್ಮೆನಿಸುವಿಕೆ, ಸೆಳೆತ ಒತ್ತಡ, ನಿದ್ರಾ ಹೀನತೆ, ಸೆಲ್ಯುಲೈಟ್, ಜೀರ್ಣಕ್ರಿಯೆ ಸಮಸ್ಯೆ, ಚರ್ಮದ ರೋಗಗಳಿಗೆ ಕಪ್ಪಿಂಗ್ ಥೆರಪಿ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಕಂಡು ಬಂದಿದೆ. ಅಲ್ಲದೆ ಉಸಿರಾಟದ ಕಾಯಿಲೆಗಳಾದ ನೆಗಡಿ, ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ಗಳಿಗೆ ಚಿಕಿತ್ಸೆ ನೀಡಲು ಕಪ್ ಗಳನ್ನು ಬೆನ್ನು, ಕುತ್ತಿಗೆ, ಬುಜಗಳಿಗೆ ಬಳಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಕಪ್ಪಿಂಗ್ ಥೆರಪಿಗೆ ಆಕರ್ಷಿತರಾಗಿದ್ದು, ಕ್ರೀಡಾಳುಗಳು ಮೈಕೈ ನೋವಿನಿಂದ ಮುಕ್ತರಾಗಲು ಬಳಸುತ್ತಾರೆ. ಅಲ್ಲದೆ ಸೌಂದರ್ಯ ಚಿಕಿತ್ಸೆಗೆ ಮುಖದ ಮೇಲೆ ಚಿಕ್ಕ ಚಿಕ್ಕ ಹೀರುವ ವ್ಯಾಕ್ಯೂಮ ಕಪ್ಗಳನ್ನು ಇಟ್ಟು, ಇದು ಮುಖಕ್ಕೆ ಒಳ್ಳೆಯ ರಕ್ತ ನುಗ್ಗಿ ಬರುವಂತೆ ಮಾಡುವ ಜೊತೆಗೆ ಜೋತು ಬಿದ್ದ ಚರ್ಮವನ್ನು ಬಿಗಿಗೊಳಿಸಿ ಹೊಳಪು ನೀಡುತ್ತದೆ. ಜೊತೆಗೆ ರಕ್ತದ ಪೂರೈಕೆ ಹೆಚ್ಚುವದರಿಂದ ಕೊಲ್ಯಾಜನ್ ಉತ್ಪತ್ತಿ ಹೆಚ್ಚಿ ಮುಖದಲ್ಲಿ ಹೊಸ ಕೋಶಗಳ ಹುಟ್ಟುವಿಕೆಗೆ ಕಾರಣವಾಗುತ್ತದೆ. ಇದರಿಂದ ವ್ಯಕ್ತಿಯು ಹೆಚ್ಚು ಹದಿ-ಹರೆಯರಂತೆ ಕಾಣಿಸಲು ಕಪ್ಪಿಂಗ್ ಥೆರಪಿ ಮಾಡಿಸಿಕೊಳುತ್ತಿರುವದು ಕಂಡುಬಂದಿದೆ.
ಅಲ್ಲದೆ ಹೊಟ್ಟೆ, ಸೊಂಟ ಭಾಗದ ಕೊಬ್ಬನ್ನು ಕರಗಿಸಲು ಮತ್ತು ಹೊಟ್ಟೆಯನ್ನು ಸ್ಲಿಮಿಂಗ್ ಮಾಡಲು ಹಾಗೂ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಕಪ್ಪಿಂಗ್ ಮಸ್ಸಾಜ್ ಮೊರೆಹೋಗುತ್ತಿದ್ದಾರೆ.
ಮುಖದ ಮೊಡವೆ ಹಾಗೂ ಹೊಟ್ಟೆಯ ಮೇಲಿನ ಕೊಬ್ಬನ್ನು ತೊಡೆದುಹಾಕುವ ಅತ್ಯುತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಸೇವನೆ, ವ್ಯಾಯಾಮ ಹಾಗೂ ನಿಯಮಿತ ಆಹಾರ ಸೇವನೆ ಮತ್ತು ಸಾತ್ವಿಕ ಆಹಾರ ಪದ್ಧತಿಯಾಗಿದ್ದು, ಇದನ್ನು ಯುವ ಪೀಳಿಗೆ ನಿರ್ಲಕ್ಷಿಸಿದ್ದಾರೆ.
ಕಪ್ಪಿಂಗ್ ಥೆರಪಿಯನ್ನು ಪ್ರತ್ಯೇಕವಾಗಿ ಮಾಡದೇ ಅಕ್ಯುಪಂಕ್ಷರ್, ಮಸ್ಸಾಜ್, ಥೆರಪಿಗಳೊಂದಿಗೆ ಬಳಸಲಾಗುತ್ತಿರುವದು ಹೆಚ್ಚಾಗಿ ಕಂಡು ಬರುತ್ತದೆ. ಕಪ್ಪಿಂಗ್ ಮಸ್ಸಾಜ್ನ್ನು ವ್ಯಾಕ್ಯೂಮ ಥೆರಪಿ ಎಂದು ಕೂಡ ಕರೆಯುತ್ತಾರೆ.
ಪ್ರತಿಯೊಬ್ಬ ವ್ಯಕ್ತಿಯ ದೇಹವು ವಿಭಿನ್ನವಾಗಿರುತ್ತದೆ ಕಪ್ಪಿಂಗ್ ಥೆರಪಿ ನೀಡುವ ನುರಿತ ತಜ್ಞರು ದೇಹದ ಅಕ್ಯೂಪಂಕ್ಚರ್ ಪಾಯಿಂಟಗಳನ್ನು ಗುರುತಿಸಿ ವಿಶೇಷ ಓಷಧಿಯ ಲೇಪನದೊಂದಿಗೆ ಚರ್ಮದ ಮೇಲೆ (ಗುರುತಿಸಿದ ಪ್ರಚೋದಕ ಬಿಂದುಗಳ ಮೇಲೆ) ಬಿಸಿಯಾದ ಕಪ್ ಗಳನ್ನು ಬೋರಲಾಗಿಟ್ಟು ನಕಾರಾತ್ಮಕ ಒತ್ತಡದಿಂದ ಹೀರುವಿಕೆಯನ್ನು ಸೃಷ್ಟಿಸುತ್ತಾರೆ. ಇದರಿಂದ ಅನಿರ್ಧಿಷ್ಟ ಟಾಕ್ಸಿನ್ಗಳು, ಸ್ಥಬ್ದ ರಕ್ತ, ಇವುಗಳನ್ನು ದೇಹದಿಂದ ಹೊರ ತೆಗೆದುಹಾಕಲಾಗುತ್ತದೆ. ಅಲ್ಲದೆ ಈ ಅಭ್ಯಾಸವು ಭಾಗಶ: ನಿರ್ವಾತವನ್ನು ರಚಿಸುವ ಮೂಲಕ ದೇಹದ ಚಿಕಿತ್ಸೆ, ಉದ್ದೇಶಿತ ಪ್ರದೇಶದ ಮೇಲೆ ಇರಿಸಲಾದ ಕಪ್ಗೆ ಅಂಗಾಂಶ ಸೆಳೆಯುವದನ್ನು ಒಳಗೊಂಡಿರುತ್ತದೆ. ಅಂದರೆ ಕಪ್ನಲ್ಲಿಯ ಗಾಳಿಯನ್ನು ಬಿಸಿ ಮತ್ತು ನಂತರದ
-3-
ತಂಪಾಗಿಸುವಿಕೆಯಿಂದ ಅಥವಾ ಯಾಂತ್ರಿಕ ಪಂಪ್ ಮೂಲಕ ಕಪ್ನ್ನು ದೇಹದ ಮೇಲೆ ಗುರುತಿಸಿರುವ ಪ್ರದೇಶದ ಮೇಲೆ 5 ರಿಂದ 15 ನಿಮಿಷ ಇಡುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
ಹೃದಯ ವೈಫಲ್ಯ ಅಥವಾ ತೀವೃ ಹೃದಯದ ಕಾಯಲೆ, ರಕ್ತಸ್ರಾವದ ಅನುಮಾನ, ತೆರೆದ ಗಾಯ, ಕ್ಯಾನ್ಸರ್, ಸ್ನಾಯು ಮುರಿತ, ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ, 5 ವರ್ಷದ ಮಕ್ಕಳಿಗೆ, ಮೊಲೆ ತೊಟ್ಟುಗಳ ಮೇಲೆ, ಉಬ್ಬಿರುವ ರಕ್ತನಾಳಗಳ ಮೇಲೆ ಎಂದಿಗೂ ಹೀರುವ ಕಪ್ ಹಾಕಬಾರದು ಹಾಗೂ ಈ ಸಂದರ್ಭಗಳಲ್ಲಿ ಹೀರುವ ಕಪ್ ಗಳ ಚಿಕಿತ್ಸೆಯನ್ನು ನೀಡುವಂತಿಲ್ಲ.
ದೇಹದ ಸಮತೋಲನ ಅದರ ಪ್ರಮುಖ ಶಕ್ತಿಯನ್ನು ಮತ್ತು ಉತ್ತಮ ಆರೋಗ್ಯವನ್ನು ಹೊಂದಲು ಅನಕೂಲವಾಗುವಂತೆ ದೇಹಕ್ಕೆ ಶಕ್ತಿಯನ್ನು ನೀಡಲು ಹೀರುವ ಕಪ್ ಗಳ ಬಳಕೆಯನ್ನು ಚೀನಿ ಓಷಧಿ ಶಿಫಾರಸ್ಸು ಮಾಡಿದೆ. ಹೀರುವ ಕಪ್ ಇರಿಸಿದ ಪ್ರದೇಶದ ಮೇಲೆ
ರಕ್ತದ ಒಳ ಹರಿವು ವಿಷವನ್ನು ಹೊರ ಹಾಕುತ್ತದೆ. ಅದರಿಂದ ಆ ಪ್ರದೇಶದಲ್ಲಿ ಸ್ಥಳೀಕರಿಸಿದ ನೋವು ಕಡಿಮೆ ಮಾಡಿ ದಣಿದ ಸ್ನಾಯುಗಳಿಗೆ ಚೇತರಿಕೆಯನ್ನು ವೇಗಗೊಳಿಸುತ್ತದೆ. ಇದರಿಂದ ಅಂಗಾಂಶಗಳು (ಖಿಣ), ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಆಸ್ಟಿಯೋಪಥ್ ತಜ್ಞರು ಹೇಳುತ್ತಾರೆ.
ಜ್ವರ, ದೀರ್ಘಕಾಲದ ಕಡಿಮೆ ಬೆನ್ನು ನೋವು, ಕಳಪೆ ಹಸಿವು, ಅಜೀರ್ಣ, ಅಧಿಕ ರಕ್ತ ಒತ್ತಡ, ಮೊಡವೆ, ಅಟೋಪಿಕ್ ಡರ್ಮಿಟೈಟಿಸ್, ಸೋರಿಯಾಸಿಸ್, ರಕ್ತ ಹೀನತೆ, ಪಾರ್ಶ್ವವಾಯು, ಬಂಜೆತನ ಮತ್ತು ಮುಟ್ಟಿನಂತಹ ಸಮಸ್ಯಗಳಿಗೆ ಕಪ್ಪಿಂಗ್ ಥೆರಪಿ ಚಿಕಿತ್ಸಕರು ಚಿಕಿತ್ಸೆ ನೀಡುತ್ತಾರೆ. ಕಪ್ಪಿಂಗ್ ಚಿಕಿತ್ಸೆ ರೋಗಗಳನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದ್ದರೂ ಆರೋಗ್ಯ ಪ್ರಯೋಜನೆ ಹೊಂದಿದೆ ಎಂಬುದಕ್ಕೆ ಪುರಾವೆಗಳ ಕೊರತೆ ಇದೆ. ಅಲ್ಲದೆ ಕಪ್ಪಿಂಗ್ ಚಿಕಿತ್ಸೆ ಹಾಗೂ ಅದರ ತಂತ್ರಗಳ ಬಳಕೆಯನ್ನು ಬೆಂಬಲಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.
ಕಪ್ಪಿಂಗ್ ಥೆರಪಿಯನ್ನು ಇತರ ಅಕ್ಯುಪಂಕ್ಚರ್ ಚಿಕಿತ್ಸೆಗಳೊಂದಿಗೆ ಚಿಕಿತ್ಸಕರು ಬಳಸುತ್ತಿದ್ದು, ದೇಹದ ರಕ್ತಪರಿಚಲನೆ ಸರಾಗವಾಗಲು ಅಕ್ಯುಪಂಕ್ಚರ್ ಪಾಯಿಂಟಗಳ ಮೇಲೆ ಕಪ್ಗಳನ್ನು ಚಿಕಿತ್ಸೆ ರೋಪದಲ್ಲಿ ಬಳಿಸಿದಾಗ ನಿರ್ಧಿಷ್ಟಪಡಿಸಿದ ದೇಹದ ಭಾಗದಲ್ಲಿ ಅಡತಡೆಯಿಲ್ಲದೆ ರಕ್ತ ಸರಾಗವಾಗಿ ಸಂಚರಿಸುತ್ತದೆ ಎಂದು ಚಿಕಿತ್ಸಕರು ಹೇಳುತ್ತಾರೆ. ಇತ್ತೀಚೆಗೆ ಸಾಂಪ್ರದಾಯಿಕ ಕಪ್ಗಳ ಬದಲಾಗಿ ಆಧುನಿಕ ಬೇರೆ ಬೇರೆ ಹೀರುವ ಸಾಧನಗಳನ್ನು ಕೂಡ ಬಳಸಲಾಗುತ್ತಿದೆ.
ಕೆಲವು ಸಂದರ್ಭಗಳಲ್ಲಿ ಗಾಜಿನ ಕಪ್ ಕೆಳಗಿರುವ ಗಾಳಿಗೆ ಜ್ವಾಲೆಯನ್ನು ಅದರ ಸಮೀಪಿಸುವ ಮೂಲಕ ಆಮ್ಲಜನಕವನ್ನು ಸುಡಲಾಗುತ್ತದೆ. ಅಥವಾ ಹೀರುವ ಕಪ್ಗಳಲ್ಲಿ ಹೆಚ್ಚು ಆಧುನಿಕ ಆವೃತ್ತಿಯಲ್ಲಿ ಹಸ್ತಚಾಲಿತ ಪಂಪ್ ಸಹಾಯದಿಂದ ಆಮ್ಲಜನಕವನ್ನು ಹೊರಹಾಕಿ ಪ್ರತಿ ವ್ಯಕ್ತಿಯ ಅನಾರೋಗ್ಯ, ದೇಹದ ಗುಣಲಕ್ಷಣ, ಚರ್ಮದ ಸೂಕ್ಷ್ಮತೆ ಸಂವೇದನೆಗಳನ್ನು ಗುರುತಿಸಿ ಚರ್ಮದ ಮೇಲೆ ಹೀರುವ ಕಪ್ಗಳನ್ನು ಹೀರುವಿಕೆಯ ಹೆಚ್ಚು ಮತ್ತು ಕಡಿಮೆ ಮಾಡುವ ಸಾಮರ್ಥ್ಯವನ್ನು ನಿರ್ಧರಿಸಿ ಇಡಲಾಗುತ್ತದೆ. ಸಾಂಪ್ರದಾಯಿಕ ಲೇಪನ ಅಥವಾ ಎಣ್ಣಿಯನ್ನು ದೇಹಕ್ಕೆ ಲೇಪನ ಮಾಡಿವದರೊಂದಿಗೆ ಹೀರುವ ಬಟ್ಟಲುಗಳನ್ನು (ಕಪ್ಗಳನ್ನು) ಮಸ್ಸಾಜ್ ಸಾಧನವಾಗಿ ಮೋಬೈಲ್ ಮಾಡಲಾಗುತ್ತದೆ. ಇದನ್ನು ಕಪ್ಪಿಂಗ್ ಥೆರಪಿ ತಿಳಿದಿರುವ ವೈಧ್ಯರೇ ನಿರ್ವಹಿಸುತ್ತಾರೆ ಅಥವಾ ನಿರ್ದೇಶಿಸುತ್ತಾರೆ ಹೊರತು ಬೇರೆಯವರಲ್ಲ.
ಕಪ್ಪಿಂಗ್ ಥೆರಪಿ ಬಳಿಕ ಕಪ್ ಇಟ್ಟ ಜಾಗದಲ್ಲಿ ದೇಹದ ಮೇಲೆ ಕೆಂಪು ಬಣ್ಣದ ಗುರುತು ತಾತ್ಕಾಲಿಕವಾಗಿ ಉಳಿದಿರುತ್ತದೆ. ಕಪ್ಪಿಂಗ್ ಥೆರಪಿ ಚಿಕಿತ್ಸಕರ ಪ್ರಕಾರ, ಈ ಕಪ್ ಮಾರ್ಕ (ಗುರುತು)ಗಳು ತಮ್ಮ ಗಾತ್ರ, ಆಕಾರ ಹಾಗೂ ಬಣ್ಣಗಳ ಮೂಲಕ ದೇಹದೊಳಗೆ ಎಷ್ಟೊಂದು ಒಣಕೋಶಗಳನ್ನು ಹಿಡಿದಿಟ್ಟುಕೊಂಡಿತ್ತೆಂದು ತೋರಿಸುತ್ತದೆ. ಥೆರಪಿಯು ಈ ಕೋಶಗಳನ್ನು ವೇಸ್ಟ
-4-
ಎಂದು ತೆಗೆದುಹಾಕುತ್ತದೆ. ಈ ಮಾರ್ಕಗಳು ಹೋಗುವವರೆಗೆ ಇನ್ಫೆಕ್ಷನ್ ತಡೆಗಟ್ಟಲು ಆ್ಯಂಟಿಬಯೋಟಿಕ್ ಆಯಿಂಟ್ಮೆಂಟ್ ಹಚ್ಚಲು ನೀಡಲಾಗುತ್ತದೆ. ಹಾಗೂ ಬ್ಯಾಂಡೇಜ ಮಾಡಲಾಗುತ್ತದೆ, ಆದರೂ ಚಿಕಿತ್ಸೆಗೆ ಒಳಗಾಗುವರು ಎಚ್ಚರಿಕೆವಹಿಸುವದು ಮುಖ್ಯ.
ಇತ್ತೀಚೆಗೆ ವೈಧ್ಯಕೀಯ ವ್ಯವಸ್ಥೆ ಸಮಾಜದ ಸೇವೆಯಾಗಿರದೆ ವಾಣಿಜ್ಯೀಕರಣಗೊಂಡು ಮಾನವೀಯತೆಯನ್ನು ಮರೆತಿರುವ ಹಣ ಸೆಳೆಯುವ ಸಾಧನವಾಗಿರುವದು ಖೇದದ ಸಂಗತಿಯಾಗಿದೆ. ವೈಧ್ಯಕೀಯ ವೆಚ್ಚಗಳು ಜನಸಾಮಾನ್ಯರ ಕೈಗೆಟುಕದೆ ಗಗನಕ್ಕೇರಿವೆ. ಹೀಗಾಗಿ ಜನರು ತಮ್ಮ ಸಾಮಾನ್ಯ ಅನಾರೋಗ್ಯ ಸಮಸ್ಯಗಳನ್ನು ವೈಧ್ಯರಲ್ಲಿ ತೋರಿಸಲು ಹಿಂಜರಿಯುತ್ತಿದ್ದರೂ ಅನಿವಾರ್ಯವೆನಿಸಿದೆ.
ಇತಿಹಾಸ ಮರುಕಳಿಸುತ್ತದೆ ಎಂದು ಹಿರಿಯರು ಹೇಳುವಂತೆ, ಪ್ರಸಕ್ತ ಸನ್ನಿವೇಶಗಳಲ್ಲಿ ಮನುಷ್ಯ ತನ್ನ ಅನಾರೋಗ್ಯ ಸಮಸ್ಯಗಳಿಗೆ ಪ್ರಾಚೀನ ಚಿಕಿತ್ಸಾ ಪದ್ಧತಿಗಳಿಗೆ ಶರಣು ಹೋಗುತ್ತಿದ್ದಾನೆ. ಇತ್ತೀಚೆಗೆ ಮನೆಮದ್ದುಗಳು ರಾಮಬಾಣವಾಗಿವೆ. ಯಾವುದೇ ಚಿಕಿತ್ಸೆಗೆ ರೋಗಿಯ ಮನೋಬಲ ಮುಖ್ಯವಾಗಿದ್ದು, ನುರಿತ ತಜ್ಞರ ಸಲಹೆ ಪಡೆಯುವದು ಅಷ್ಠೇ ಮುಖ್ಯವಾಗಿದೆ.
ಕಪ್ಪಿಂಗ್ ಥೆರಪಿ ಚಿಕಿತ್ಸೆಯನ್ನು ವ್ಯಾಪಕವಾಗಿ ಅಭ್ಯಾಸ ಮಾಡದ ಹೊರತು ಅದನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿಲ್ಲ. ಅಲ್ಲದೆ ಇದು ವೈಜ್ಞಾನಿಕವಾಗಿ ಸಂಶೋಧನೆಗೆ ಒಳಪಡುವದು ಅಷ್ಟೇ ಮುಖ್ಯವೆನಿಸುತ್ತದೆ.
ವಿಶ್ವದ ಅನೇಕ ಕಡೆಗಳಲ್ಲಿ ಕಪ್ಪಿಂಗ್ ಥೆರಪಿಯನ್ನು ಇತರ ಚಿಕಿತ್ಸೆಯೊಂದಿಗೆ ಬಳಸುತ್ತಿದ್ದರೂ ಒಟ್ಟಾರೆ ಗುಣಪಡಿಸುವ ಚಿಕಿತ್ಸೆಯಾಗಿ ಬಳಸಬಹುದೆಂದು ಹೇಳಲು ಸ್ಪಷ್ಟ ದಾಖಲೆಗಳಿಲ್ಲ ಈ ನಿಟ್ಟಿನಲ್ಲಿ ಕಪ್ಪಿಂಗ್ ಥೆರಪಿ ಹೆಚ್ಚು ಸಂಶೋಧನೆಗಳಿಗೆ ಒಳಪಡಬೇಕಿದೆ.
- ಅನಂತ ಪಪ್ಪು
* * *