ಅನನ್ಯ ಪಾಂಡೆ ಆರ್ಯನ್ ಖಾನ್ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ
ಮುಂಬೈ: ಅ, 22: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗ ಈ ಪ್ರಕರಣದಲ್ಲಿ ಬಾಲಿವುಡ್ ನಟಿ ಅನನ್ಯ ಪಾಂಡೆ ಹೆಸರು ಕೇಳಿಬಂದಿದೆ.
ಬಾಲಿವುಡ್ ನಟಿ ಅನನ್ಯ ಪಾಂಡೆ ಮುಂಬೈ ಕ್ರೂಸ್ ಪಾರ್ಟಿ ಪ್ರಕರಣ ಸಂಬಧ ಎನ್ ಸಿಬಿ ಆಕೆ ಮನೆ ಮೇಲೆ ದಾಳಿ ನಡೆಸಿದೆ. ಆಕೆ ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಕೆ ಮಾಡಿದ್ದರು ಎಂದು ಈ ಮೂಲಕ ತಿಳಿದುಬಂದಿದೆ.
ಮಾಹಿತಿ ಪ್ರಕಾರ ಅನನ್ಯ ಪಾಂಡೆ ಅವರು ಮೂರು ಬಾರಿ ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಕೆ ಮಾಡಿದ್ದಾರೆ ಎಂದು ವಶಪಡಿಸಿಕೊಂಡ ಮೊಬೈಲ್ ಚಾಟ್ ಗಳಿಂದ ಬಹಿರಂಗಗೊಂಡಿದೆ.
ಇವರಿಬ್ಬರೂ ಸ್ನೇಹಿತರಾಗಿದ್ದು, ಹಲವಾರು ಬಾರಿ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಹೇಳಲಾಗಿದೆ. ಇಬ್ಬರ ಫೋನ್ ಗಳನ್ನೂ ವಶಕ್ಕೆ ಪಡೆದಿರುವ ಅಧಿಕಾರಿಗಳು ಈ ಎಲ್ಲಾ ಮಾಹಿತಿ ಕಲೆಹಾಕಿದ್ದಾರೆ.
ಇನ್ನು ಖಾನ್ ಜಾಮೀನು ಅರ್ಜಿ ಬಾಂಬೆ ಹೈಕೋರ್ಟ್ ಮುಂದೆ ಅಕ್ಟೋಬರ್ 26 ರಂದು ವಿಚಾರಣೆಗೆ ಬರಲಿದೆ. ಇದರ ಬೆನ್ನಲ್ಲೇ ಈಗ #IStandWithSRK ಎಂದು ಟ್ವಿಟರ್ ನಲ್ಲಿ ಅಭಿಮಾನಿಗಳು ಶಾರುಖ್ ಖಾನ್ ಮಗನಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.