ಬಳ್ಳಾರಿ

ಅನಂತಕುಮಾರ್‌ಗೆ ಪಿಎಚ್‌.ಡಿ ಪದವಿ

ಅನಂತಕುಮಾರ್‌ಗೆ ಪಿಎಚ್‌.ಡಿ ಪದವಿ

ಲೋಕದರ್ಶನ ವರದಿ 

ಬಳ್ಳಾರಿ 19: ಸ್ಥಳೀಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ಅನಂತಕುಮಾರ್ ಡಿ. ಇವರಿಗೆ ಸದರಿ ವಿಶ್ವವಿದ್ಯಾಲಯವು ಪಿಎಚ್‌.ಡಿ. ಪದವಿಯನ್ನು ಘೋಷಣೆ ಮಾಡಿದೆ.  


ಅವರು ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮೋಹನ್‌ದಾಸ್ ಕೆ. ಇವರ ಮಾರ್ಗದರ್ಶನದಲ್ಲಿ “ಕರ್ನಾಟಕ ರಾಜ್ಯದಲ್ಲಿ ವಿರೋಧ ಪಕ್ಷಗಳ ಪಾತ್ರ: ಒಂದು ವಿಮರ್ಶಾತ್ಮಕ ಅಧ್ಯಯನ" ಎಂಬ ವಿಷಯವಾಗಿ ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಸಾದರಪಡಿಸಿದ್ದರು. 


ಸುದ್ದಿ ಓದಿ