ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ ಆನಂದಗೌಡ ಧನ ಸಹಾಯ
ತಾಳಿಕೋಟಿ: ಸಾಲಭಾದೆ ತಾಳಲಾರದೆ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ದೇ.ಹಿಪ್ಪರಗಿ ಮತಕ್ಷೇತ್ರದ ಕೊಂಡಗೂಳಿ ಗ್ರಾಮದ ಬಡರೈತ ಅಲ್ಲಾಬಕ್ಷ ಮುಲ್ಲಾ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿದ ಕಾಂಗ್ರೆಸ್ ಮುಖಂಡ ಆನಂದಗೌಡ ದೊಡಮನಿ ಅವರು ವೈಯಕ್ತಿಕವಾಗಿ ಧನಸಹಾಯ ಮಾಡಿದರು.
ಧನಸಹಾಯ ನೀಡಿ ಮಾತನಾಡಿದ ಅವರು ಈ ಸರಕಾರ ನಮ್ಮ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಇಂದು ನಡೆಯುತ್ತಿರುವ ರೈತರ ಸಾಲು ಸಾಲು ಆತ್ಮಹತ್ಯೆಗಳೇ ಸಾಕ್ಷಿಯಾಗಿವೆ. ಈ ಸಮಯದಲ್ಲಿ ನಾನು ಈ ಕ್ಷೇತ್ರದ ಶಾಸಕರು ಈ ಬಡರೈತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಸರಕಾರದಿಂದ ಕೊಡಿಸಬೇಕೆಂದು ಆಗ್ರಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶರೆಡ್ಡಿ ಸಿಂದಗೇರಿ, ದಾವಲಸಾಬ ಕಾಜಿ, ಖಾಸಿಂ ಪಟೇಲ ಬಡೇಘ, ಎಂ.ಕೆ.ನಾಗೂರ, ಹಸನ್ ಪಟೇಲ್ ದೊಡಮನಿ, ಬಸವರಾಜ ಕುಲಕರ್ಣಿ, ರವಿಕುಮಾರ ಹಯ್ಯಾಳ, ಆನಂದ ಮದರಲ್ಲ ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.