ಮುಂದಗೋಡ

ದಕ್ಷ, ಪ್ರಾಮಾಣಿಕ ತಹಶೀಲ್ದಾರ ಶಂಕರ ಗೌಡಿ

ದಕ್ಷ, ಪ್ರಾಮಾಣಿಕ ತಹಶೀಲ್ದಾರ ಶಂಕರ ಗೌಡಿ

ಲೋಕದರ್ಶನ ವರದಿ 

ಮುಂಡಗೋಡ: ಇತ್ತೀಚೆಗೆ ತಹಶೀಲ್ದಾರ ಮತ್ತು ತಾಲೂಕಾ ದಂಡಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಶಂಕರ ಗೌಡಿ ದಕ್ಷ ಮತ್ತು ಪ್ರಾಮಾಣಿಕತೆಯ ಕರ್ತವ್ಯ ನಿಭಾಯಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಯಾವುದೆ ಕಾನೂನು ಬಾಹಿರ ಕೆಲಸ ಮಾಡದೆ ನೇರವಾದ ಮಾತುಗಳಿಂದ ಶಂಕರ ಗೌಡಿ ಅಂಥವರನ್ನು ದೂರ ಸರಿಸಿ ಬಿಡುತ್ತಾರೆ. ಅವರೇನಾದರೂ ಆಮಿಷ ತೋರಿದಲ್ಲಿ ಮುಲಾಜಿಲ್ಲದೆ ಕಚೇರಿಯಿಂದ ಹೊರಹೋಗಲು ತಿಳಿಸುತ್ತಾರೆ. ಇವರು ಬಂದ ಮೇಲೆ ತಮ್ಮ ಇಲಾಖೆ ಸಿಬ್ಬಂದಿಯ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಇದೇ ಕಾರಣದಿಂದ ವಾಟ್ಸ್‌ಆಪ್ ಗ್ರುಪ್ ಒಂದರಲ್ಲಿ ‘ನನ್ನ ಕೆಳಗಿನ ಸಿಬ್ಬಂದಿ ಕಡೆಯಿಂದ ನಾನು ಯಾವುದೆ ರೀತಿಯ ಹಣ ತೆಗೆದುಕೊಳ್ಳುವುದಿಲ್ಲ. ಕಂದಾಯ ಇಲಾಖೆಯ ಯಾವುದೆ ಸಿಬ್ಬಂದಿ ಹಣ ತೆಗೆದುಕೊಳ್ಳುತ್ತಿದ್ದರೆ ನನ್ನ ಗಮನಕ್ಕೆ ತರಬೇಕು ಅಲ್ಲದೆ ಕಂದಾಯ ಇಲಾಖೆಯ ಯಾವುದೆ ಸಿಬ್ಬಂದಿ ಅಥವಾ ಆಪರೇಟರ್‌ಗಳು ಸರ್ಕಾರ ನಿಗದಿಪಡಿಸಿದ ಶುಲ್ಕ ಹೊರತುಪಡಿಸಿ ಸಾರ್ವಜನಿಕರಿಂದ ಹಣ ಕೇಳಿದರೆ ನನ್ನ ಗಮನಕ್ಕೆ ತರಬೇಕು’ ಎಂದು ಸಂದೇಶ ನೀಡಿರುವುದು ಇವರ ಪ್ರಾಮಾಣಿಕತೆಗೆ ಒಂದು ನಿದರ್ಶನವಾಗಿದೆ. ಒಟ್ಟಿನಲ್ಲಿ ಸಾರ್ವಜನಿಕರ ಕೆಲಸ ದೇವರ ಕೆಲಸ ಎಂದು ನಂಬಿರುವ ಇವರು ಬಂದಿರುವುದರಿಂದ ತಾಲೂಕಿನ ಚಿತ್ರಣ ಬದಲಾವಣೆ ಆಗುವುದರಲ್ಲಿ ಸಂಶಯವಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ. 


ಸುದ್ದಿ ಓದಿ