ಬಳ್ಳಾರಿ

ಭಾರತದಲ್ಲಿ ಉದ್ಯಮಶೀಲತೆ ಉತ್ತೇಜನಕ್ಕೆ ಆ್ಯಮ್ವೇ ಪಣ

ಭಾರತದಲ್ಲಿ ಉದ್ಯಮಶೀಲತೆ ಉತ್ತೇಜನಕ್ಕೆ ಆ್ಯಮ್ವೇ ಪಣ


ಬಳ್ಳಾರಿ 23: ವಿಶ್ವದ ನಂಬರ್ ಒನ್ ನೇರ ಮಾರಾಟದ ಕಂಪನಿಯಾದ ಆ್ಯಮ್ವೇ ದೇಶದಲ್ಲಿ ವಾಣಿಜ್ಯೋದ್ಯಮವನ್ನು ಉತ್ತೇರಿಸುವ ಹಾಗೂ ಆರೋಗ್ಯ ಮತ್ತು ಸ್ವಾಸ್ಥ್ಯ ವಿಭಾಗದಲ್ಲಿ ಧೀರ್ಘಾವಧಿ ಮೌಲ್ಯಸೃಷ್ಟಿಗೆ ಬದ್ಧವಾಗಿದೆ ಎಂದು ಕಂಪನಿಯ ಜಾಗತಿಕ ಸಿಒಓ ಮಿಲಿಂದ್ ಪಂತ್ ಅವರು ಹೇಳಿದರು. 

ಕಂಪನಿ 2024ರ ವೇಳೆಗೆ ಅನುಶೋಧನೆ ಮತ್ತು ವಿಜ್ಞಾನ, ಡಿಜಿಟಲ್ ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಉತ್ತೇಜಿಸಲು 300 ಕೋಟಿ ಡಾಲರ್ ಮೀಸಲಿಟ್ಟಿದೆ. ಈ ಪೈಕಿ ಭಾರತದಲ್ಲಿ 170 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವೆಚ್ಚ ಮಾಡಲಿದೆ. ಭಾರತದಲ್ಲಿ ಲಕ್ಷಾಂತರ ಭಾರತೀಯರಿಗೆ ಉದ್ಯಮಶೀಲತೆ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ವಿವರಿಸಿದರು. 

ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವೆಬಿನಾರ್ ಗೋಷ್ಠಿ ಮೂಲಕ ಕಂಪನಿಯ ಭವಿಷ್ಯದ ಕಾರ್ಯತಂತ್ರವನ್ನು ಹಂಚಿಕೊಂಡ ಅವರು, ಮಹಿಳೆಯರು ಮತ್ತು ಯುವಕರನ್ನು ಹೆಚ್ಚು ಹೆಚ್ಚು ಉದ್ಯಮಶೀಳರನ್ನಾಗಿ ಮಾಡುವ ಮತ್ತು ತಮ್ಮ ವ್ಯಾಪಾರ ವಹಿವಾಟುಗಳನ್ನು ನಿರ್ವಹಿಸಲು ಅವಕಾಶ ಒದಗಿಸುವುದು ನಮ್ಮ ಆದ್ಯತೆ. ನಾರಿ ಶಕ್ತಿ, ಆ್ಯಮ್ ಯಂಗ್ ನಂಥ ವಿವಿಧ ಉಪಕ್ರಮಗಳ ಮೂಲಕ ಮಹಿಳೆಯರು ಮತ್ತು ಹೊಸ ಸಹಸ್ರಮಾನದ ಯುವಕರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.  

"ಅದೇ ಸಮಯದಲ್ಲಿ, ಜಗತ್ತಿನಾದ್ಯಂತ ಆರೋಗ್ಯ ಜಾಗೃತ ಗ್ರಾಹಕರಲ್ಲಿ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಹೆಚ್ಚುತ್ತಿರುವ ಜಾಗೃತಿಯಿಂದಾಗಿ ಮಾರುಕಟ್ಟೆಯು ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಗಿದೆ. ಪೌಷ್ಠಿಕಾಂಶದ ವಿಭಾಗದಲ್ಲಿ ಮಾರುಕಟ್ಟೆ ನಾಯಕರಾಗಿರುವ ಆ್ಯಮ್ವೇ ಮುಂಚೂಣಿಯಲ್ಲಿದ್ದು, ನಿರಂತರವಾಗಿ ವಿಕಸನಗೊಳ್ಳುತ್ತಿರುವ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಆರೋಗ್ಯ ಮತ್ತು ಕ್ಷೇಮ ಉತ್ಪನ್ನ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು. 


ಸುದ್ದಿ ಓದಿ