ರಾಷ್ಟ್ರೀಯ

ಡಿ.26ಕ್ಕೆ ಅಮಿತ್‌ ಶಾ ಅಸ್ಸಾಂ ಭೇಟಿ

ಡಿ.26ಕ್ಕೆ ಅಮಿತ್‌ ಶಾ ಅಸ್ಸಾಂ ಭೇಟಿ

ಗುವಾಹಟಿ, ಡಿಸೆಂಬರ್ 23: ಅಸ್ಸಾಂನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಡಿ.26ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಶಾ ಅವರ ಭೇಟಿ ವೇಳೆ ಹಲವು ವಿಪಕ್ಷಗಳ ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.

ಇತ್ತೀಚೆಗೆ ನಡೆದ ಬೋಡೋಲ್ಯಾಂಟ್‌ ಪ್ರಾಂತೀಯ ಪರಿಷತ್‌ (ಬಿಟಿಸಿ) ಚುನಾವಣೆಯಲ್ಲಿ ಬಿಜೆಪಿ ಮತ್ತು ಅವರ ಮಿತ್ರಪಕ್ಷಗಳ ವಿಜಯದ ನಂತರ ಇದೇ ಮೊದಲ ಬಾರಿಗೆ ಅಮಿತ್‌ ಶಾ ಅಸ್ಸಾಂಗೆ ಭೇಟಿ ನೀಡುತ್ತಿದ್ದಾರೆ.

ತಮ್ಮ ಭೇಟಿ ವೇಳೆ ಅಮಿತ್‌ ಶಾ, ರಾಜ್ಯದ ಪಕ್ಷದ ನಾಯಕರೊಂದಿಗೆ ಪ್ರಮುಖ ಸಭೆ ನಡೆಸಿ, ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲಿದ್ದಾರೆ.

2021ರ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಇಲ್ಲಿ 126 ಸದಸ್ಯತ್ವದ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಅಮಿತ್‌ ಶಾ ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು.

ಸುದ್ದಿ ಓದಿ