ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ನಿಂದ ಅಂಬೇಡ್ಕರ್ ಜಯಂತಿ, ಪ್ರಮಾಣ ಪತ್ರ ವಿತರಣೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ. 15: ಪಟ್ಟಣದ ಉದ್ಯೋಗ ಮತ್ತು ವೃತ್ತಿಪರ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ನಿಂದ ಅಂಬೇಡ್ಕರ್ ಜಯಂತಿ ಹಾಗೂ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಟ್ರಸ್ಟ್ನ ಮ್ಯಾನೇಂಜಿಗ್ ಟ್ರಸ್ಟಿ ಉಸ್ಮಾನ್ಬಾಷಾ ಮಾತನಾಡಿ
ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ತಾರತಮ್ಯ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಧೀಮಂತ ವ್ಯಕ್ತಿಯಾಗಿದ್ದರು, ಕೇವಲ ದಲಿತರ ಪರವಾಗಿರದೇ ಸಮಾಜದ ಸರ್ವರ ಏಳಿಗೆಗಾಗಿ ಶ್ರಮವಹಿಸಿದ ಧೀಮಂತ ವ್ಯಕ್ತಿಯಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಅನುಭವಿಸಿದ ದೌರ್ಜನ್ಯ, ಹಿಂಸೆ, ಅವಮಾನವನ್ನು ಎದೆಗುಂದದೆ ನಿಭಾಯಿಸಿ ಸಂವಿಧಾನ ರಚಿಸಿ ಎಲ್ಲರಿಗೂ ಅವಕಾಶ ಹಕ್ಕುಗಳನ್ನು ಕಲ್ಪಿಸುವ ಮೂಲಕ ಅಸಮಾನತೆಯನ್ನು ತೊಡೆದು ಹಾಕಿದರು, ಅವರು ರಚಿಸಿದ ಈ ಮಾಹನ್ ಸಂವಿಧಾನಕ್ಕೆ ಯಾವುದೆ ರೀತಿಯ ಧಕ್ಕೆ ಬಾರದಂತೆ ನಡೆದುಕೊಂಡರೆ ಅದುವೇ ಅವರಿಗೆ ನೀಡುವ ಗೌರವವಾಗಿದೆ ಎಂದರು.
ಟ್ರಸ್ಟ್ನ ಕಾರ್ಯದರ್ಶಿ ಶಂಶಾದ್ ಬೇಗಂ ಮಾತನಾಡಿ ನಮ್ಮ ಟ್ರಸ್ಟ್ನಿಂದ ಮೂರು ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿ ನೀಡಲಾಗಿದೆ ಇದರಿಂದ ಆರ್ಥಿಕ ಸಬಲೀಕರಣ ಹೊಂದುವುದು, ಗೌರವ ಮತ್ತು ಘನತೆಯಿಂದ ಜೀವನ ರೂಪಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರು ಬಡವರ ಪಾಲಿನ ದೈವಶಕ್ತಿಯಾಗಿದ್ದಾರೆ ಎಂದರೆ ತಪ್ಪಿಲ್ಲ, ಇಂದು ಮಹಿಳೆಯರು ಸಬಲರಾಗುವುದರಲ್ಲಿ ಅಂಬೇಡ್ಕರ್ ಅವರ ಪಾತ್ರ ಹಿರಿಯದ್ದಾಗಿದೆ, ಅವರ ತತ್ವಾಧರ್ಶಗಳನ್ನು ಜೀವನದ್ಲಿ ಅಳವಡಿಸಿಕೊಳ್ಳಬೇಕು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುವಂತೆ ಕರೆ ನೀಡಿದರು.
ಉಚಿತ ಹೊಲಿಗೆ ತರಬೇತಿ ಪಡದು ಪ್ರಮಾಣ ಪತ್ರ ಸ್ವೀಕರಿಸಿದ ಶೋಭಾ ರಾಜು ಮಾತನಾಡಿ ಉಚಿತವಾಗಿ ನೀಡಿದ ಈ ತರಬೇತಿ ತುಂಬಾ ಉಪಯುಕ್ತವಾಗಿದೆ, ಟ್ರಸ್ಟ್ನಿಂದ ಇನ್ನು ಅನೇಕ ಮಹಿಳೆಯರಿಗೆ ಉಪಯುಕ್ತ ತರಬೇತಿಗಳು ದೊರೆಯಲಿ, ಬಡವರಿಗೆ ಬದುಕು ಕಟ್ಟಿಕೊಳ್ಳುವಲ್ಲಿ ಇಂತಹ ತರಬೇತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ವಿವಿಧ ಕ್ರಿಡೇಗಳಲ್ಲಿನ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ನ ಅಧ್ಯಕ್ಷೆ ಜಿ ಸರೋಜ ವಹಿಸಿದ್ದರು.ಗೌರವಾಧ್ಯಕ್ಷ ಎಲ್.ರೆಡ್ಡಿನಾಯ್ಕ್ ಇದ್ದರು. ನಿಶಾ ಪಟೇಲ್ ಸ್ವಾಗತಿಸಿ ನಿರೂಪಿಸಿದರು.