ಇಂಡಿ

ಸ್ವಾಭಿಮಾನಿ ಬದುಕಿನ ದಾರಿ ತೋರಿದ ಮಹಾನಾಯಕ ಅಂಬೇಡ್ಕರರು: ಬಸವರಾಜ

ಸ್ವಾಭಿಮಾನಿ ಬದುಕಿನ ದಾರಿ ತೋರಿದ ಮಹಾನಾಯಕ ಅಂಬೇಡ್ಕರರು:  ಬಸವರಾಜ


ಇಂಡಿ 06: ದಮನಿರತರ ಧ್ವನಿಯಾಗಿ, ಶೋಷಿತರಿಗೆ ಕಿವಿಯಾಗಿ, ಸ್ವಾಭಿಮಾನಿ ಬದುಕಿನ ದಾರಿ ತೋರಿಸಿದ  ಧೀಮಂತ ನಾಯಕ ಇಡೀ ವಿಶ್ವವೇ ಮೆಚ್ಚಿಕೊಂಡಾಡುವ ನಮ್ಮ ಸಂವಿಧಾನ ರಚನೆಯ ರೂವಾರಿ ಅಂಬೇಡ್ಕರರು ಎಂದು ತಹಸೀಲ್ದಾರ ಬಸವರಾಜ ಐ.ಈ ಹೇಳಿದರು. 

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಂದಾಯ ಇಲಾಖೆ, ಪುರಸಭೆ ಕಾರ್ಯಾಲಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಡಾ. ಅಂಬೇಡ್ಕರ್ ಮಹಾಪರಿ ನಿರ್ಮಾಣ ದಿನ ಆಚರಿಸಲಾಯಿತು. 

ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ.ಇಂಡಿ, ಪುರಸಭೆ ಮುಖ್ಯಾಧಿಕಾರಿ ಕೆ.ಎಸ್‌.ಲಕ್ಷ್ಮೀಶ, ಸಿ.ಪಿ.ಐ ರಾಜಶೇಖರ ಬಡೆದೇಸಾರ, ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ, ಮಾಲಾರೆ​‍್ಣ ಮಾಡಿದರು. 

ನಿಜಣ್ಣ ಕಾಳೆ, ಬಿ.ಎಸ್‌.ಸಿಂಘೆ, ಸಿ.ವಿ.ಕಾಲೆಭಾಗ, ಶಿವಶರಣ ಹುಚ್ಚಪ್ಪ, ಮುತ್ತು ಮುರಾಳ ಮತ್ತಿತರಿದ್ದರು. 


ಸುದ್ದಿ ಓದಿ