ಇಂಡಿ

ದೇಶಕ್ಕೆ ಅಂಬೇಡ್ಕರ ಅವರು ನೀಡಿದ ಕೊಡುಗೆ ಅನನ್ಯ: ಪಟ್ಟೇದ

ದೇಶಕ್ಕೆ ಅಂಬೇಡ್ಕರ ಅವರು ನೀಡಿದ ಕೊಡುಗೆ ಅನನ್ಯ: ಪಟ್ಟೇದ


ಇಂಡಿ26:  ಭಾರತದ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯರು ಅನುಸರಿಸಬೇಕು. ಅಂಬೇಡ್ಕರ ನಮ್ಮ ದೇಶಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್‌.ಪಟ್ಟೇದ ಹೇಳಿದರು. 

 ಶುಕ್ರವಾರ ಪಟ್ಟಣದ ಜಿಆರ್‌ಜಿ ಕಲಾ, ವೈಎಪಿ ವಾಣಿಜ್ಯ ಮತ್ತು ಎಂ.ಎಫ್‌.ದೋಶಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಭಾರತ ಸಂವಿಧಾನವು ವಿಶ್ವದ ಯಾವುದೇ ಸಾರ್ವಭೌಮ ದೇಶದ ಸಂವಿಧಾನಕ್ಕಿಂತಲೂ ದೊಡ್ಡದಾಗಿದೆ. ಭಾರತದ ಆತ್ಮ ನಾವು ಅಂಗೀಕರಿಸಿದ ಸಂವಿಧಾನವಾಗಿದೆ ಎಂದರು. 

ಪ್ರಾಚಾರ್ಯ ಎಸ್‌.ಬಿ.ಜಾಧವ ಮಾತನಾಡುತ್ತಾ ಭಾರತದ ಸಂವಿಧಾನವು ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವವನ್ನು ಒದಗಿಸುತ್ತದೆ. ಶಾಂತಿಯುತವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ರಾಷ್ಟ್ರೀಯ ಗುರಿಗಳನ್ನು ಸಾಧಿಸುವ ಭಾರತದ ಜನರ ಬದ್ಧತೆಯನ್ನು ಇದು ಒತ್ತಿ ಹೇಳುತ್ತದೆ ಎಂದರು.  

ಸಹಾಯಕ ಪ್ರಾಧ್ಯಾಪಕ ಡಾ.ಜಯಪ್ರಸಾದ ಡಿ,  ಐಶ್ವರ್ಯ, ಡಾ.ಆನಂದ ಸಿ ನಡವಿನಮನಿ, ಡಾ.ಸುರೇದ್ರ ಕೆ ಮಾತನಾಡಿದರು.  

ಡಾ.ಅರುಣಕುಮಾರ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ