ವಿಜಯಪುರ

ಅಂಬವ್ವ ಖೇಡ್ ಆದರ್ಶಗಳು ಎಲ್ಲರಿಗೂ ಪ್ರೇರಣೆ

ಅಂಬವ್ವ ಖೇಡ್ ಆದರ್ಶಗಳು ಎಲ್ಲರಿಗೂ ಪ್ರೇರಣೆ

ಲೋಕದರ್ಶನ ವರದಿ 

ವಿಜಯಪುರ 27: ನಗರದ ಬಿಡಿಪಿಎಚ್ಡಬ್ಲ್ಯೂ ಸಂಸ್ಥೆಯ ಆಶ್ರಯದಲ್ಲಿ ಸಂಸ್ಥೆಯ ಸಂಸ್ಥಾಪಕ ದಿವಂಗತ ಎಂ.ಎಸ್‌. ಖೇಡ್ ಅವರ ತಾಯಿ ದಿ. ಅಂಬವ್ವ ಖೇಡ್ ಅವರ 36ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅಂಬವ್ವ ಖೇಡ್ ಮಹಾವಿದ್ಯಾಲಯದಲ್ಲಿ ಸೋಮವಾರ ಆಚರಿಸಲಾಯಿತು.  

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಖಜಾಂಚಿ ವಿನೋದ್ ಎಂ. ಖೇಡ್, “ತಾಯಿ ಅಂಬವ್ವ ಖೇಡ್ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಿಂದಲೇ ಎಂ.ಎಸ್‌. ಖೇಡ್ ಅವರು ಜಿಲ್ಲೆಯ ವಿಶೇಷಚೇತನರು ಹಾಗೂ ಬಡ ಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಸಾಧ್ಯವಾಯಿತು. ಅವರ ಆದರ್ಶಗಳು ಇಂದಿಗೂ ನಮಗೆ ದಾರೀದೀಪವಾಗಿವೆ” ಎಂದರು.  

ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ವಿಜಯಲಕ್ಷ್ಮಿ ಹಿಪ್ಪರಗಿ ಮಾತನಾಡಿ, “ಅಂಬವ್ವ ಖೇಡ್ ಅವರ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ. ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.  

ಎಸ್ಕೆವಿ ಎಂ.ಎಸ್‌. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಡಿ. ಹೆಬ್ಬಿ, “ಅಂಬವ್ವ ಖೇಡ್ ಅವರು ಸಂಸ್ಥೆಯ ಎಲ್ಲ ಸಿಬ್ಬಂದಿಗೆ ಅನ್ನದಾತೆಯಾಗಿದ್ದರು. ಅವರ ಕೊಡುಗೆ ಸದಾ ಸ್ಮರಣೀಯ” ಎಂದು ನುಡಿದರು.  

ಕಾರ್ಯಕ್ರಮದಲ್ಲಿ ಮಂಡಳಿಯ ನಿರ್ದೇಶಕರಾದ ವಿಜಯಕುಮಾರ ಎಂ. ಖೇಡ್, ರೇಖಾ ವಿ. ಖೇಡ್, ವಿಕಾಸ್ ಖೇಡ್, ರಾಜಶ್ರೀ ವಿ. ಖೇಡ್, ಪಿಯು ಕಾಲೇಜಿನ ನೋಡಲ್ ಅಧಿಕಾರಿ ಶಂಕರ ಭಾವಿಕಟ್ಟಿ, ಐಟಿಐ ಕಾಲೇಜಿನ ಪ್ರಾಂಶುಪಾಲ ಡಿ.ಎನ್‌. ಕೋಳಿ, ಅಪ್ಪು ಇಂಡಿ, ಡೆನ್ನಿಸ್ ಕುಂದರಗಿ, ಪ್ರಕಾಶ ರುದ್ರಮಣಿ, ದಾನಮ್ಮ ಕೊಟ್ನಾಳ ಸೇರಿದಂತೆ ಸಂಸ್ಥೆಯ ವಿವಿಧ ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ