ಗದಗ

ಅಮರಾಪುರ ಐತಿಹಾಸಿಕ ಹಿನ್ನೆಲೆಯ ಪವಿತ್ರ ಗ್ರಾಮ: ಬಿ.ಟಿ. ಚಂದ್ರಶೇಖರ್

ಅಮರಾಪುರ ಐತಿಹಾಸಿಕ ಹಿನ್ನೆಲೆಯ ಪವಿತ್ರ ಗ್ರಾಮ: ಬಿ.ಟಿ. ಚಂದ್ರಶೇಖರ್


ಲಕ್ಕೇಶ್ವರ, ಸೆ. 24: ಅಮರಾಪುರ ಗ್ರಾಮವು ಹಲವು ಐತಿಹಾಸಿಕ ಹಿನ್ನೆಲೆಗಳನ್ನು ಹೊಂದಿರುವ ಪವಿತ್ರ ಗ್ರಾಮವಾಗಿದೆ ಎಂದು ರಾಜ್ಯ ರೈತೋದಯ ಹಸಿರು ಸೇನೆ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ, 2028ರ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಸೇವಾ ಆಕಾಂಕ್ಷಿ ಬಿ.ಟಿ. ಚಂದ್ರಶೇಖರ್ ಹೇಳಿದರು.  

ತಾಲೂಕಿನ ಹುಲೂರು ಹಾಗೂ ಅಮರಾಪುರ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಗಳ ದರ್ಶನ ಪಡೆದ ಬಳಿಕ ಅಮರಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.  

ಗ್ರಾಮದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ಉಳಿಸಿಕೊಂಡು, ಗ್ರಾಮದ ಅಭಿವೃದ್ಧಿಗೆ ಅಗತ್ಯವಾದ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.  ಕಾರ್ಯಕ್ರಮದಲ್ಲಿ ಪೂಜಾರಿಗಳು, ಗ್ರಾಮದ ಗುರುಹಿರಿಯರು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ