ವಿದ್ಯೆಯ ಜೊತೆಗೆ ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ: ವೀರೇಶ್
ಲೋಕದರ್ಶನ ವರದಿ
ಮರಿಯಮ್ಮನಹಳ್ಳಿ 18: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಮುಖ್ಯವಾಗಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ಉದ್ಯಮಿ ಹಾಗೂ ಸಮಾಜಸೇವಕ ಎನ್ ಟಿ ವೀರೇಶ್ ತಿಳಿಸಿದರು ಅವರು ಸಮೀಪದ ಗುಂಡಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗೆ ಗುರಿ ಇರಬೇಕು ನಾನೇನು ಆಗಬೇಕೆನ್ನುವ ಗುರಿಯನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ಖಂಡಿತವಾಗಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ನಂತರ ಶಾಲೆಯ ಮಕ್ಕಳಿಂದ ಭಾಷಣ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎ ಸ್ವಾಮಿ ಮತ್ತು ಆರ್ ರಮೇಶ್ ಹಾಗೂ ಎಲ್ಲಾ ಸದಸ್ಯ ಗ್ರಾಮದ ಮುಖಂಡ ಸಣ್ಣ ರಾಮಪ್ಪ, ಎನ್ ಬಿಮಪ್ಪ, ಉಮೇಶ್ ಬಿ ಓಬಳೇಶ್, ಬಿ ಅಲ್ಲ ಬಕ್ಷಿ ಡಿ ಹುಲೇಪ್ಪ ಫಕ್ಕಿರ್ಪ ಸೋಮಣ್ಣ ಹನುಮಂತಪ್ಪ ಚಂದ್ರ್ಪ ಗ್ರಾಮ ಪಂಚಾಯಿತಿ ಸದಸ್ಯ ಸೋಮಣ್ಣ ಎಚ್‌ಬಿ ಕೃಷ್ಣ ಪಿ ಹುಲಿಗೆಮ್ಮ ಮತ್ತು ಗ್ರಾಮದ ಯುವಕರು ಭಾಗವಹಿಸಿದ್ದರು