ಅಲ್ಲಂ ಚನ್ನಪ್ಪ ಅಧಿಕಾರ ಸ್ವೀಕಾರ
ಬಳ್ಳಾರಿ 15: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 15ರಂದು ಮಹಾವಿದ್ಯಾಲಯದ ಆಡಳಿತಮಂಡಳಿಯ ಅಧ್ಯಕ್ಷ ಅಲ್ಲಂ ಚನ್ನಪ್ಪ, ಅಧಿಕಾರ ಸ್ವೀಕಾರ ಮತ್ತು ಮಹಾವಿದ್ಯಾಲಯದ ಸಿಬ್ಬಂದಿ ವರ್ಗದೊಂದಿಗೆ ಅಧೀಕೃತ ಭೇಟಿ ಕಾರ್ಯಕ್ರಮ ಜರುಗಿತು.
ಅಲ್ಲಂ ಚನ್ನಪ್ಪನವರು ಸಿಬ್ಬಂದಿಯವರನ್ನು ಉದ್ದೇಶಿಸಿ ಮಾತನಾಡಿ ನಮ್ಮ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ಈ ಕಲ್ಯಾಣ ಕರ್ನಾಟಕ ಪ್ರಾಂತದಲ್ಲಿ ನಾಲ್ಕು ದಶಕಗಳಿಂದ ಹೆಸರಾಂತ ಈ ಮಹಾವಿದ್ಯಾಲಯದಿಂದ ಸಾವಿರಾರು ವಿದ್ಯಾರ್ಥಿಗಳು, ಇಂದು ದೇಶ ವಿದೇಶಗಳಲ್ಲಿ ಉನ್ನತಸ್ಥಾನದಲ್ಲಿದ್ದಾರೆ. ಹಾಗೇನೇ ನೀವುಸಹಾ ಇಂದಿನ ಕಾಲಕ್ಕೆ ಉಪಯುಕ್ತವಾದ ಅನುಕೂಲತೆಗಳನ್ನು, ನವೀನ ಪದ್ದತಿಗಳನ್ನು ಅಳವಡಿಸಿ ಇಂದಿನ ಯುವ ವಿದ್ಯಾರ್ಥಿಗಳನ್ನು ಸುಸಜ್ಜಿತರಾಗಿ ತಯರಾಗಿಸಬೇಕೆಂದು, ವಿದ್ಯಾಲಯಕ್ಕೆ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸುವದರಲ್ಲಿ, ಹಾಗೂ ಬೆಳವಣಿಗೆಯಲ್ಲಿ ಯಾವಾಗಲು ನಾವುಗಳು ಮುಂಚೂಣಿಯಲ್ಲಿರುತ್ತೇವೆ, ವಿದ್ಯಾರ್ಥಿಗಳಿಂದ ರಾಜ್ಯ ಮಟ್ಟದಲ್ಲಿ ಒಳ್ಳೇಯ ಪ್ರಸಸ್ತಿ ವಿಜೆತರನ್ನು ತರಲು ಶ್ರಮ ಪಡಬೇಕೆಂದು” ಕೋರಿದರು.
ಪ್ರಾಂಶುಪಾಲ ಡಾ. ಟಿ. ಹನುಮಂತರೆಡ್ಡಿ, ಮಹಾವಿದ್ಯಾಲಯದ ಎಲ್ಲಾವಿಭಾಗಗಳ ಮುಖ್ಯಸ್ಥರನ್ನು ಪರಿಚಯಿಸಿದರು. ಮಹಾವಿದ್ಯಾಲಯದ ಸಕಲ ಸಿಬ್ಬಂದಿಯವರೂ ನೂತನ ಅಧ್ಯಕ್ಷ ಅಲ್ಲಂ ಚನ್ನಪ್ಪ ನವರ ಮಾರ್ಗದರ್ಶನದಲ್ಲಿ ಕಾಲೇಜಿನ ಅಭಿವೃದ್ಧಿಗಾಗಿ, ವಿಧ್ಯಾರ್ಥಿ ವೃಂದದವರಿಗಾಗಿ ಶ್ರಧ್ಧೆ,ನಿಷ್ಟೆಯಿಂದ ಹಾಗು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವೆವು ಎಂದು ನುಡಿದರು.
ವೀ.ವಿ.ಸಂಘದ ವೀ.ವಿ.ಸಂಘದ ಅಧ್ಯಕ್ಷ ಗುರುಶಿದ್ದಸ್ವಾಮಿ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು ಶುಭಹಾರೈಸಿದರು. ಮತ್ತು ಪ್ರಾಂಶುಪಾಲರಾದ ಡಾ. ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ. ಸವಿತಾ ಸೊನೋಳಿ, ಮಹಾವಿದ್ಯಾಲಯದ ಸಕಲ ಸಿಬ್ಬಂದಿಯವರೂ ಭಾಗವಹಿಸಿದ್ದರು.