ಶಿಗ್ಗಾವ್

ಮದ್ಯ ವರ್ಜನ ಶಿಬಿರದ ಕಾರ್ಯಕ್ರಮ

ಮದ್ಯ ವರ್ಜನ ಶಿಬಿರದ ಕಾರ್ಯಕ್ರಮ

ಶಿಗ್ಗಾವಿ 13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರವು ಮಹತ್ವಾಕಾಂಕ್ಷೆ ಯೋಜನೆಯಾಗಿ ಇಂದು ಕರ್ನಾಟಕ  ಪ್ರತಿ ಹಳ್ಳಿಗಳಲ್ಲಿ ತೆಲೆಯೆತ್ತಿ, ಗ್ರಾಮೀಣ ಪರಿವರ್ತನೆಗೆ ಹೊಸ ಕಲ್ಪನೆ ಬರೆದಿದೆ ಎಂಬ ಸಂದೇಶವನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ ಜಗದೀಶ ಹೇಳಿದರು. 

ಪಟ್ಟಣದ ಸವಣೂರ ರಸ್ತೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರಿ​‍್ಡಸಿದ್ದ 1599 ನೇ ಮದ್ಯ ವರ್ಜನ ಶಿಬಿರದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದಅವರು ದುಶ್ಚಟಗಳಿಗೆ ದಾಸರಾಗುತ್ತಿರುವುದು ಸಾಮಾನ್ಯಜನರೇ ಹೊರತು ಶ್ರೀಮಂತರು, ಅಗರ್ಭಶ್ರೀಮಂತರು, ಐಷಾರಾಮಿಗಳಲ್ಲ ಆದ್ದರಿಂದ ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೋಳಿಸಿ ಉನ್ನತ ಹುದ್ದೆಯನ್ನು ಅಲಂಕರಿಸುವಂತೆ ಮಾಡಲು ವ್ಯಸನಿಗಳು ಮದ್ಯಪಾನ ತ್ಯಜಿಸಿ ಧರ್ಮಸ್ಥಳ ಸಂಸ್ಥೆ ಆಯೋಜಿಸುವ ಮದ್ಯ ವರ್ಜನ ಶಿಬಿರಗಳ ಪ್ರಯೋಜನ ಪಡೆದು ಮನ ಪರಿವರ್ತನೆಯಿಂದ ಮುಖ್ಯ ವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು. 

ಪುರಸಭೆ ಸದಸ್ಯೆ ವಸಂತಾ ಬಾಗೂರ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಇಂತಹ ಶಿಬಿರಗಳ ಅವಶ್ಯಕತೆಯಿದ್ದುಅದರ ಸದುಪಯೋಗವನ್ನುಮದ್ಯ ವ್ಯಸನಿಗಳು ಪಡೆದುಕೊಂಡು ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸುವರ್ಣ ಅವಕಾಶ ಹಾಗೂ ಇಂದಿನಿಂದ ಮದ್ಯಪಾನ ತ್ಯಜಿಸೋಣ ಎಂದು ಸಂಕಲ್ಪ ಮಾಡೋಣ ಎಂದರು. 

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಹ ಕಾರ್ಯದರ್ಶಿರ ಮೇಶ್‌ಕೋನರೆಡ್ಡಿ, ಮುಖ್ಯಮಂತ್ರಿಗಳ ವಿಕಟ ಕಾರ್ಯದರ್ಶಿ ಮಲ್ಲೇಶಪ್ಪ ಹೊರಪೇಟೆ, ಸವಣೂರ ಉಪವಿಭಾಗಾಧಿಕಾರಿ ರಾಯಪ್ಪ,  ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭಾ ಸದಸ್ಯರಾದ ದಯಾನಂದ ಅಕ್ಕಿ, ಮಂಜುನಾಥ್ ಬ್ಯಾಹಟ್ಟಿ. ಮಮತಾಜ ಗೋಟಗೋಡಿ, ತಾಲೂಕಯೋಜನಾಧಿಕಾರಿ ಉಮಾಏನ್ ಜಿ, ನಂದಕುಮಾರ್ ಸೇರಿದಂತೆ ಶಿಬಿರಾರ್ಥಿಗಳು ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ