ಕರಾಟೆ ಸ್ಪರ್ಧೆಯಲ್ಲಿ ಅಕ್ಷರ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಅಮೋಘ ಸಾಧನೆ
ಗಂಗಾವತಿ 17: ಕೊಪ್ಪಳ ಜಿಲ್ಲಾ ಕ್ರೀಡಾಂಗಣ ದಲ್ಲಿನಡೆದ ಜಿಲ್ಲಾ ಪಂಚಾಯತ್ ಕೊಪ್ಪಳ. ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ.ಹಾಗೂ ನ್ಯಾಷನಲ್ ಸ್ಟ್ರೀಟ್ ಕರಾಟೆ ಅಕಾಡೆಮಿ ಕೊಪ್ಪಳ. ಇವರ ಸಂಯೋಗದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಪ್ರಥಮಿಕ ಹಾಗೂ ಪ್ರೌಢಶಾಲೆ ಮಕ್ಕಳ ಕರಾಟೆ ಸ್ಪರ್ಧೆಯಲ್ಲಿ. ಗಂಗಾವತಿ ನಗರದ ಅಕ್ಷರ ಪಬ್ಲಿಕ್ ಸ್ಕೂಲ್ ಬಾಲಕರ ವಿಭಾಗದಲ್ಲಿ .ಕಿಶೋರ್ ಕುಮಾರ್. 45 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ,ವೀವಂತ್ ಗೌಡ. 55 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ,ಸುಮಿತ್ ಶೆಟ್ಟಿ 58 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನಬಾಲಕಿಯರ ವಿಭಾಗದಲ್ಲಿ ಸಿಂಚನ. 30 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ, ಲಿಖಿತ. 46 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ.ನಾಲ್ಕು ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಥಿಗಳು ಪಾಠದ ಜೊತೆಗೆ ಬಿಡುವಿನ ವೇಳೆಯಲ್ಲಿ ಕರಾಟೆ ಕಲಿಯುವುದರಿಂದ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಸಹಕಾರಿಯಾಗುತ್ತದೆ. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಆತ್ಮ ಧೈರ್ಯವನ್ನು ತುಂಬುತ್ತದೆ ಹಾಗೂ ನಮ್ಮ ಶಾಲೆಯಿಂದ ಕರಾಟೆ ತರಬೇತಿ ಪಡೆದು ರಾಜ್ಯಮಟ್ಟಕ್ಕೆ. ಆಯ್ಕೆಯಾಗಿ ನಮ್ಮ ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಉಪಾಧ್ಯಾಯನಿ ಸತಿ ಹೀಮಾ ರವಿ ಚೈತನ್ಯ ರೆಡ್ಡಿ ಅಭಿನಂದಿಸಿ ಹೇಳಿದರು.ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಡೈರೆಕ್ಟರ್ ರವಿ ಚೈತನ್ಯ ರೆಡ್ಡಿ ಶುಭಕೋರಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ತಿಮ್ಮಪ್ಪ ಕರಾಟೆ ಶಿಕ್ಷಕರಾದ ಅನ್ವರ್ ಪಾಷಾ ಶಾಲೆಯ ಶಿಕ್ಷಕರ ವೃಂದದಿಂದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು