ಕೆಪಿಸಿಸಿ ಸಂಯೋಜಕರಾಗಿ ಅಕ್ಕಿ ತೋಟೇಶ್ ಆಯ್ಕೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 16: ಈ (ಹ.ಬೊ) ಕ್ಷೇತ್ರದ ವಿಧಾನ ಸಭಾ ಚುನಾವಣಾಯಲ್ಲಿ ಕೆಪಿಸಿಸಿ ಸಂಯೋಜಕರಾಗಿ ಅಕ್ಕಿ ತೋಟೇಶ್ ಅವರನ್ನು ಆಯ್ಕೆಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರಮಾಣ ಪತ್ರ ಆದೇಶ ನೀಡಿದ್ದಾರೆ.
ಪಕ್ಷ ನಿಷ್ಠೆ ಹಾಗೂ ಕಾಂಗ್ರೇಸ್ ಅಭ್ಯರ್ಥಿಯ ಪರವಾಗಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿ ಗೆಲುವಿಗೆ ಶ್ರಮಿಸಿ ಸ್ಥಳೀಯ ಮುಖಂಡರನ್ನು ಗಣನೆಗೆ ತೆಗೆದುಕೊಂಡು ಪಕ್ಷ ಬಲವರ್ಧನೆ ಮಾಡುವಂತೆ ನಿರ್ದೇಶಿಸಿ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಕ್ಕಿ ತೋಟೇಶ್ ಈ ಬಗ್ಗೆ ಮಾತನಾಡಿ ಪಕ್ಷದಲ್ಲಿ ಪ್ರಮಾಣಿಕ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸಿದ್ದೇನೆ ನನ್ನ ಪ್ರಮಾಣಿಕ ಕಾರ್ಯಕ್ಕೆ ದೊರೆತ ಫಲವಿದು, ಹಗರಿಬೊಮ್ಮನಹಳ್ಳಿ ಕ್ಷೇತ್ರಾಧ್ಯಾಂತ ಕಾಂಗ್ರೇಸ್ ಪಕ್ಷವನ್ನು ಬಲವರ್ಧನೆ ಮಾಡಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸುವಲ್ಲಿ ಯಾವುದೇ ಅನುಮಾನವಿಲ್ಲ, ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇದ್ದು ಮತದಾರರು ಕಾಂಗ್ರೇಸ್ ಪಕ್ಷವನ್ನು ಆಶೀರ್ವದಿಸುತ್ತಾರೆ, ನನಗೆ ನೀಡಿದ ಈ ಜವಾಬ್ದಾರಿಯನ್ನು ಪಕ್ಷದಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ನಿಭಾಯಿಸುವೆ ಎಂದರು.