ಅಖ್ತರ್ ಪ್ರಕರಣ; ವಿಚಾರಣೆಗೆ ಗೈರು ಹಾಜರಾದ ಕಂಗನಾಗೆ ಕೋರ್ಟ್ ಎಚ್ಚರಿಕೆ
ಮುಂಬೈ, ಸೆ 14 ಸಾಹಿತಿ ಜಾವೇದ್ ಅಖ್ತರ್ ಅವರ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ವಿಚಾರಣೆಗೆ ಹಾಜರಾಗದ ನಟಿ ಕಂಗನಾ ರನೌತ್ ವಿರುದ್ಧ ಇಲ್ಲಿನ ಸ್ಥಳೀಯ ನ್ಯಾಯಾಲಯ ಮಂಗಳವಾರ ಎಚ್ಚರಿಕೆ ನೀಡಿದೆ.
ಅಖ್ತರ್ ಪರವಾಗಿ ವಾದ ಮಂಡಿಸಿದ ವಕೀಲ ಜಯ್ ಭಾರದ್ವಾಜ್, ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಂಗನಾ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸುವಂತೆ ನನವಿ ಮಾಡಿದರು.
ವಿಚಾರಣೆಯ ಸಮಯದಲ್ಲಿ, ಅಖ್ತರ್ ಅವರು ತಮ್ಮ ಪತ್ನಿ ಶಬಾನಾ ಅಜ್ಮಿ ಜೊತೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಅಖ್ತರ್ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆ ಕುರಿತು ಫೆಬ್ರವರಿಯಲ್ಲಿ ಕಂಗನಾ ವಿರುದ್ಧ ಪ್ರಕರಣದ ದಾಖಲಾಗಿದ್ದು, ಅಂದಿನಿಂದ ಇಂದಿನವರೆಗೆ ಅವರು ಎಂಟು ವಿಚಾರಣೆಗಳನ್ನು ತಪ್ಪಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಕಂಗನಾ ಅವರ ಸಲಹೆಗಾರ ರಿಜ್ವಾನ್ ಸಿದ್ದಿಕಿ, ಕಂಗನಾ ನಿರಂತರವಾಗಿ ಪ್ರಯಾಣಿಸುತ್ತಿದ್ದರು ಮತ್ತು ಕೋವಿಡ್ ಸೋಂಕಿಗೆ ಗುರಿಯಾಗಿದ್ದರರು. ಆದ್ದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ವಿವರಣೆ ನೀಡಿದರು.
ಮುಂದಿನ ವಿಚಾರಣೆಯ ಸೆ 20ರಂದು ನಿಗದಿಪಡಿಸಿದ ನ್ಯಾಯಾಲಯ, ಅಂದು ಕಡ್ಡಾಯವಾಗಿ ಹಾಜರಾಗುವಂತೆ ಕಂಗನಾ ಅವರಿಗೆ ಸೂಚಿಸಿದೆ.