ಬಳ್ಳಾರಿ

ಅಧ್ಯಕ್ಷರಾಗಿ ಆಯಿಷಾ ಸಿದ್ದಿಖಾ ನೇಮಕ

ಅಧ್ಯಕ್ಷರಾಗಿ ಆಯಿಷಾ ಸಿದ್ದಿಖಾ ನೇಮಕ

ಬಳ್ಳಾರಿ 11:  ದಿ.10ಸಂಜೆ 5ಗಂಟೆಗೆ ಬಳ್ಳಾರಿ ಮಿಲ್ಲಾರಪೇಟೆಯಲ್ಲಿ ಸಿಟಿ ಬಸ್ ನಿಲ್ದಾಣದ ಹತ್ತಿರ ಕರ್ನಾಟಕ ಜನಸೈನ್ಯದ ಬಳ್ಳಾರಿ ಮಹಿಳಾ ಘಟಕದ ನಗರಾಧ್ಯಕ್ಷರಾಗಿ ಆಯಿಷಾ ಸಿದ್ದಿಖಾರವರು ಆಯ್ಕೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಿಲ್ಲಾರಪೇಟೆಯ ಕಲ್ಯಾಣಮಸ್ವಾಮಿಗಳು, ಕಮ್ಮರಚೇಡು ಮಠ ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಎರ್ರಿಸ್ವಾಮಿ, ನಬಿಸಾಬ್, ಖಲೀಫಾ ಪೆನುಕೊಂಡ ಸಾಹೇಬ್, ಪಾಲಿಕೆ ಸದಸ್ಯೆ ಪರ್ವೀನ್ ಬಾನು (ಬಂಡಿಮೋಟ್), ಮಹಮ್ಮದ್ ಫಾರೂಕ್, ಮಹಮ್ಮದ್ ಇಬ್ರಾಹಿಂ ಗೈಬು ನಮ್ಮ ಕರವೇ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಇದ್ರೀಸ್, ಟಿಪ್ಪು ಸುಲ್ತಾನ್ ಅಭಿಮಾನ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಮಹಮ್ಮದ್ ಆಜಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಕಲ್ಯಾಣಸ್ವಾಮಿಯವರಿಗೆ ಹಾಗೂ ಕರ್ನಾಟಕ ಜನಸೈನ್ಯ ರಾಜ್ಯಾಧ್ಯಕ್ಷರಾದ ಕೆ.ಎರ್ರಿಸ್ವಾಮಿಯವರಿಗೆ ಬಂಡಿಡಮೋಟ್‍ನ ಯುವ ಮುಖಂಡರಾದ  ಮಹಮ್ಮದ್ ಫಾರೂಕ್‍ರವರಿಗೆ ಮಹಮ್ಮದ್ ಇಬ್ರಾಹಿಂದ ಹಾಗೂ ಆಯಿಷಾರವರಿಗೆ ನಮ್ಮ ಕರವೇ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಇದ್ರಿಸ್‍ರವರು ಮಹಮ್ಮದ್ ಆಜಂ, ಜಿಲ್ಲಾಧ್ಯಕ್ಷರು ಅಭಿಮಾನಿಗಳ ಮಹಾವೇದಿಕೆ, ಸರ್ವೀಸ್ ನೂರ್, ಗೈಬು, ಗೋವಿಂದು, ಮಂಜು, ಇಮ್ರಾನ್, ಅಬ್ಬಾಸ್, ಜಬ್ಬಾರ್, ಆಟೋ ಸ್ಟ್ಯಾಂಡ್‍ನ ಲೀಡರ್‍ಗಳಿಗೆ ಸನ್ಮಾನಿಸಲಾಯಿತು. ಮಹಮ್ಮದ್ ಫಾರೂಕ್‍ರವರು ನಿರೂಪಣೆ ಮತ್ತು ವಂದಿಸಿದರು.

ಸುದ್ದಿ ಓದಿ