ಮುದ್ದೆಬಿಹಾಲ್

ಪ್ರಯಾಣಿಕರ ಬೇಡಿಕೆ ಇಡೇರಿಕೆ, ಮಾದರಿಯ ಸುಂದರ ಬಸ್ ನಿಲ್ದಾಣ ಮಾಡುವ ಗುರಿ: ಸಿ ಎಸ್ ನಾಡಗೌಡ

ಪ್ರಯಾಣಿಕರ ಬೇಡಿಕೆ ಇಡೇರಿಕೆ, ಮಾದರಿಯ ಸುಂದರ ಬಸ್ ನಿಲ್ದಾಣ ಮಾಡುವ ಗುರಿ: ಸಿ ಎಸ್ ನಾಡಗೌಡ

ಮುದ್ದೇಬಿಹಾಳ, 26: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಸರಕಾರ ಬಂದ ಮೇಲೆ ಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಮಹಿಳೆಯರು ಉಚಿತ ಬಸ್ ಸೇವೆ ನೀಡಿದೆ ಕಾರಣ ಪುಣ್ಯ ಕ್ಷೇತ್ರಗಳ ದರ್ಶನ ಹಾಗೂ ಇತರೇ ಧಾರ್ಮಿಕ ಸಭೆ ಸಮಾರಂಭಗಳಿಗೆ ಹೋಗಿಬರಲು  ಅನುಕೂಲವಾಗಿದೆ.  ಇದರಿಂದಾಗಿ ಮಹಿಳೆಯರ ಪ್ರಯಾಣದ ಸಂಖ್ಯೆ ಹೆಚ್ಚಾಗಿರುವುದರಿಂದ ಇನ್ನಷ್ಟು ಹೆಚ್ಚುವರಿ ಸರಕಾರಿ ಬಸ್‌ಗಳ ಬೇಡಿಕೆ ಪೂರೈಸಲಾಗುತ್ತಿದೆ ಜೊತೆಗೆ ಪಟ್ಟಣದ ಬಸ್ ನಿಲ್ದಾಣದ ರಸ್ತೆ ಸೇರಿದಂತೆ ಹಲವು ಮೂಲಬೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಾದರಿಯ ನಿಲ್ದಾಣ ಮಾಡಲಾಗುವುದು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ (ಅಪ್ಪಾಜಿ) ಹೇಳಿದರು. 

ಪಟ್ಟಣದ ತಾಲೂಕಾ ಬಸ್ ನಿಲ್ದಾಣ ಆವರಣದಲ್ಲಿ ಕೆ.ಎಸ್‌.ಆರ್‌.ಟಿ.ಸಿ ವತಿಯಿಂದ ಹಮ್ಮಿಕೊಂಡಿದ್ದ ಮುದ್ದೇಬಿಹಾಳದಿಂದ ಮೈಸೂರು, ಆಲೂರದಿಂದ ವಿಜಯಪುರ, ಮುದ್ದೇಬಿಹಾಳದಿಂದ ಬೆಳಗಾವಿ, ಮುದ್ದೇಬಿಹಾಳದಿಂದ ಮಿರಜ್ ನೂತನ ಬಸ್ ಸಂಚಾರಕ್ಕೆ ಮತ್ತು ಟಿಕೇಟ್ ಬುಕ್ಕಿಂಗ್ ಕೌಂಟರ್ ಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. 

ಸಧ್ಯ ದಸರಾ ಹಬ್ಬವು ಆಗಮಿಸುತ್ತಿದ್ದು ಮೈಸೂರು ದಸರಾ ಉತ್ಸವಕ್ಕೆ ಹೋಗಬೇಕೆನ್ನುವ ಮಹಿಳೆಯರ ಆಸೆ ಇದ್ದೇ ಇರುತ್ತದೆ ಕಾರಣ ಬೇಡಿಕೆಯಂತೆ ಇಲ್ಲಿಂದ ನೇರವಾಗಿ ಮೈಸೂರು ಸೇರಿದಂತೆ ಇತರೇ ಮೂರು ಬಸ್ ಪ್ರಾರಂಭಿಸಲಾಗಿದೆ. ಜೊತೆಗೆ ಕೆ.ಎಸ್‌.ಆರ್‌.ಟಿ.ಸಿಯಿಂದ ಟಿಕೇಟ್ ಬುಕ್ಕಿಂಗ್ ಕೌಂಟರ್ ಕೂಡ ಪ್ರಾರಂಭಿಸಲಾಗಿದೆ ಇದರಿಂದ ಬೆಂಗಳೂರು ಸೇರಿದಂತೆ ದೂರದ ಊರಿಗೆ ಹೋಗುವವರು ಮುಂಚಿತವಾಗಿಯೇ ಟಿಕೇಟ್ ಬುಕ್ಕಿಂಗ್ ಮಾಡಿಕೊಂಡು ಪ್ರಯಾಣ ಮಾಡಬಹುದಾಗಿದೆ. ಅದರಂತೆ ವಿಶೇಷವಾಗಿ ಬೆಂಗಳೂರಿಗೆ ಹೋಗುವ ಜನರಿಗಾಗಿ ಸಿಂದಗಿ ಬೆಂಗಳೂರು ಕೆ.ಎಸ್‌.ಆರ್‌.ಟಿ.ಸಿ ಸ್ಲಿಪರ್ ಕೋಚ್ ಬಸ್ ಪ್ರಾರಂಭಗೊಂಡಿದೆ  ಕಾರಣ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. 

ಸಧ್ಯ ಬಸ್ ನಿಲ್ದಾಣದ ಸಿಸಿ ರಸ್ತೆಯೂ ಸಂಪೂರ್ಣ ಹದಗೆಟ್ಟು ಹೋಗಿದೆ ಮಳೆ ಬಂದಾಗ ನೀರು ನಿಂತು ಸಾರ್ವಜಣಿಕರಿಗೆ  ಅನಾನುಕೂಲವನ್ನುಂಟು ಮಾಡುತ್ತದೆ ಕಾರಣ ಎಷ್ಟಿಮೇಟ್ ತಯಾರಿಸಿ ಕೊಡಿ ರಸ್ತೆ ನಿರ್ಮಿಸಲು ಮತ್ತು ಈಗಿರುವ ಡಿಪೋ ಅನ್ನು ಮೇಲ್ದರ್ಜೆಗೆರಿಸಿ ಪ್ರಯಾಣಿಕರಿಗೆ ಅಗತ್ಯ ಬಸ್‌ಗಳ ಸೌಲಭ್ಯ ಒದಗಿಸುವಂತೆ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಬಸ್ ನಿಲ್ದಾಣವನ್ನು ಸುಂದರ ಕಾಣುವಂತೆ ಮಾಡೋಣ, ಸಧ್ಯ ಬಸ್ ನಿಲ್ದಾಣದಲ್ಲಿ ಯಾವೂದೇ ಕಸ ಕಡ್ಡಿ ಬೀಳದಂತೆ ಸ್ವಚ್ಚತೆಯಿಂದ ಇರುವಂತೆ ನೋಡಿಕೊಳ್ಳಬೇಕು, ಸಿ ಸಿ ಕ್ಯಾಮೆರಾಗಳನ್ನು ಅಳವಡಿಸಿ ಕಳ್ಳತನ ಸೇರಿದಂತೆ ಇತರೇ ರೀತಿಯ ಅಕ್ರಮ ಅಪರಾಧ ಪ್ರಕರಣಗಳು ನಡೆಯದಂತೆ ಜಾಗೃತಿ ವಹಿಸಬೇಕು ಎಂದು ಡೀಪೋ ವ್ಯವಸ್ಥಾಪಕ ಅಬುಬಕರ ಮದಭಾವಿ ಅವರಿಗೆ ಸೂಚಿಸಿದರು. 

ಈ ವೇಳೆ  ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕೆ.ಎಸ್‌.ಆರ್‌.ಟಿ.ಸಿ ವಿಜಯಪುರ  ಜಿಲ್ಲಾ ವಿಭಾಗಿಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಶಾಸಕ  ಹಾಗೂ ಕರ್ನಾಟಕ ರಾಜ್ಯ ಸಾಬೂನು ಪತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ ಅಪ್ಪಾಜಿ ಅವರನ್ನು ಪುಸ್ಪಗುಚ್ಚ ನೀಡಿ ಸ್ವಾಗತಿಸಿದರು. ವಿಭಾಗಿಯ ಸಂಚಾರಿ ಅಧಿಕಾರಿ ದೇವಾನಂದ ಬಿರಾದಾರ, ಬಾಪುಗೌಡ ಪಾಟೀಲ, ಸಂಚಾರಿ ನೀರೀಕ್ಷಕ ಸಂಗಮೆಶ ಹೊಳಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಕಾಮರಾಜ ಬಿರಾದಾರ, ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಎಸ್ ಬಿ ಮೇಟಿ, ಗೋಪಿ ಮಡಿವಾಳರ,ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ