ಜಮಖಂಡಿ ನಗರವನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ
ಜಮಖಂಡಿ : 8: ಜಮಖಂಡಿ ಜಿಲ್ಲೆ ಮತ್ತು ಸಾವಳಗಿ ತಾಲೂಕ ಕೇಂದ್ರ ಮಾಡಲು ಸದನದಲ್ಲಿ ಸರಕಾರದ ಮೇಲೆ ಒತ್ತಡ ಹಾಕಲಾಗಿದೆ. ಬರುವ ದಿನಗಳಲ್ಲಿ ಜಮಖಂಡಿ ನಗರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯನ್ನು ಪಡಿಸುವ ಗುರಿಯನ್ನು ಹೊಂದಲಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸುಮಾರು 67 ಲಕ್ಷ ರೂಪಾಯಿಗಳ ಸುಸಜ್ಜಿತವಾದ ಮಳಿಗೆಗಳನ್ನು ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ನಗರವನ್ನು ಒಂದು ಸುಂದರ ಮತ್ತು ಸುಸಜ್ಜಿತವಾದ ನಗರವನ್ನಾಗಿ ಮಾಡಲು ಶ್ರಮಿಸಬೇಕಾಗಿದೆ. ಅಧಿಕಾರಿಗಳು ಸಹ ಕೈಜೋಡಿಸಿದರೆ ಮಾತ್ರ ಸುಂದರವಾದ ನಗರವಾಗಲು ಸಾಧ್ಯ. ಕಸಗಳನ್ನು ಬಿಸಾಡುವ ಖಾಲಿ ಬಿದ್ದ ಜಾಗಗಳನ್ನು ಅಭಿವೃದ್ಧಿಪಡಿಸಿ. ಅಲ್ಲಿಯೇ ಹೊಸ ಮಳಿಗೆಗಳನ್ನು ನಿರ್ಮಾಣ ಮಾಡಿ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತ ಮಹತರ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಜೆಟ್ ಮಂಡನೆ ಮಾಡಿದ್ದು ಸರಿ ಇಲ್ಲ. ರಾಜಕೀಯ ಧೋರಣೆಗಳನ್ನು ಮುಂದಿಟ್ಡು ಬಜೆಟ್ ಮಂಡನೆ ಮಾಡಿದ್ದಾರೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳನ್ನು ನಿಭಾಯಿಸುವದೆ ಅವರಿಗೆ ಕಷ್ಟದಾಯಕವಾಗಿದೆ. ಅದು ಬಹಳ ದಿನಗಳ ಕಾಲ ಮುಂದುವರಿಯದು. ಅದರ ಮಧ್ಯೆದಲ್ಲಿ ಬಜೆಟ್ ಮಂಡನೆ ಮಾಡಿದ್ದಾರೆ. ನಮ್ಮ ಪ್ರಕಾರ ಗ್ಯಾರಂಟಿಗಳನ್ನು ಜಾರಿಗೆಗೊಳಿಸಲು ಸುಮಾರು 78 ಸಾವಿರ ಕೋಟಿ ರೂ,ಗಳು ಬೇಕು. ಒಟ್ಟಾರೆಯಾಗಿ ಬಿಜೆಪಿ ಪಕ್ಷವನ್ನು ಮುಂದಿಟ್ಟುಕೊಂಡು ಈ ಬಜೆಟ್ ಮಂಡನೆ ಮಾಡಿರುವುದು ಸರಿ ಇಲ್ಲ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಸಂತೋಷ ಕಾಮಗೊಂಡ, ತಹಶೀಲ್ದಾರ ಸದಾಶಿವ ಮಕ್ಕೋಜಿ, ತಾಲೂಕ ಪಂಚಾಯತ ಇಒ ಗುರುಶಾಂತಪ್ಪ ಬೆಳುಂಡಗಿ, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ, ಮೋಹನ ಜಾಧವ, ನಾಗಪ್ಪ ಸನದಿ, ವೆಂಕಟೇಶ ಆದಾಪೂರ, ಅಜೇಯ ಕಡಪಟ್ಟಿ, ಯಮನೂರ ಮೂಲಂಗಿ, ರಮೇಶ ಆಲಬಾಳ, .ಶಿವಕುಮಾರ ನಾಯಕ, ಮಲ್ಲು ದಾನಗೊಂಡ, ಡಾ.ವಿಜಯಲಕ್ಷ್ಮಿ ತುಂಗಳ, ವಿಜಯಲಕ್ಷ್ಮಿ ಉಕಮನಾಳ ಸೇರಿದಂತೆ ಅನೇಕರು ಇದ್ದರು.
ಪೋಟೊ : ಎ, ಬಿ, ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಮಳಿಗೆ ಮತ್ತು ಶೌಚಾಲಯ ಕಟ್ಟಡದ ಭೂಮಿ ಪೂಜೆಯನ್ನು ಶಾಸಕ ಜಗದೀಶ ಗುಡಗುಂಟಿ ನೇರವೆರಿಸಿದರು,