ತಾಳಿಕೋಟಿ

ರಸ್ತೆಗಾಗಿ ರೈತರಿಂದ ಅಹೋರಾತ್ರಿ ಧರಣಿ

ರಸ್ತೆಗಾಗಿ ರೈತರಿಂದ ಅಹೋರಾತ್ರಿ ಧರಣಿ

ತಾಳಿಕೋಟೆ05: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಹೋಗಲು ದಾರಿ ಬಂದ್ ಮಾಡಿರುವ ಪೋರ್ಥ್‌ ಪಾರ್ಟನರ ಎನರ್ಜಿ ಪ್ರೈವೇಟ್ ಲಿ. ಕಂಪನಿ ವಿರುದ್ದ ರೈತರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು. 

ಬುಧವಾರದಂದು ರೈತರು ತಾಳಿಕೋಟಿಯಿಂದ ದೇವರ ಹಿಪ್ಪರಗಿ ರಸ್ತೆಗೆ ಹೊಂದಿಕೊಂಡು ಸೋಲಾರ್ ಪ್ಲ್ಯಾಂಟ್‌ಗೆ ಹೋಗುವ ರಸ್ತೆ ಬದಿಗೆ ಆಹೋರಾತ್ರಿ ಅನಿರ್ಧಿಷ್ಟ ಧರಣಿ ಪ್ರಾರಂಭಿಸಿದರು. 

ರೈತರ ಧರಣಿಗೆ ಸ್ಥಳಕ್ಕೆ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಭೇಟಿ  ಮಾಡಿ ಬೆಂಬಲ ನೀಡಿ ರೈತರನ್ನುದ್ದೇಶಿಸಿ ಮಾತನಾಡಿ, ಪೋರ್ಥ್‌ ಪಾರ್ಟನರ ಎನರ್ಜಿ ಪ್ರೈವೇಟ್ ಲಿ. ಕಂಪನಿಯವರ ಉದ್ದೇಶಪೂರ್ವಕವಾಗಿ ಕಂಪನಿಗೆ ಲೀಜ್ ಕೊಟ್ಟ ಜಮೀನುಗಳ ರೈತರನ್ನು ಪುಸಲಾಯಿಸಿ ದಾರಿ ಬಂದ್ ಮಾಡಿಸಿದ್ದಾರೆ. ಇದರಿಂದ ಸುಮಾರು 32 ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ತೊಂದರೆಯಾಗಿದೆ. ದಾರಿ ಬಂದ್ ಮಾಡಿದ ಕಾರಣ ಬಿತ್ತನೆ ಮಾಡಿದ ಬೆಳೆ ಕಟಾವು ಮಾಡಿಕೊಂಡು ಬರಲು ದಾರಿ ಇಲ್ಲದಂತಾಗಿ ಬೆಳೆಗಳು ಹಾಳಾಗುವ ಪರಿಸ್ಥಿತಿಗೆ ಬಂದಿದೆ. ರೈತರು ಕಂಪನಿಗೆ ಜಮೀನು 30 ವರ್ಷಗಳ ವರೆಗೆ ಲೀಜ್ ಕೊಟ್ಟಿದ್ದಾರೆ. ಅವರಿಗೆ ದಾರಿ ಬಗ್ಗೆ ಆಗಲಿ. ಇನ್ನಿತರ ವಿಷಯ ಕುರಿತು ಲೀಜ್ ಕೊಟ್ಟ ರೈತರಿಗೆ ಬಂದ್ ಮಾಡುವ ಅಧಿಕಾರ ಇಲ್ಲ. ಆದರೆ ಉದ್ದೇಶ ಪೂರ್ವಕವಾಗಿ ಕಂಪನಿಯವರೆ ರೈತರನ್ನು ಪ್ರಚೋದಿಸುತ್ತಿದ್ದರಿಂದ ಜಮೀನು ಲೀಜ್ ಕೊಟ್ಟ ರೈತರು ತಕರಾರು ಮಾಡಿತ್ತಿದ್ದಾರೆ. ಮೊದಲಿನಿಂದಲೂ ಇದೇ ದಾರಿಯನ್ನೆ ಬಳಸಿಕೊಂಡು ಇನ್ನುಳಿದ ರೈತರು ತಮ್ಮ ಹೊಲಗಳಿಗೆ ಹೋಗಿತ್ತಿದ್ದರು. ಆದರೆ ಈಗ ದಾರಿ ಬಂದ್ ಮಾಡಿದ್ದಾರೆಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಆದ್ದರಿಂದ ತಾಲೂಕಾಡಳಿತ ಮಧ್ಯ ಪ್ರವೇಶಿಸಿ ಜಮೀನುಗಳಿಗೆ ಹೋಗಲು ದಾರಿ ಬಿಡಿಸಿ ಕೊಡಬೇಕೆಂದು ಆಗ್ರಹಿಸಿದರು. ಫಲವತ್ತಾದ ಸುಮಾರು 270 ಎಕರೆಗಿಂತಲೂ ಹೆಚ್ಚಿನ ಜಮೀನನ್ನು ಲೀಜ್ ಹಾಕಿಕೊಂಡಿದ್ದಾರೆ. ನಿಯಮದ ಪ್ರಕಾರ ಫಲವತ್ತಾದ ಜಮೀನಿನಲ್ಲಿ ಯಾವುದೇ ಕಂಪನಿಗಳನ್ನು ಸ್ಥಾಪಿಸಬಾರದು ಆದರೆ ಪೋರ್ಥ್‌ ಪಾರ್ಟನರ ಎನರ್ಜಿ ಪ್ರೈವೇಟ್ ಲಿ. ಕಂಪನಿಯವರು ಕಾನೂನು ಬಾಹಿರವಾಗಿ ಸೋಲಾರ ವಿದ್ಯುತ್ ಪ್ಲ್ಯಾಂಟ್ ಸ್ಥಾಪಿಸಿದ್ದಾರೆ. ಕಾರಣ ಇಲ್ಲಿಂದ ಕಂಪನಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. 

ಧರಣಿಯಲ್ಲಿ ಜಗನ್ನಾಥ ಮಸರಕಲ್ಲ, ಸುರೇಶಬಾಬು ತಂಗಡಗಿ, ಪರಶುರಾಮ ಕತ್ನಳ್ಳಿ, ರಾಘವೇಂದ್ರ ಬಿಜಾಪೂರ, ಅಶ್ವಿನ್‌ಕುಮಾರ ಬೇದರಕರ, ರುಷಿಕೇಶ ಗೊಟಗುಂಡಕಿ, ದೇವರಾಜ ನಾಯಕಲ್, ರಾಜಶೇಖರ ಹಡಪದ, ಮಲ್ಲಣ್ಣ ಸಿಂಗನಹಳ್ಳಿ, ಮಾಳಪ್ಪ ಮಾಗಣಗೇರಿ, ಬಸಪ್ಪ ತಂಗಡಗಿ, ಮನೋಹರ ಕಟ್ಟಮಗಿ, ಸಾಯಬಣ್ಣ ಕದ್ದೇನಹಳ್ಳಿ, ವಿರೇಶ ಬಿದರಕುಂದಿ, ಶರಣಬಸು ಕಲಬುರ್ಗಿ, ಶಿವಾನಂದ ದೊಡಮನಿ, ದೇವೆಂದ್ರ ಚಲವಾದಿ, ಎಸ್‌.ಎಸ್‌. ಗೊಟಗುಂಡಕಿ, ಮಲ್ಲಣ್ಣ ಪತ್ತಾಪೂರ, ನಿಂಗನಗೌಡ ಹೆಮ್ಮಡಗಿ, ಕಮಲಾಬಾಯಿ ಮಸರಕಲ್ಲ, ಇಂದಿರಾಬಾಯಿ ಮಸರಕಲ್ಲ, ಲಕ್ಷ್ಮೀಬಾಯಿ ಮಸರಕಲ್ಲ ಸೇರಿದಂತೆ ಇತರರು ಇದ್ದರು. 



 


ಸುದ್ದಿ ಓದಿ