ಹಗರಿಬೊಮ್ಮನಹಳ್ಳಿ

ಮಲೇರಿಯಾ ಮುಕ್ತ ತಾಲೂಕು ನಿರ್ಮಾಣಕ್ಕೆ ಸಲಹೆ

ಮಲೇರಿಯಾ ಮುಕ್ತ ತಾಲೂಕು ನಿರ್ಮಾಣಕ್ಕೆ ಸಲಹೆ

ಹಗರಿಬೊಮ್ಮನಹಳ್ಳಿ 26: ಪಟ್ಟಣದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಶನಿವಾರ ಮಲೇರಿಯಾ ವಿರೋಧಿ ಮಾಸಾಚರಣೆಯ ಅಂಗವಾಗಿ ಮಾಧ್ಯಮದವರಿಗೆ ಏರಿ​‍್ಡಸಿದ್ದ ಕಾರ್ಯಗಾರಕ್ಕೆ ತಾಲೂಕು ವೈದ್ಯಾಧಿಕಾರಿ ಶಿವರಾಜ್ ಚಾಲನೆ ನೀಡಿದರು. 

ಕಾರ್ಯಕ್ರಮಕ್ಕೆ ಚಾಲನೆ  ನೀಡಿ ಮಾತನಾಡಿದ ಅವರು 2025ರ ವೇಳೆಗೆ ಜಿಲ್ಲೆ ಸೇರಿದಂತೆ ತಾಲೂಕನ್ನು ಮಲೇರಿಯಾ ಮುಕ್ತ ತಾಲೂಕು ಮಾಡುವ ಗುರಿ ಹೊಂದಲಾಗಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಅತ್ತಗತ್ಯ. ಸೊಳ್ಳೆಗಳಿಂದ ಅನೇಕ ಮಾರಕ ರೋಗಗಳು ಹರಡುತ್ತವೆ ಹಾಗಾಗಿ ಪ್ರತಿಯೊಬ್ಬರೂ ಮನೆಯ ಅಕ್ಕ ಪಕ್ಕ ನೀರು ಶೇಖರಿಸದಂತೆ ನೋಡಿಕೊಳ್ಳಬೇಕು, ಸಂಗ್ರಹಿಸಿದ ನೀರು 7ದಿನಗಳಿಗೊಮ್ಮೆ ಶೇಖರಿಸಿದ ನೀರನ್ನು ಸ್ವಚ್ಚಗೊಳಿಸಿ ಒಣಗಿಸಿ ಮತ್ತೆ ಬಳಸುವಂತೆ ತಿಳಿಸಿದರು.  

ಅರೆ ಬರೆ ಕಾಮಗಾರಿಗಳ ಕಟ್ಟಡಗಳಿಂದಲೂ ಅಲ್ಲಿ ಶೇಖರಿಸುವ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ, ಟಯರ್,ಬಳಸದ ಸಂಪುಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ನೀರು ಶೇಖರಿಸದಂತೆ ನೊಡಿಕೊಳ್ಳಬೇಕು ಸಾರ್ವಜನಿಕರು ಗ್ರಾಮ ಪಂಚಾಯತಿ,ಸ್ಥಳೀಯ ಮುಖಂಡರು,ಅರೋಗ್ಯ ಕಾರ್ಯಕರ್ತರೊಡನೆ ಸಹಕರಿಸಿ ಮಲೇರಿಯಾ ನಿಯಂತ್ರಣದ ವಿಧಾನಗಳನ್ನು ಸಕ್ರೀಯವಾಗಿ ಪಾಲಿಸಿದರೆ ಮಲೇರಿಯ ಸೇರಿದಂತೆ ಅನೇಕ ಮಾರಕ ರೋಗಗಳಿಂದ ಮುಕ್ತಿ ಪಡೆಯವಹುದಾಗಿದೆ ಎಂದರು. 

ಮುಖ್ಯ ವೈದ್ಯಾಧಿಕಾರಿ ಶಂಕರ ನಾಯ್ಕ್‌ ಮಾತನಾಡಿ ಅತೀ ಹೆಚ್ಚು ನೀರು ಶೇಖರಣೆ ಆಗುವ ಪ್ರದೇಶಗಳಲ್ಲಿ ಗಾಂಬುಶಯ್ ಮೀನುಗಳ ಸಹಾಯದಿಂದ ಸೋಳ್ಳೆಗಳ ಉತ್ಪತ್ತಿಯನ್ನು ತಡೆಯಬಹುದಾಗಿದೆ,ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿಡುವದರಿಂದ ಅನೇಕ ಮಾರಕ ರೋಗಗಳನ್ನು ಹತೋಟಿಗೆ ತರಬಹುದಾಗಿದ ಎಂದರು. 

ಈ ಸಂಧರ್ಭಧಲ್ಲಿ ಕಾರ್ಯನಿರತ ಪತ್ರ ಕರ್ತರ ಸಂಘದ ಅದ್ಯಕ್ಷ ಬುಡ್ಡಿ ಬಸವರಾಜ್,ಸೀನಿಯರ್ ಹೆಲ್ತ್‌ ಇನ್ಸಪೆಕ್ಟರ್ ಶಿವಲಿಂಗಪ್ಪ, ಎಂ.ಟಿ.ಸುರ್‌ವೈಸರ್ ಲಿಂಗನಗೌಡ ಸೇರಿದಂತೆ ತಾಲೂಕು ಕಾರ್ಯನಿರತ ಪತ್ರ ಕರ್ತರ ಸಂಘದ ಸದಸ್ಯರು ಭಾಗವಹಿಸಿದ್ದರು. 


ಸುದ್ದಿ ಓದಿ