ಮಹಾಂತ ಜೋಳಿಗೆ ವ್ಯಸನ ಮುಕ್ತ ಆಂದೋಲನ
ಮುಂಡಗೋಡ 03: ಭೂವಿಕಾಸ ಪ್ರತಿಷ್ಠಾನ(ರಿ.) ಆಶ್ರಯದಲ್ಲಿ ತಾಲೂಕಿನ ಕರಗಿನಕೊಪ್ಪದ ತಂದೆ ಬಸವ ತಾಯಿ ನೀಲಾ ಕೃಪಾ ನಿಲಯದಲ್ಲಿ ಧಾರವಾಡದ ತಿರುಮಲಕೊಪ್ಪದ ಯೋಗ ವಿದ್ಯಾಶ್ರಮದ ಪಂಚತಂತ್ರ ಗುರುಕುಲಂನ ಸಂಸ್ಥಾಪಕರು 6ನೇ ಇಂದ್ರಿಯ ತರಬೇತುದಾರರಾದ ಶ್ರೀಯರಿಸ್ವಾಮಿ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ಸೋಮವಾರ ಸಂಜೆ ಚಿಂತಕರ ಚಾವಡಿ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಮಹಾಂತ ಜೋಳಿಗೆ ವ್ಯಸನ ಮುಕ್ತ ಆಂದೋಲನದ ಕುರಿತು ಗೋಷ್ಠಿ ಜರುಗಿತು.
ಶ್ರೀ ಯರಿಸ್ವಾಮಿ ಗುರೂಜಿ ಅವರು ಆಶೀರ್ವಚನ ನೀಡಿದರು. ಮಹಾಂತ ಜೋಳಿಗೆಯ ಶಿವಶಿಲ್ಪಿಗಳೂ, ವ್ಯಸನ ಮುಕ್ತ ಆಂದೋಲನದ ಹರಿಕಾರರೂ ಆಗಿದ್ದ ಪರಮಪೂಜ್ಯ ಡಾ.ಮಹಾಂತ ಶಿವಯೋಗಿಗಳ ಕುರಿತು ಗೋಷ್ಠಿಯಲ್ಲಿ ಹಲವಾರು ಚಿಂತನಕಾರರು ಚಿಂತನೆ ನಡೆಸಿದರು. ಸಿಪಿಐ ಬಿ.ಎಸ್.ಲೋಕಾಪುರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಫೀಕ್ಸಾಬ್ ಮೀರಾನಾಯಕ ಮತ್ತು ಕರ್ನಾಟಕ ರಾಜ್ಯ ರೈತ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಅಕ್ಕಿ ಗೋಷ್ಠಿ ಪತಿಗಳಾಗಿ ಆಗಮಿಸಿದ್ದರು.
ಭೂವಿಕಾಸ ಪ್ರತಿಷ್ಠಾನದ ಅಧ್ಯಕ್ಷ ಮಹದೇಶ್ವರ ಲಿಂಗದಾಳ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ನಯನಾ ಕಾಮತ ಪ್ರಾರ್ಥಿಸಿದರು. ಬಸವರಾಜ ನಡುವಿನಮನಿ ಸ್ವಾಗತಿಸಿದರು. ವಿನಾಯಕ ಶೇಟ್ ಕಾರ್ಯಕ್ರಮ ನಿರೂಪಿಸಿದರು.