ಮನರಂಜನೆ

ಚರ್ಮದ ಬಣ್ಣ ಕುರಿತು ಲೇವಡಿ : ಪೊಲೀಸರಿಗೆ ದೂರಿತ್ತ ಬೆಂಗಾಲಿ ನಟಿ ಶ್ರುತಿ ದಾಸ್

ಚರ್ಮದ ಬಣ್ಣ ಕುರಿತು ಲೇವಡಿ : ಪೊಲೀಸರಿಗೆ ದೂರಿತ್ತ ಬೆಂಗಾಲಿ ನಟಿ ಶ್ರುತಿ ದಾಸ್

ಬೆಂಗಳೂರು, ಜುಲೈ 03:  ಚರ್ಮದ ಬಣ್ಣ ಕಪ್ಪು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದವರ ವಿರುದ್ಧ ಬೆಂಗಾಲಿ ನಟಿ ಶ್ರುತಿ ದಾಸ್ ಪೊಲೀಸರ ಮೊರೆ ಹೋಗಿದ್ದು, ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಾಲಿ ಧಾರಾವಾಹಿ 'ತ್ರಿನಯನಿ' ಮೂಲಕ 2019ರಲ್ಲಿ  ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರುತಿ ಕಪ್ಪು ಬಣ್ಣದ ಕಾರಣ ತುಂಬಾ ನಿಂದನೆಗೆ ಒಳಗಾಗಿರುವುದಾಗಿ ಹೇಳಿದ್ದಾರೆ. ತನ್ನ ವಿರುದ್ಧದ ದಾಳಿಗಳು ತೀರ ವೈಯಕ್ತಿಕವಾಗಿರುವ ಕಾರಣ ದೂರು ನೀಡುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದಿದ್ದಾರೆ.

"ಪ್ರಾರಂಭದಲ್ಲಿ ಎಲ್ಲರೂ ಟ್ರೋಲ್ ಗಳನ್ನು ನಿರ್ಲಕ್ಷ್ಯ ಮಾಡುವಂತೆ ಹೇಳಿದರು. ನಾನು ಕೂಡ ಹಾಗೆ ಮಾಡಿದೆ. ಆದರೆ ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ನನ್ನ ಪ್ರತಿಭೆ ಮತ್ತು ಪಾತ್ರದ ಬಗ್ಗೆ ಅಸಹ್ಯಕರ ಹೇಳಿಕೆಯನ್ನು ನೀಡುತ್ತಿದ್ದಾರೆ" ಎಂದು ದೂರಿದ್ದಾರೆ.

ಶ್ರುತಿ ದಾಸ್ ಸದ್ಯ 'ದೇಶರ್ ಮಾತಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸದ್ಯ ಆನ್ ಲೈನ್ ಮೂಲಕ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಕೆಟ್ಟದಾಗಿ ಬಂದ ಕಾಮೆಂಟ್, ಟ್ರೋಲ್ ಗಳನ್ನು ಸ್ಕ್ರೀನ್ ಶಾಟ್ ತೆಗೆದು ಸೈಬರ್ ಪೊಲೀಸರಿಗೆ ಕಳುಹಿಸಿದ್ದಾರೆ.

ಇನ್ನು ಧಾರಾವಾಹಿ ನಿರ್ದೇಶಕ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಅನೇಕರು ಟ್ರೋಲ್ ಮಾಡುತ್ತಿದ್ದರು ಎನ್ನುವ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಸ್ವರ್ಣೇಂದು ಸಮದ್ದಾರ್, "ಟ್ರೋಲ್ ಗಳ ಬಾಯಿ ಮುಚ್ಚಿಸಲು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ" ಎಂದಿದ್ದಾರೆ.

ಸುದ್ದಿ ಓದಿ