ಚಿತ್ರರಂಗಕ್ಕೆ ನಟಿ ಕಾರ್ತಿಕಾ ನಾಯರ್ ಗುಡ್ ಬೈ
ಚೆನ್ನೈ, ಜೂನ್ 26: ಖ್ಯಾತ ಹಿರಿಯ ನಟಿ ರಾಧಿಕಾ ಅವರ ಪುತ್ರಿ, ‘ಬೃಂದಾವನ’ ಚಿತ್ರದಲ್ಲಿ ದರ್ಶನ್ ಜತೆ ತೆರೆ ಹಂಚಿಕೊಂಡಿದ್ದ ಕಾರ್ತಿಕಾ ನಾಯರ್ ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ.
ದೊಡ್ಡ ಬ್ಯಾನರ್‌ನ ದೊಡ್ಡ ಬಜೆಟ್ ಸಿನಿಮಾದೊಟ್ಟಿಗೆ. ಹಲವು ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡು ಹಿಟ್ ಸಿನಿಮಾಗಳಲ್ಲಿ ಕಾರ್ತಿಕಾ ನಾಯರ್ ನಟಿಸಿದ್ದಾರೆ.
ನಾಗಾರ್ಜುನ ಪುತ್ರ ನಾಗಚೈತನ್ಯ ನಟನೆಯ ಮೊದಲ ಸಿನಿಮಾ 'ಜೋಷ್' ಮೂಲಕ ಭಾರಿ ಬಜೆಟ್‌ನ ಈ ಸಿನಿಮಾದಲ್ಲಿ ನಾಯಕಿಯಾಗಿದ್ದ ಕಾರ್ತಿಕಾ ಪ್ರತಿಭೆ ಗುರುತಿಸಿ ತಮಿಳಿನ 'ಕೋ' ಸಿನಿಮಾದಲ್ಲಿ ಪಾತ್ರ ನೀಡಲಾಯಿತು. ಆ ಸಿನಿಮಾ ಸಹ ಸೂಪರ್ ಡೂಪರ್ ಹಿಟ್ ಆಯಿತು.
ನಂತರ ಮಲಯಾಳಂನ 'ಮಕರಮಂಜು' ಸಿನಿಮಾದಲ್ಲಿ 'ಊರ್ವಶಿ'ಯ ಪಾತ್ರದಲ್ಲಿ ನಟಿಸಿದರು. ಆ ಸಿನಿಮಾದಲ್ಲಿನ ನಟನೆಗೆ ಕಾರ್ತಿಕಾಗೆ ಭಾರಿ ಪ್ರಶಂಸೆ ದೊರೆತಿತ್ತು. ನಂತರ ಮಲಯಾಳಂನ 'ಮಕರಮಂಜು' ಸಿನಿಮಾದಲ್ಲಿ 'ಊರ್ವಶಿ'ಯ ಪಾತ್ರದಲ್ಲಿ ನಟಿಸಿದರು. ಆ ಸಿನಿಮಾದಲ್ಲಿನ ನಟನೆಗೆ ಕಾರ್ತಿಕಾಗೆ ಭಾರಿ ಪ್ರಶಂಸೆ ದೊರೆತಿತ್ತು. ಆಸ್ಕರ್ ಪ್ರಶಸ್ತಿ ವಿಜೇತ ಡ್ಯಾನಿ ಬೋಯ್ಲ್ ಕಾರ್ತಿಕಾ ನಟನೆ ನೋಡಿ ಮೆಚ್ಚಿಕೊಂಡಿದ್ದರಂತೆ.
ನಂತರ ತೆಲುಗಿನ ಸೂಪರ್ ಸ್ಟಾರ್ ನಟ ಜೂ.ಎನ್‌ಟಿಆರ್ ಜೊತೆಗೆ 'ದಮ್ಮು' ಸಿನಿಮಾದಲ್ಲಿ ನಟಿಸಿದರು. ನಂತರ ಮಮ್ಮುಟಿ ಜೊತೆಗೆ ಮಲಯಾಳಂ ಸಿನಿಮಾ. ನಂತರ ಕನ್ನಡದಲ್ಲಿ ದರ್ಶನ್ ಜೊತೆಗೆ 'ಬೃಂದಾವನ' ಸಿನಿಮಾದಲ್ಲಿ ನಟಿಸಿದ್ದರು. 2016 ರಲ್ಲಿ ಅವರು ನಟಿಸಿದ್ದ ತಮಿಳಿನ 'ವಾ ದಿಲ್' ಅವರ ಕೊನೆಯ ಸಿನಿಮಾ ಆ ನಂತರ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ.
ಸೂಕ್ತ ಅವಕಾಶಗಳು ದೊರೆಯದೇ ಹೋದ ಕಾರಣಕ್ಕೆ ನಟನೆಗೆ ಗುಡ್‌ಬೈ ಹೇಳಿರುವ ನಟಿ ಕಾರ್ತಿಕಾ, Uday samudra leisure ಯುಟಿಎಸ್ ಗ್ರೂಫ್ ಆಫ್ ಹೋಟೆಲ್‌ನ ಮುಖ್ಯಸ್ಥೆಯೂ ಆಗಿರುವ ಹಿನ್ನೆಲೆಯಲ್ಲಿ ಉದ್ದಿಮೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.