ಮನರಂಜನೆ

ನಟ ರಜನಿಕಾಂತ್ ಗೆ ಅನಾರೋಗ್ಯ, ಅಪೋಲೋ ಆಸ್ಪತ್ರೆಗೆ ದಾಖಲು

ನಟ ರಜನಿಕಾಂತ್ ಗೆ ಅನಾರೋಗ್ಯ,  ಅಪೋಲೋ ಆಸ್ಪತ್ರೆಗೆ ದಾಖಲು

ಹೈದರಾಬಾದ್, ಡಿಸೆಂಬರ್ 25: ದಕ್ಷಿಣ ಭಾರತದ ಜನಪ್ರಿಯ ನಟ,  ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಶುಕ್ರವಾರ  ಹೈದರಾಬಾದಿನ  ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 ಅವರ ರಕ್ತದೊತ್ತಡದಲ್ಲಿ ಏರಿಳಿದ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರ ಕುಟುಂಬದ  ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದಷ್ಟೇ ರಜನಿಕಾಂತ್ ನಟನೆಯ 'ಅಣ್ಣಾತೆ' ಚಿತ್ರದ ಶೂಟಿಂಗ್ ಸೆಟ್ನಲ್ಲಿ ಎಂಟು ಮಂದಿಯಲ್ಲಿ ಕೊರೊನಾ  ಪಾಸಿಟಿವ್ ವರದಿಯಾಗಿತ್ತು.

ರಜನಿಕಾಂತ್ ಅವರ ಪರೀಕ್ಷೆಯಲ್ಲಿ   ನೆಗೆಟಿವ್  ಎಂದು ಬಂದಿದ್ದರೂ ಅವರ ರಕ್ತದೊತ್ತಡ ಮತ್ತು ಬಳಲಿಕೆ ಉಂಟಾದ ಕಾರಣ ಹೈದರಾಬಾದ್ನ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರ ತಂಡವು ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

'ರಜನಿಕಾಂತ್ ಅವರನ್ನು ಇಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಅವರು ಕಳೆದ ಹತ್ತು ದಿನಗಳಿಂದ ಸಿನಿಮಾ ಚಿತ್ರೀಕರಣಕ್ಕಾಗಿ ಹೈದರಾಬಾದ್ನಲ್ಲಿದ್ದಾರೆ. ಸೆಟ್ನಲ್ಲಿದ್ದ ಕೆಲವು ಮಂದಿಗೆ  ಕೊರೊನಾ  ಪಾಸಿಟಿವ್ ಬಂದಿದೆ. ರಜನಿಕಾಂತ್ ಅವರನ್ನು ತಪಾಸಣೆಗೆ ಒಳಗಾಗಿದ್ದು ಇದೆ  22ರಂದು ಅವರ ವರದಿ ನೆಗೆಟಿವ್ ಬಂದಿದೆ. ಅಂದಿನಿಂದ ಅವರು ಸ್ವಯಂ ಪ್ರತ್ಯೇಕವಾಗಿದ್ದು, ಅವರನ್ನು ತೀವ್ರವಾಗಿ ನಿಗಾದಲ್ಲಿ ಇರಿಸಲಾಗಿದೆ  ಎಂದು ಆಸ್ಪತ್ರೆ ಹೇಳಿಕೆ ತಿಳಿಸಿದೆ.

'ರಜನಿಕಾಂತ್ ಅವರಲ್ಲಿ ಕೊರೋನ ಸೋಂಕಿನ   ಯಾವುದೇ ಲಕ್ಷಣಗಳಿಲ್ಲದೆ ಹೋದರೂ ಅವರ ರಕ್ತದೊತ್ತಡದಲ್ಲಿ ತೀವ್ರ ಏರಿಳಿತಗ ಳುಂಟಾಗಿದೆ. ಅವರ ಆರೋಗ್ಯವನ್ನು ಹೆಚ್ಚು ತಪಾಸಣೆಗೆ ಒಳಪಡಿಸಬೇಕಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಕ್ತದೊತ್ತಡ ಸ್ಥಿರ ಸ್ಥಿತಿಗೆ ಬಂದು ಬಿಡುಗಡೆಯಾಗುವವರೆಗೂ ಅವರ ಆರೋಗ್ಯವನ್ನು ಸತತವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಆದರೂ  ಅವರ ಆರೋಗ್ಯ ಸ್ಥಿರವಾಗಿದೆ  ಎಂದೂ ಆಸ್ಪತ್ರೆ ಮೂಲಗಳು ಹೇಳಿವೆ. 

ಸುದ್ದಿ ಓದಿ