ಮನರಂಜನೆ

ಪುನೀತ್ ನಿವಾಸಕ್ಕೆ ನಟ ಅಕ್ಕಿನೇನಿ ನಾಗಾರ್ಜುನ್ ಭೇಟಿ

ಪುನೀತ್ ನಿವಾಸಕ್ಕೆ ನಟ ಅಕ್ಕಿನೇನಿ ನಾಗಾರ್ಜುನ್ ಭೇಟಿ

ಬೆಂಗಳೂರು, ನ. 02: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣದಿಂದ ಕಂಗೆಟ್ಟಿರುವ ಅವರ ಕುಟುಂಬಕ್ಕೆ ಹಿತೈಷಿಗಳು, ಗಣ್ಯರು ಸಾಂತ್ವನ ಹೇಳುತ್ತಿದ್ದಾರೆ.

ಇಂದು ನಟ ಅಕ್ಕಿನೇನಿ ನಾಗಾರ್ಜುನ್ ಅವರು ಪುನೀತ್ ನಿವಾಸಕ್ಕೆ ತೆರಳಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ ಹಾಗೂ ಪುತ್ರಿಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

ಶ್ರೇಷ್ಠ ಅಭಿನಯದ ಜತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಪುನೀತ್, ಬಹಳ ಬೇಗ ಇಹಲೋಕ ತ್ಯಜಿಸಿರುವುದು ತೀವ್ರ ದುಃಖಕ್ಕೆ ಕಾರಣವಾಗಿರುವುದಾಗಿ ನಾಗಾರ್ಜುನ್ ಸಂತಾಪ ವ್ಯಕ್ತಪಡಿಸಿದ್ದಾರೆ. 

ಸುದ್ದಿ ಓದಿ