ಇಂಡಿ

ಸಿದ್ದರಾಮಯ್ಯನವರು ಹೇಳಿಕೆ ಖಂಡಿಸಿ ಕಾರ್ಯಕರ್ತರ ಪ್ರತಿಭಟನೆ

ಸಿದ್ದರಾಮಯ್ಯನವರು ಹೇಳಿಕೆ ಖಂಡಿಸಿ ಕಾರ್ಯಕರ್ತರ ಪ್ರತಿಭಟನೆ

ಇಂಡಿ08:  ದಲಿತ ನಾಯಕರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲ ಎಸ್‌.ಸಿ ಮೋರ್ಚಾ ವತಿಯಿಂದ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಸೋಮವಾರ ನಡೆಸಿದರು. 

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, , ಭೀಮಸಿಂಗ ರಾಠೋಡ, ರಮೇಶ ಧರೆಣ್ಣನವರ ಮಾತನಾಡಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿ ಉನ್ನತ ಹುದ್ದೆಯಲ್ಲಿದ್ದುಕೊಂಡು ಸಿದ್ದರಾಮಯ್ಯನವರು ದಲಿತರ ಬಗ್ಗೆ ಈ ರೀತಿ ಹೆಳಿಕೆ ಕೊಡುವುದು ಎಷ್ಟು ಸರಿ? ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್  ಅವರನ್ನೇ ಕಾಂಗ್ರೇಸ್ ಪಕ್ಷ ಹೀನಾಯವಾಗಿ ನಡೆಸಿಕೊಂಡಿದೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದೆ. ಅವರ ಸಾವಿನಲ್ಲೂ ರಾಜಕಾರಣ ಮಾಡಿದೆ. ಈಗ ಸಿದ್ದರಾಮಯ್ಯನವರು ಮತ್ತೆ ದಲಿತರ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರೆ. ಇದರಿಂದ ಕಾಂಗ್ರೇಸ್ ಪಕ್ಷಕ್ಕೆ ದಲಿತರ ಮೇಲೆ ಎಷ್ಟು ಕಾಳಜಿ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾಂಗ್ರೇಸ್ ದಲಿತ ಜನಾಂಗವನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿದೆ. ಸಿದ್ದರಾಮಯ್ಯನವರು ಕೂಡಲೆ ಬಹಿರಂಗ ಕ್ಷಮೆ ಕೇಳಬೇಕು ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. 

ಬುದ್ದುಗೌಡ ಪಾಟೀಲ, ವಿಜಯಲಕ್ಷ್ಮೀ ರೂಗಿಮಠ, ಸುನಂದಾ ಮದರಿ, ಸಂಜು ದಶವಂತ, ಮಲ್ಲು ವಾಲೀಕಾರ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಗೋವಿಂದ ರಾಠೋಡ, ವಿಜು ರಾಠೋಡ, ರವಿ ವಗ್ಗೆ, ಯಲ್ಲು ಹದರಿ, ಸೋಮು ನಿಂಬರಗಿಮಠ, ಅದೃಷ್ಯಪ್ಪ ವಾಲಿ, ಸಂಜು ಮಲ್ಲಾಡೆ, ರಮೇಶ ರಾಠೋಡ, ವಿಠ್ಠಲ ಕಾಗರ, ಮೈಬೂಬ ಚೌಧರಿ ಸೇರಿದಂತೆ ಮತ್ತಿತರಿದ್ದರು. 


ಸುದ್ದಿ ಓದಿ