ಭಾರತದಲ್ಲಿ ಇಳಿಮುಖವಾಗಿ ಮುಂದುವರೆದ ಸಕ್ರಿಯ ಕೋವಿಡ್-19 ಪ್ರಕರಣಗಳು
ನವದೆಹಲಿ,
ಡಿಸೆಂಬರ್ 24: ದೇಶದಲ್ಲಿ ಸದ್ಯ, ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ 2,83,849 ರಷ್ಟಿದೆ
ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕೃತ ಮಾಹಿತಿ ತಿಳಿಸಿದೆ.
ಒಟ್ಟು ದೃಢಪಟ್ಟ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳು ಶೇ 2.80 ಕ್ಕೆ ಇಳಿದಿವೆ. ಕಳೆದ 24 ಗಂಟೆಗಳಲ್ಲಿ ದೃಢಪಟ್ಟ ಪ್ರಕರಣಗಳಿಗಿಂತ ಸಕ್ರಿಯ ಪ್ರಕರಣಗಳಲ್ಲಿ 5,391 ರಷ್ಟು ಕುಸಿತ ಕಂಡು ಬಂದಿದೆ.
ದೈನಂದಿನ ಚೇತರಿಕೆ ಪ್ರಮಾಣ ಸುಮಾರು ಒಂದು ತಿಂಗಳಿನಿಂದ ಹೊಸ ಪ್ರಕರಣಗಳಿಗಿಂತ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ, ದೇಶದಲ್ಲಿ ಕೇವಲ 24,712 ಜನರಲ್ಲಿ ಮಾತ್ರ ಕೋವಿಡ್-19 ಸೋಂಕು ದೃಢಪಟ್ಟಿದೆ.
ಇದೇ ವೇಳೇ 29,791 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕಳೆದ 11 ದಿನಗಳಿಂದ ಭಾರತದಲ್ಲಿ ನಿರಂತರವಾಗಿ 30,000 ಕ್ಕಿಂತ ಕಡಿಮೆ ಹೊಸ ಪ್ರಕರಣಗಳು ವರದಿಯಾಗುತ್ತಿವೆ.