ಬಳ್ಳಾರಿ

ಸಾಂಕ್ರಾಮಿಕ ರೋಗ ತಡೆಗೆ ಕ್ರಮ

ಸಾಂಕ್ರಾಮಿಕ ರೋಗ ತಡೆಗೆ ಕ್ರಮ

ಲೋಕದರ್ಶನ ವರದಿ 

ಕಂಪ್ಲಿ 01: ಪಟ್ಟಣದ 22ನೇವಾರ್ಡ್‌ ಎಂ.ಡಿ.ಕ್ಯಾಂಪಿನಲ್ಲಿ ಒಂದು ವಾರದಿಂದ ಸಾಂಕ್ರಾಮಿಕ ವೈರಲ್ ಜ್ವರ, ಟೈಫಾಯಿಡ್ ಮತ್ತು ಶಂಕಿತ ಡೆಂಗ್ಯುವಿನಿಂದ ಬಳಲುತ್ತಿರುವ ಹಿನ್ನಲೆಯಲ್ಲಿ, 22ನೇವಾರ್ಡಿನ ಪುರಸಭೆ ಸದಸ್ಯ ಅಂಜಿನೇಯ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಿ ನಂತರ ಮನವಿ ಮೇರೆಗೆ ಶುಕ್ರವಾರ ಪುರಸಭೆ, ಮುಖ್ಯಾಧಿಕಾರಿ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಯಾಂಪಿನ ಮನೆ ಮನೆಗೆ ಭೇಟಿ ನೀಡಿದ್ದರು.  


ಮನೆಮನೆಗೆ ತೆರಳಿ ಲಾರ್ವ ಸಮೀಕ್ಷೆ, ಸ್ವಚ್ಛತಾ ಕಾರ್ಯಕ್ರಮ ಹಾಗೂ ಕೊರೊನಾ ಲಸಿಕೆ ಅಭಿಯಾನ ಜರುಗಿತು. ಪುರಸಭೆ ಸದಸ್ಯ ಆರ್‌.ಆಂಜಿನೇಯ ಮಾತನಾಡಿ, ವಾರತ್ತು ದಿನಗಳಿಂದ ಎಂ.ಡಿ.ಕ್ಯಾಂಪಿನ ಬಹುತೇಕ ಮನೆಗಳಲ್ಲಿನ ಜನತೆ ವೈರಲ್‌ಜ್ವರ, ಟೈಫಾಯಿಡ್, ಶಂಕಿತ ಡೆಂಗ್ಯು ಮೊದಲಾದ ಸಾಂಕ್ರಮಿಕ ರೋಗಗಳಿಂದ ನರಳುತ್ತಿದ್ದಾರೆ. ಪುರಸಭಾಡಳಿತ ಸೊಳ್ಳೆ ನಿಯಂತ್ರಣಕ್ಕಾಗಿ ಬ್ಲೀಚಿಂಗ್ ಪೌಡರ್ ಎರಚುವಿಕೆ, ಧೂಮೀಕರಣ, ಚರಂಡಿ ಮತ್ತು ರಸ್ತೆ ಸ್ವಚ್ಚತೆ, ನಿತ್ಯ ಸಾಕಷ್ಟು ಪ್ರಮಾಣದಲ್ಲಿ ಶುದ್ಧ ಕುಡಿವ ನೀರು ಪೂರೈಸಬೇಕು. ಆರೋಗ್ಯ ಇಲಾಖೆ ಆರೋಗ್ಯ ಶಿಬಿರ ಏರಿ​‍್ಡಸಬೇಕು ಎಂದು ಒತ್ತಾಯಿಸಿದರು. ಆರೋಗ್ಯ ನೀರೀಕ್ಷಣಾಧಿಕಾರಿ ಎನ್‌.ಚನ್ನಬಸಪ್ಪ ಮಾತನಾಡಿ, ಸೊಳ್ಳೆ ಕಚ್ಚುವಿಕೆಯಿಂದ ಪಾರಾಗಲು ಸೊಳ್ಳೆ ಪರದೆ ಬಳಸಬೇಕು. ಬೇವಿನ ಎಲೆಯ ಹೊಗೆ ಹಾಕಬೇಕು. ಯಾವುದೇ ರೋಗಲಕ್ಷಣಪೀಡಿತರು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಶಿಸಿಕೊಂಡು ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಆಶಾ ಮತ್ತು ಆರೋಗ್ಯ ಸಿಬ್ಬಂದಿ ಮನೆಮನೆಗಳಿಗೆ ತೆರಳಿ ಲಾರ್ವ ಸಮೀಕ್ಷೆ ಮಾಡಿ ಆರೋಗ್ಯ ಜಾಗೃತಿ ಮೂಡಿಸಿದರು. ಪುರಸಭೆ ಮುಖ್ಯಾಧಿಕಾರಿ ಎನ್‌.ಶಿವಲಿಂಗಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ಆಶಾ ಕಾರ್ಯಕರ್ತೆಯರಾದ ಜೆ.ಮಹಾಲಕ್ಷ್ಮಿ, ಚಂದ್ರಲೇಖಾ ತಂಡಗಳವರಿದ್ದರು. 


ಸುದ್ದಿ ಓದಿ