ಕಲೆ ಕ್ರೀಡೆ, ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಗೈದ ದೈವಜ್ಞ ಬ್ರಾಹ್ಮಣ ಸಮಾಜದ ಸಾಧಕರನ್ನು ಗುರುತಿಸುವಂತಾಗಲಿ : ರಾಘವೇಂದ್ರ ಪಾಲನಕರ
ಲೋಕದರ್ಶನ ವರದಿ
ಗದಗ 17: ಕಳೆದ ಆರು ದಶಕಗಳಿಂದಲೂ ಗದಗ ಬೆಟಗೇರಿ ಅವಳಿ ನಗರದ ಪ್ರತಿಷ್ಠಿತ ಸಮುದಾಯವಾದ ದೈವಜ್ಞ ಬ್ರಾಹ್ಮಣ ಸಮಾಜದ ದೈವಜ್ಞ ಸಮಾಜ್ಯೋನ್ನತಿ ಸಂಘ (ರಿ), ದೈವಜ್ಞ ಯುವಕ ಮಂಡಳಿ, ದೈವಜ್ಞ ಮಹಿಳಾ ಮಂಡಳಿ, ಹಾಗೂ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಭಾಂಧವರ ಸಂಯುಕ್ತಾಶ್ರಯದಲ್ಲಿ ಅತೀ ವಿಜೃಂಭಣೆಯಿಂದ ಗದಗ ನಗರದ ಹಳೆ ಸರಾಫ್ ಬಜಾರನಲ್ಲಿರುವ ದೈವಜ್ಞ ಸಮಾಜ್ಯೋನ್ನತಿ ಸಂಘದ ಕಚೇರಿಯ ಆವರಣದಲ್ಲಿ ಸಾರ್ವಜನಿಕ ಗಜಾನನೋತ್ಸವದ ಆಚರಣೆಯನ್ನು ಹಮ್ಮಿಕೊಂಡು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜ್ಯೋನ್ಮುಖಿಯಾಗಿರುತ್ತದೆ.
ಕಳೆದ ಹಲವಾರು ವರ್ಷಗಳಿಂದ ಸೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಪ್ರತಿಭಾನ್ವಿತರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಅದರಂತೆ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು ವಿವಿಧ ಕ್ಷೇತ್ರಗಳಾದ ಕಲೆ, ಕ್ರೀಡೆ, ಸಾಹಿತ್ಯ, ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿ ಸಮಾಜಕ್ಕೆ ಕೀರ್ತಿಯನ್ನು ತಂದುಕೊಟ್ಟ ಸಾಧಕರನ್ನು ಕೂಡಾ ಗುರುತಿಸಿ ಗೌರವಿಸುವಂತಾದರೆ ಸಾಧನೆ ಮಾಡಿದ ಸಾಧಕರಿಗೂ ಪ್ರೋತ್ಸಾಹಿಸಿದಂತಾಗುತ್ತದೆ. ಹಾಗೂ ಸಮಾಜದ ಯುವ ಜನಸಾಮಾನ್ಯರನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಉತ್ಸಾಹಿಸಿದಂತಾಗುತ್ತದೆ.
ಆದುದರಿಂದ ದೈವಜ್ಞ ಸಮಾಜ್ಯೋನ್ನತಿ ಸಂಘದ ವತಿಯಿಂದ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು ವಿವಿಧ ಕ್ಷೇತ್ರಗಳಾದ ಕಲೆ, ಕ್ರೀಡೆ, ಸಾಹಿತ್ಯ, ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರನ್ನು ಶ್ರೀ ಗಜಾನನ ಉತ್ಸವದ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸುವಂತಾಗಲು ಸಂಘದ ಆಡಳಿತ ಮಂಡಳಿಯ ವತಿಯಿಂದ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಹಿತದೃಷ್ಟಿಯಿಂದ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.