ಎಸ್.ಕೆ.ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ತಾಳಿಕೋಟೆ: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಎಸ್.ಕೆ.ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 348 ವಿದ್ಯಾರ್ಥಿಗಳಲ್ಲಿ 303 ಉತ್ತೀರ್ಣರಾಗಿದ್ದು, ಕಾಲೇಜಿನ ಶೇಕಡಾವಾರು ಫಲಿತಾಂಶ ಶೇ. 87.06ದಾಖಲಾಗಿದೆ.
303 ವಿದ್ಯಾರ್ತಿಗಳಲ್ಲಿ 64 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 143 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 57 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ, 39 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿರುತ್ತಾರೆ. ಕಲಾ ವಿಭಾಗದಲ್ಲಿ ರಾಹುಲ ಮೋತಿಲಾಲ ರಾಠೋಡ 600 ಕ್ಕೆ 592 ಅಂಕಗಳು ಪಡೆದು ರಾಜ್ಯಕ್ಕೆ 2ನೇ ರಾ್ಯಂಕ ಪಡೆದಿರುತ್ತಾನೆ.
ಕಲಾ ವಿಭಾಗದಲ್ಲಿ ವಾತ್ಸಲ್ಯ ಗುಳೇದಗುಡ್ಡ 578(ಶೇ. 96.33) ಪ್ರಥಮ, ಹುಲಗಮ್ಮ ಗುಂತಗುಳೆ 576 (ಶೇ. 96.00) ದ್ವೀತಿಯ, ಲಕ್ಷ್ಮೀ ಯರನಾಳೆ 562(ಶೇ. 93.67) ತೃತೀಯ ಸ್ಥಾನ ಪಡೆದಿದ್ದಾರೆ.
ಶಿಕ್ಷಣ ವಿಭಾಗದಲ್ಲಿ ರಾಹುಲ ರಾಠೋಡ 592(ಶೇ. 98.66), ನಿರುಪಾದಿ ಹುಲಿಗುಡ್ಡ 580(ಶೇ. 96.66) ದ್ವೀತಿಯ, ಮೌನೇಶ ಚಳ್ಳಗಿ 558(ಶೇ. 96.00) ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಉಮಾದೇವಿ ಪೂಜಾರಿ 569(ಶೇ. 94.83) ಪ್ರಥಮ, ಪ್ರವೀಣ ಕೋರಿ 565(ಶೇ. 94.16) ದ್ವೀತಿಯ, ಸುನಂದಾ ಪಾಟೀಲ 558(ಶೇ. 93.16) ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸಿದ್ಧಲಿಂಗೇಶ ಯರನಾಳ 573(ಶೇ. 95.50) ಪ್ರಥಮ, ಸಂದ್ರಕುಮಾರಿ ರಾಜಪುರೋಹಿತ 561(ಶೇ. 93.50) ದ್ವೀತಿಯ, ಸಾವಿತ್ರಿ ಬಿರಾದಾರ 559 (ಶೇ. 93.16) ತೃತೀಯ ಸ್ಥಾನ ಪಡೆದಿದ್ದಾರೆ.
ಇತಿಹಾಸದಲ್ಲಿ 1, ಅರ್ಥಶಾಸ್ತ್ರದಲ್ಲಿ 1, ಸಮಾಜಶಾಸ್ತ್ರದಲ್ಲಿ 3, ರಾಜ್ಯಶಾಸ್ತ್ರದಲ್ಲಿ 1, ಶಿಕ್ಷಣಶಾಸ್ತ್ರದಲ್ಲಿ 6, ಭೌತಶಾಸ್ತ್ರದಲ್ಲಿ 1, ಗಣಿತದಲ್ಲಿ 1 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಎಸ್. ಕೆ. ಕಾಲೇಜಿನ ಚೇರಮನ್ನರು, ಉಪಸಮಿತಿ ಸದಸ್ಯರು ಮತ್ತು ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ರಾಹುಲ ರಾಠೋಡ
ವಾತ್ಸಲ್ಯ ಗುಳೇದಗುಡ್ಡ
ಉಮಾದೇವಿ ಪೂಜಾರಿ
ಸಿದ್ಧಲಿಂಗೇಶ ಯರನಾಳ