ಇತರಗಳು

ರಾಷ್ಟ್ರೀಯ ಈಜು ಸ್ಪಧರ್ೆಯಲ್ಲಿ ಜಿಐಟಿ ವಿದ್ಯಾಥರ್ಿಗಳ ಸಾಧನೆ

ರಾಷ್ಟ್ರೀಯ ಈಜು ಸ್ಪಧರ್ೆಯಲ್ಲಿ ಜಿಐಟಿ ವಿದ್ಯಾಥರ್ಿಗಳ ಸಾಧನೆ

ಲೋಕದರ್ಶನ ವರದಿ

ಬೆಳಗಾವಿ 28:  ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವಿದ್ಯಾಥರ್ಿನಿ ಕುಮಾರಿ. ಋತುಜಾ ವಿಶ್ವಾಸ್ ಪವಾರ ಅವರು ವಿ ಟಿ ಯು ಇತ್ತೀಚಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಆಲ್ ಇಂಡಿಯಾ ಅಂತರ ವಿಶ್ವವಿದ್ಯಾಲಯದ ಆಕ್ವಾಟಿಕ್ ಡೈವಿಂಗ್ ಸ್ಪಧರ್ೆಯಲ್ಲಿ ಭಾಗವಹಿಸಿ ಅಮೋಘ ಪ್ರದರ್ಶನವನ್ನು ತೋರಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. ಹಾಗೆಯೇ ಜಿಐಟಿಯ ಇನ್ನೋರ್ವ ವಿದ್ಯಾಥರ್ಿ ಪ್ರಣವ್ ಹಲಗೇಕರ ವಿಟಿಯು ಆಯೋಜಿಸಿದ್ದ  ಆಲ್ ಇಂಡಿಯಾ ಅಂತರ ವಿಶ್ವವಿದ್ಯಾಲಯದ ಆಕ್ವಾಟಿಕ್ ವಾಟರ್ ಪೋಲೊ ಸ್ಪಧರ್ೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.  

  ಕೆ ಎಲ್ ಎಸ ಸಂಸ್ಥೆಯ ಕಾರ್ಯಧ್ಯಕ್ಷ ಎಂ ಆರ್ ಕುಲಕಣರ್ಿ, ಜಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಯು ಏನ್ ಕಾಲಕುಂದ್ರಿಕರ್, ಪ್ರಾಚಾರ್ಯ ಡಾ. ಎ. ಎಸ. ದೇಶಪಾಂಡೆ, ದೈಹಿಕ ಶಿಕ್ಷಣ ವಿಭಾಗದ ಚೇರಮನ್ ಪ್ರೊ. ರಮೇಶ ಮೇದಾರ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಪಿ. ವಿ. ಕಡಗದಕೈ,  ಕ್ರಾಂತಿ ಕುರಣಕರ ಮತ್ತು ಎಲ್ಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಇವರಿಬ್ಬರನ್ನು ಅಭಿನಂದಿಸಿದ್ದಾರೆ.


ಸುದ್ದಿ ಓದಿ