ಮುಂದಗೋಡ

ಅಂದಲಗಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಅಂದಲಗಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಮುಂಡಗೋಡ 08: ತಾಲೂಕಿನ ಮಲವಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಚವಡಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅಂದಲಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಧನೆ ತೋರಿದ್ದಾರೆ.     

ಛದ್ಮವೇಷ ಸ್ಪರ್ಧೆಯಲ್ಲಿ ಭುವನ ಗುದಗಿ ಪ್ರಥಮ, ರಾಜಶೇಖರ ಗುದಗಿ ದ್ವಿತೀಯ, ಚಿತ್ರಕಲೆ ಸ್ಪರ್ಧೆಯಲ್ಲಿ ಶ್ರೀನಿವಾಸ ತಿರಕಣ್ಣನವರ ಪ್ರಥಮ, ತರುಣ ಸುಣಗಾರ ತೃತೀಯ, ಧಾರ್ಮಿಕ ಪಠಣ(ಸಂಸ್ಕೃತ) ಪುಷ್ಪಾ ತಿರಕಣ್ಣನವರ ಪ್ರಥಮ, ಅಪೇಕ್ಷಾ ಹಿರೇಮಠ ದ್ವಿತೀಯ, ಇಂಗ್ಲೀಷ ಕಂಠಪಾಠ ಪುಷ್ಪಾ ತಿರಕಣ್ಣನವರ ಪ್ರಥಮ, ಅಪೇಕ್ಷಾ ಹಿರೇಮಠ ತೃತೀಯ, ಧಾರ್ಮಿಕ ಪಠಣ(ಉರ್ದು) ಮೆಹಬೂಬ ಸ್ವಾದಿ ಪ್ರಥಮ, ಕಂಠಪಾಠ(ಹಿಂದಿ) ಸಂತೋಷ ಕೊಕರೆ ಪ್ರಥಮ, ಮಣ್ಣಿನ ಮಾದರಿ ತರುಣ ಸುಣಗಾರ ಹಾಗೂ ಗೌರವ ಚಿಗಪ್ಪನವರ ದ್ವಿತೀಯ ಸ್ಥಾನಗಳನ್ನು ಪಡೆದಿದ್ದಾರೆ.   

ಮುಖ್ಯ ಶಿಕ್ಷಕ ಸತೀಶ ಕಾನಡೆ, ಸಹ ಶಿಕ್ಷಕ ಮಲ್ಲಿಕಾರ್ಜುನ ಕಾರ್ಕಳ, ಎಮ್‌.ಜೆ.ನಾಯ್ಕ, ಶೀಲಾಕ್ಷಿ ಕಳಸಗೇರಿ, ಅತಿಥಿ ಶಿಕ್ಷಕಿ ದಾಕ್ಷಾಯಿಣಿ ಕೋನಕೇರಿ ಇದ್ದರು. 


ಸುದ್ದಿ ಓದಿ