ಪೋಕ್ಸೋ ಅಡಿಯಲ್ಲಿ ಬಂಧಿತನಾಗಿದ್ದ ಆರೋಪಿಗೆ ಶಿಕ್ಷೆ, ದಂಡ
ಮುಂಡಗೋಡ:ಪೋಕ್ಸೋ ಅಡಿಯಲ್ಲಿ ಬಂಧಿತನಾಗಿದ್ದ ತಾಲೂಕಿನ ಓರಲಗಿ ಗ್ರಾಮದ ಆರೋಪಿ ಶಿವಾನಂದ ಗೌಳೇರ ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ು ನೀಡಿದೆ.
2021ರ ಸೆ.16ರಂದು ಆರೋಪಿ ವೃದ್ಧ ಶಿವಾನಂದ ಗೌಳೇರ 9 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಬಾಲಕಿ ತಾಯಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೋಕ್ಸೋ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿಗೆ ನ್ಯಾಯಾಲಯ 20ವರ್ಷ ಶಿಕ್ಷೆ ಹಾಗೂ 1,20,000ರೂ. ದಂಡ ವಿಧಿಸಿ ತೀರ್ು ನೀಡಿದೆ. ನ್ಯಾಯಾಧೀಶ ಶಿವಾಜಿ ನಲವಾಡೆ ತೀರ್ು ನೀಡಿದ್ದು ಸ್ಪೆಶಲ್ ಪಿ.ಪಿ. ಶುಭಾ ಗಾಂವಕರ ಸರ್ಕಾರದ ಪರವಾಗಿ ವಾದಿಸಿದರು.