ದೇವಿಯ ಆಭರಣ ಕಳ್ಳತನ ಮಾಡಿದ ಆರೋಪಿ ಬಂಧನ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನ ಸನವಳ್ಳಿ ಗ್ರಾಮದ ಶ್ರೀಮಾರಿಕಾಂಬಾ ದೇವಸ್ಥಾನದ ದೇವಿಯ ಬಂಗಾರದ ಆಭರಣ ಕಳ್ಳತನ ಮಾಡಿದ ಆರೋಪಿಯನ್ನು ಇಲ್ಲಿನ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸನವಳ್ಳಿ ಗ್ರಾಮದ ಮಹಾಂತೇಶ ಆರೆಗೊಪ್ಪ ಬಂಧಿತ ಆರೋಪಿ. ದೇವಸ್ಥಾನದ ಗರ್ಭಗುಡಿಯ ಬಾಗಿಲಿಗೆ ಹಾಕಿದ ಚಾವಿಯನ್ನು ಒಡೆದು ತೆಗೆದು ಒಳಗೆ ಹೋಗಿ ದೇವಿಯ ಮೈಮೇಲೆ ಹಾಕಿದ ಒಟ್ಟು 40ಗ್ರಾಂ. ತೂಕದ ಎರಡು ಬಂಗಾರದ ಪದಕದ ಸರಗಳು ಮಂಗಳವಾರ ಕಳವು ಆದ ಬಗ್ಗೆ ಗ್ರಾಮದ ಆನಂದ ಜಮಖಾನವರ ಬುಧವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಾಗಿ 24ಗಂಟೆಗಳಲ್ಲಿ ಸ್ವತ್ತು ಸಮೇತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಭೇದಿಸಲು ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಪೆನ್ನೇಕರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಬದರಿನಾಥ, ಡಿಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಎಸ್.ಸಿಮಾನಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಎಸ್.ಎಸ್.ಸಿಮಾನಿ, ಪಿಎಸ್ಐ ಬಸವರಾಜ ಮಬನೂರ, ಎನ್.ಡಿ.ಜಕ್ಕಣ್ಣವರ, ಮಣಿಮಾಲನ್ ಮೇಸ್ತ್ರಿ, ಎಎಸ್ಐ ಹಾಗೂ ಸಿಬ್ಬಂದಿ ಗಣಪತಿ ಹುನ್ನಳ್ಳಿ, ಮಾರುತಿ ಮಾಲಗಿ, ಸಲೀಮ್, ಕೋಟೇಶ ನಾಗರವಳ್ಳಿ, ತಿರುಪತಿ ಚೌಡಣ್ಣನವರ, ಅಣ್ಣಪ್ಪ ಬುಡಿಗೇರ, ಬಸವರಾಜ ಲಮಾಣಿ, ವಿವೇಕ ಪಟಗಾರ, ಸಹದೇವಪ್ಪ ಕೊಡಣ್ಣವರ, ಶರತ ದೇವಳಿ ಇವರನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.