ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಸಂಕೇಶ್ವರ : ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿರುವ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾ್ ನಡೆದಿದೆ.
ಈ ಅಪಘಾತದಲ್ಲಿ ಅಪ್ಪಾಸಾಹೇಬ್ ಲಾಟ್ಕರ್ (60), ಸಾ: ಕಣಗಲಾ ಹಾಗೂ ಸುವರ್ಣ ಪಾಟೀಲ್ (62) (ಸಾ: ಮಾಂಗನೂರು) ಎಂದು ಗುರುತಿಲಾಗಿದೆ.
ಮೃತರಿಬ್ಬರೂ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅವರು ಹಿಟ್ನಿಯಿಂದ ಮಾಂಗನೂರಿಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಗುರುವಾರ ಗಣಗಲಾ ಬಳಿಯ ಹಿಟ್ನಿ ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ.