ಬಳ್ಳಾರಿ

ಅಪಘಾತವಾದಲ್ಲಿ ಮೊದಲ ಪ್ರತಿಕ್ರಿಯೆ ತರಬೇತಿ ಕಾರ್ಯಾಗಾರ

ಅಪಘಾತವಾದಲ್ಲಿ ಮೊದಲ ಪ್ರತಿಕ್ರಿಯೆ ತರಬೇತಿ ಕಾರ್ಯಾಗಾರ

ಬಳ್ಳಾರಿ: ರಾಯಚೂರು ಆರೋಗ್ಯ ತರಬೇತಿ ಸಂಸ್ಥೆಯ ವತಿಯಿಂದ ಜಿಲ್ಲೆಯ ಪೋಲಿಸ್, ಗೃಹರಕ್ಷಕ ದಳ, ಶಿಕ್ಷಣ ಇಲಾಖೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಅಪಘಾತವಾದಾಗ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಆರೋಗ್ಯ ಸೇವೆಗಳನ್ನು ಪ್ರಥಮ ಚಿಕಿತ್ಸೆ ಮೂಲಕ ಹೇಗೆ ನೀಡಬೇಕು ಎಂಬುದನ್ನು ಬಳ್ಳಾರಿ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಮೊದಲ ಪ್ರತಿಕ್ರಿಯೆ ತರಬೇತಿ ಕಾರ್ಯಾಗಾರವನ್ನು ಮಂಗಳವಾರ ಆಯೋಜಿಲಾಗಿತ್ತು. 

ಅಪಘಾತವಾದಾಗ ಹೆಲ್ಮೆಟ್ ತೆಗೆಯುವುದು, ಮುಳೆಗಳು ಮುರಿದಾಗ ಸುರಕ್ಷತೆ, ರಕ್ತಸ್ರಾವವಾದಾಗ ಸಂರಕ್ಷಣೆ, ಸಿಕ್ಕಿಹಾಕಿಕೊಂಡವರ ಹೊರತೆಗೆಯುವುದು, ಉಸಿರಾಟದ ಚಿಕಿತ್ಸೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು, ಇವುಗಳ ಅನುಸರಿಸುವಿಕೆಗೆ ನೀಡಬೇಕಾದ ಕೌಶಲ್ಯಗಳ ಕುರಿತು ಕಾರ್ಯಗಾರದಲ್ಲಿ ತರಬೇತಿ ನೀಡಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್‌.ಎಲ್ ಜನಾರ್ಧನ, ರಾಯಚೂರಿನ ಜಿಲ್ಲಾ ಆರೋಗ್ಯ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವೆಂಕಟೇಶ ನಾಯಕ, ಪ್ರಾಂಶುಪಾಲರು ಜಿಲ್ಲಾ ಆರೋಗ್ಯ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಗುರುನಾಥ ಬಿ.ಚೌವ್ಹಾಣ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಟರಾಜ, ಗೃಹ ರಕ್ಷಕದಳದ ಡೆಪ್ಯೂಟಿ ಕಮಾಂಡರ್ ಬಿ.ಆರ್‌.ಕಾಂಬ್ಲೆ ಗೃಹರಕ್ಷಕ ದಳ ಅಧಿಕಾರಿ ಸುರೇಶ್ ಸೇರಿದಂತೆ ಸಿಬ್ಬಂದಿಯವರು ಮತ್ತು ಕೌಶಲ್ಯ ಆಧಾರಿತ ತರಬೇತಿ ತಂಡದ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ